ಜಿಲ್ಲಾಡಳಿತದಿಂದ ಶಾಕ್ : ನಲ್ಲಿಗಳ ತೆರವು ಕಾರ್ಯ
ಜಿಲ್ಲಾಡಳಿತದಿಂದ ಶಾಕ್ ನೀಡಲಾಗಿದ್ದು, ಮನೆಗಳ ಮುಂದೆ ಇರುವ ಅಕ್ರಮ ನಲ್ಲಿಗಳ ತೆರವು ಕಾರ್ಯ ಮಾಡಲಾಗುತ್ತಿದೆ.
ಚಿತ್ರದುರ್ಗ [ಡಿ.22] : ತೆರಿಗೆ ಪಾವತಿ ಮಾಡದೆಯೇ ಅಕ್ರಮವಾಗಿ ನೀರು ಪಡೆಯುತ್ತಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ನಿವಾಸಿಗಳಿಗೆ ಜಿಲ್ಲಾಡಳಿತ ಶಾಕ್ ನೀಡಿದೆ.
ಅಕ್ರಮ ನಲ್ಲಿ ಸಂಪರ್ಕಗಳ ಸಮೀಕ್ಷೆ ನಡೆಸಿ ಡಿ.31 ರೊಳಗೆ ವರದಿ ನೀಡುವಂತೆ ಜಿಲ್ಲೆಯ ಏಳು ನಗರಸ್ಥಳೀಯ ಸಂಸ್ಥೆಗಳಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶ ಸೂಚನೆ ನೀಡಿದ್ದು, ಸಿಬ್ಬಂದಿ ಬಡಾವಣೆ, ಬೀದಿಗಳ ಸುತ್ತಿ ಅಕ್ರಮಗಳ ಪಟ್ಟಿ ಮಾಡಿ, ಸಂಪರ್ಕ ಕಡಿತ ಮಾಡುತ್ತಿದ್ದಾರೆ.
ಮನೆ ಅಂಗಳದಲ್ಲಿ ಇರುವ ಅನಧಿಕೃತ ನಲ್ಲಿಗಳ ಕಡಿತಗೊಳಿಸಲು ನಗರಸಭೆ ಸಿಬ್ಬಂದಿಗಳು ಬೀದಿಗಿಳಿದಿದ್ದಾರೆ. ಈಗಾಗಲೇ 110 ಅಕ್ರಮ ನಲ್ಲಿಗಳ ಸಂಪರ್ಕ ಕಡಿತ ಮಾಡಲಾಗಿದೆ.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 25 ಸಾವಿರಕ್ಕೂ ಹೆಚ್ಚು ಅನಧಿಕೃತ ನಲ್ಲಿಗಳಿದ್ದು, ಇದರಿಂದ 25 ಕೋಟಿ ರು. ರಷ್ಟು ಬೃಹತ್ ಮೊತ್ತದ ಆದಾಯಕ್ಕೆ ಖೋತಾ ತಂದಿದೆ. ಈ ನಿಟ್ಟಿನಲ್ಲಿ ಈ ಎಲ್ಲಾ ಅಕ್ರಮ ನಲ್ಲಿಗಳನ್ನು ತೆರವು ಮಾಡಲಾಗುತ್ತಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದರಿಂದ ಹಲವು ಮನೆಗಳ ಎದುರಿನಲ್ಲಿರುವ ನಲ್ಲಿಗಳನ್ನು ತೆರವು ಮಾಡಿ ಅಕ್ರಮಕ್ಕೆ ಕಡಿವಾಣ ಹಾಕಲಾಗುತ್ತಿದೆ.