Karnataka Politics : ನಾನು ಪ್ರಚಾರಕ್ಕಾಗಿ ರಾಜಕಾರಣಕ್ಕೆ ಬಂದವನಲ್ಲ : ಸಚಿವ ಗರಂ

  •  ನಾನು ಪ್ರಚಾರಕ್ಕಾಗಿ ರಾಜಕಾರಣಕ್ಕೆ ಬಂದವನಲ್ಲ 
  • ಜನರ ನೆಮ್ಮದಿ, ತಾಲೂಕಿನ ಅಭಿವೃದ್ಧಿಗೆ ಗಮನ ಹರಿಸಿ: ಸಚಿವ ನಾರಾಯಣಗೌಡ
     
Im Not a Show off  politician Says  Narayana Gowda snr

 ಕೆ.ಆರ್‌.ಪೇಟೆ (ಡಿ.28):  ಪ್ರಚಾರಕ್ಕಾಗಿ ನಾನು ರಾಜಕಾರಣಕ್ಕೆ (Politics)  ಬಂದವನಲ್ಲ. ನನಗೆ ಬೇಕಾಗಿರುವುದು ಜನರ ನೆಮ್ಮದಿ ಹಾಗೂ ತಾಲೂಕಿನ ಅಭಿವೃದ್ಧಿ. ಇದರ ಬಗೆಗಷ್ಟೆಅಧಿಕಾರಿಗಳು ಗಮನವನ್ನು ಹರಿಸಬೇಕು ಎಂದು ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ (Narayana Gowda) ಹೇಳಿದರು.  ಪಟ್ಟಣದ ಮಿನಿ ವಿಧಾನಸೌಧದಲ್ಲಿ ನೂತನ ತಹಸೀಲ್ದಾರ್‌ ರೂಪಾ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ನಾನು ಸಚಿವನಾದ ಆರಂಭದಲ್ಲಿಯೆ ಕೊರೋನಾ ಮಹಾಮಾರಿ ಬಂದಿದ್ದರಿಂದ ಉಸಿರಾಡಲು ಕೂಡಾ ಕಷ್ಟವಾಯಿತು ಎಂದರು.

ಕೊರೋನಾ (Corona) ವೇಳೆ ನನ್ನ ಮೇಲೆ ಜಿಲ್ಲೆಯ ರಾಜಕಾರಣಿಗಳು ಬಾಂಬೆಯಿಂದ ಜನರನ್ನು ಕರೆತಂದು ಕೊರೊನಾ ಹಬ್ಬಿಸಲು ಸಚಿವ ನಾರಾಯಣಗೌಡರೆ ಕಾರಣ ಅಂತ ಸುಳ್ಳು ಪ್ರಚಾರವನ್ನೆ ಮಾಡಿದರು. ಅದನ್ನೆಲ್ಲಾ ಸಮರ್ಥವಾಗಿ ಎದುರಿಸಿದೆ. ಆದರೀಗ ಮತ್ತೆ ಒಮಿಕ್ರೋನ್‌ (Omicron) ಹೆಸರಿನಲ್ಲಿ ಕೊರೋನಾ ಮತ್ತೆ ವ್ಯಾಪಕವಾಗಿ ಹರಡುವ ಮುನ್ಸೂಚನೆಯಿದೆ. ಇದನ್ನು ಎದುರಿಸಲು ತಾಲೂಕು ಆಡಳಿತ ಸಕಲ ರೀತಿಯಲ್ಲಿಯೂ ಸಜ್ಜುಗೊಳ್ಳಬೇಕು ಎಂದು ಸೂಚಿಸಿದರು.

ಸರ್ಕಾರ ಕೋವಿಡ್‌ (Covid)  ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಪೊಲೀಸ್‌ (Police)  ಇಲಾಖೆ ಕ್ರಮವಹಿಸಬೇಕು. ಯಾರಿಗೂ ಕೂಡಾ ನೈಟ್‌ ಕರ್ಫ್ಯೂ ಹಿಂಸೆ ಎಂದು ಅನ್ನಿಸಬಾರದು. ಎಲ್ಲರ ಪ್ರೀತಿವಿಶ್ವಾಸವನ್ನು ಗಳಿಸುವ ಮೂಲಕ ಕಾನೂನನ್ನು ಯಶಸ್ವಿಯಾಗಿ ಜಾರಿಗೊಳಿಸಬೇಕು ಎಂದರು.

ತಹಸೀಲ್ದಾರ್‌ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಜೊತೆಯಾಗಿ ಕರೆದೊಯ್ಯಬೇಕು. ನಾನು ಯಾವ ಅಧಿಕಾರಿಯನ್ನು ಕೂಡಾ ಪ್ರಶ್ನಿಸುವುದಿಲ್ಲ. ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸಮಾಡಿ. ನನಗೆ ಕೆಲವೊಂದು ಇಲಾಖೆಯ ಮೇಲೆ ಅಸಮಾಧಾನವಿದೆ. ಅದನ್ನು ಇಂತಹ ಸಭೆಗಳಲ್ಲಿ ಬಹಿರಂಗವಾಗಿ ಮಾತನಾಡುವುದಿಲ್ಲ. ಶೀಘ್ರದಲ್ಲೆ ತಹಸೀಲ್ದಾರ್‌ (Tahasildar) ಸಮ್ಮುಖದಲ್ಲಿ ಸಭೆ ನಡೆಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ ಎಂದು ಸಚಿವರು ಹೇಳಿದರು.

ಸಮಸ್ಯೆ ಬಗೆಹರಿಸುವಂತೆ ಜನರ ಮನವಿ:

ಸಭೆಗೆ ಆಗಮಿಸಿದ್ದ ಜಯನಗರ ಬಡಾವಣೆ ಚಾ.ಶಿ.ಜಯಕುಮಾರ್‌, ಶರತ್‌, ಪುರಸಭಾ ಸದಸ್ಯರಾದ ಎಚ್‌.ಆರ್‌.ಲೋಕೇಶ್‌, ಗಿರೀಶ್‌ ಅವರು ಬಡಾವಣೆಯು ವಿಸ್ತೀರ್ಣದಲ್ಲಿ ದೊಡ್ಡದಿದೆ. ಸುಮಾರು 6 ಸಾವಿರ ಜನರು ವಾಸಿಸುತ್ತಿದ್ದಾರೆ. ಬಡ ಮಧ್ಯಮ ವರ್ಗದ ಮಕ್ಕಳೆ ಹೆಚ್ಚಿದ್ದು ಪಟ್ಟಣದಲ್ಲಿರುವ ಇತರೆ ಶಾಲೆಗಳಿಗೆ ಜನಸಂದಣಿಯನ್ನು ದಾಟಿ ಹೋಗಬೇಕಿದೆ. ಅದ್ದರಿಂದ ಇಲ್ಲಿಗೆ ಕೆಪಿಎಸ್‌ ಮಾದರಿಯ ಶಾಲೆಯನ್ನು (School) ಮಂಜೂರು ಮಾಡಿಸುವಂತೆ ಕೋರಿದರು. ತಕ್ಷಣವೆ ಸಭೆಯಲ್ಲಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಅಗತ್ಯ ಕ್ರಮವನ್ನು ತೆಗೆದುಕೊಂಡು ಶಾಲೆ ಆರಂಭಕ್ಕೆ ತಯಾರಿ ನಡೆಸಿ ಎಂದು ಸೂಚಿಸಿದರು.

ಸಭೆಯಲ್ಲಿ ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್‌, ಜಿಪಂ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಷ್‌, ಪುರಸಭೆ ಮಾಜಿ ಅಧ್ಯಕ್ಷ ಕೆ.ಗೌಸ್‌ ಖಾನ್‌, ತಹಸೀಲ್ದಾರ್‌ ಎಂ.ವಿ.ರೂಪಾ, ತಾಪಂ ಇಒ ಎಚ್‌.ಎಚ್‌.ಚಂದ್ರಶೇಖರ್‌, ಪೊಲೀಸ್‌ ಇನ್ಸ್‌ಪೆಕ್ಟರ್‌ಗಳಾದ ಎಂ.ಕೆ.ದೀಪಕ್‌, ನಿರಂಜನ್‌, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು, ಚೆಸ್ಕಾಂ ಎಂಜಿನಿಯರ್‌ಗಳಾದ ಕೃಷ್ಣ, ರಾಜಶೇಖರ್‌, ತಾಲೂಕು ವೈದ್ಯಾಧಿಕಾರಿ ಮಧುಸೂದನ್‌, ವೈದ್ಯಾಧಿಕಾರಿ ಜಯಪ್ರಕಾಶ್‌ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಜನಪ್ರತನಿಧಿಗಳು ಬೀದಿಯಲ್ಲಿ ಓಡಾಡಲು ಆಗುತ್ತಿಲ್ಲ

ತಾಲೂಕಿನಲ್ಲಿ ಸಾವಿರಾರು ಮಂದಿಗೆ ವಿಧವಾ, ಅಂಗವಿಕಲ, ವೃದ್ಧಾಪ್ಯ ವೇತನಗಳು (Pension) ಕಳೆದ 10 ತಿಂಗಳಿನಿಂದ ಬರುತ್ತಿಲ್ಲ. ಇದರಿಂದಾಗಿ ಸ್ಥಳೀಯ ಮಟ್ಟದ ಜನಪ್ರತಿನಿಧಿಗಳಿಗೆ ಬೀದಿಯಲ್ಲಿ ಓಡಾಡಲು ಆಗುತ್ತಿಲ್ಲ. ಅಧಿಕಾರಿಗಳ ಮುಂದೆ ಎಷ್ಟೆಹೇಳಿದರೂ ಕೂಡಾ ಅರಣ್ಯರೋಧನವಾಗಿದೆ ಎಂದು ಕೆಲವು ಪುರಸಭಾ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಯಾಕೆ ಈ ರೀತಿಯ ಸಮಸ್ಯೆಯಾಗಿದೆ? ಎಂದು ತಹಸೀಲ್ದಾರ್‌ ಅವರನ್ನು ಪ್ರಶ್ನಿಸಿದ ಸಚಿವರು ಕೂಡಲೆ ಈ ಸಮಸ್ಯೆಯನ್ನು ಬಗೆಹರಿಸಿ ಎಂದು ತಾಕೀತು ಮಾಡಿದರು.

ನಾನು ರಾಜಕಾರಣವನ್ನು (Politics)  ಮಾಡುತ್ತೇನೆ. ನೀವು ಮಾಡುವುದು ಬೇಡ. ನನ್ನ ಜೊತೆಯಲ್ಲಿ ಕೈ ಜೋಡಿಸಿ ಜನರ ಮುಂದೆ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಡಿ. ನನ್ನ ಹೆಸರು ಹೇಳಿದರೂ ಕೂಡಾ ಕಾನೂನು ಬದ್ದವಾಗಿದ್ದರೆ ಮಾತ್ರ ಕೆಲಸ ಮಾಡಿ ಕೊಡಿ. ಕಾನೂನಿಗೆ ವಿರುದ್ದವಾದ ಕೆಲಸವನ್ನು ಮಾಡಿದರೆ ನೀವೆ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

Latest Videos
Follow Us:
Download App:
  • android
  • ios