ಧಾರವಾಡ, [ಫೆ.05]: ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಗೃಹ ಸಚಿವ ಎಂ.ಬಿ. ಪಾಟೀಲ್ ಇದೀಗ ತಮ್ಮ ವರಸೆ ಬದಲಿಸಿದ್ದಾರೆ.

ಇಂದು [ಮಂಗಳವಾರ] ಧಾರವಾಡದಲ್ಲಿ ಮುರುಗಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳನ್ನ ಭೇಟಿ ಬಳಿಕ ಮಾತನಾಡಿದ ಪಾಟೀಲ್, ಹೋರಾಟಕ್ಕೆ ನಾನು ಅರ್ಹನಲ್ಲ. ನಾನು ಗೃಹಸಚಿವನಾಗಿರೋದ್ರಿಂದ ಹೋರಾಟದಲ್ಲಿ ಹಸ್ತಕ್ಷೇಪ ಮಾಡಲು ಬರೋದಿಲ್ಲ. ಕಾನೂನು ಮೂಲಕ ಹೋರಾಟ ನಡೆದಿದೆ. ಲಿಂಗಾಯತ ಧರ್ಮ ಬಸವಣ್ಣನವರ ಧರ್ಮ ಎಂದು ಹೇಳುವ ಮೂಲಕ ತಮ್ಮ ವರಸೆ ಬದಲಿಸಿದ್ದಾರೆ.

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೇಂದ್ರ ಸರ್ಕಾರ ಎಳ್ಳು ನೀರು..!

ಎಂ.ಬಿ. ಪಾಟೀಲ್‌ ಅವರು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿಯಲ್ಲಿದ್ದರು. ಹಲವು ಮಠಾಧೀಶರೊಂದಿಗೆ ಹೋರಾಟ ಮಾಡಿದ್ದ ಪಾಟೀಲ್ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಲ್ಲಿ ಯಶಸ್ವಿಯಾಗಿದ್ದರು.

ಲಿಂಗಾಯತ, ವೀರಶೈವ ಪ್ರತ್ಯೇಕ ಧರ್ಮವಿಲ್ಲ

ಆದರೆ, ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು.