Asianet Suvarna News Asianet Suvarna News

ಕೊಪ್ಪಳ: ಗಣಿ ಸಚಿವ ಆಚಾರ್‌ ಸ್ವಕ್ಷೇತ್ರದಲ್ಲೇ ಎಗ್ಗಿಲ್ಲದೆ ನಡೀತಿದೆ ಅಕ್ರಮ ಮರಳುಗಾರಿಕೆ

*  ಅಧಿಕಾರಿಗಳು ಸ್ಥಳಕ್ಕೆ ಬರುತ್ತಿದ್ದಂತೆ ಮರಳು ತುಂಬುವವರು ಪರಾರಿ
*  ಅಕ್ರಮ ಮರಳುಗಾರಿಕೆಗೆ ಬಳಸುವ ವಾಹನಗಳ ಆರ್ಭಟಕ್ಕೆ ನಲುಗಿ ಹೋದ ಜನತೆ
*  ಕಕ್ಕರಗೋಳ ಮತ್ತು ನಂದಿಹಳ್ಳಿಯ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳುಗಾರಿಕೆ 
 

Illegal Sand Mining at Karatagi in Koppal grg
Author
Bengaluru, First Published Oct 4, 2021, 12:21 PM IST

ಕಾರಟಗಿ(ಅ.04):  ಗಣಿ ಸಚಿವ ಹಾಲಪ್ಪ ಆಚಾರ್‌(Halappa Achar) ಅವರ ಸ್ವಕ್ಷೇತ್ರದಲ್ಲೇ ಎಗ್ಗಿಲ್ಲದೆ ಅಕ್ರಮ ಮರಳುಗಾರಿಗೆ ನಡೆಯುತ್ತಿದೆ. ಜಿಲ್ಲೆಯ ಕಾರಟಗಿ ತಾಲೂಕಿನ ನದಿ ಪಾತ್ರದಲ್ಲಿ ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ, ಇದನ್ನು ತಡೆಗಟ್ಟುವುದು ಸ್ಥಳೀಯ ಅಧಿಕಾರಿಗಳಿಗೆ ದೊಡ್ಡ ತಲೆನೋವುವಾಗಿದೆ. ಅಧಿಕಾರಿಗಳು ಸ್ಥಳಕ್ಕೆ ತೆರಳುವ ಮುನ್ನವೇ ಮರಳುಗಳ್ಳರು ವಾಹನ ಜೊತೆಗೆ ಪರಾರಿಯಾಗುತ್ತಿದ್ದಾರೆ. ಹಾಗಾಗಿ ಅಕ್ರಮಕ್ಕೆ ಬ್ರೇಕ್‌ ಹಾಕಬೇಕಾದ ಅಧಿಕಾರಿಗಳು ಬೇಸತ್ತು ಹಿಂತಿರುಗುತ್ತಿದ್ದಾರೆ. 

ಕಾರಟಗಿ(Karatagi) ತಾಲೂಕಿನ ಹುಳ್ಕಿಹಾಳ ಗ್ರಾಮದಲ್ಲಿ ಮರಳು ಪ್ಲಾಂಟ್‌ ಇದ್ದರೂ ನಂದಿಹಳ್ಳಿ, ಕಕ್ಕರಗೋಳದ ನದಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು(Sand Mining) ತೆಗೆಯುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇನ್ನು ಈ ಮರಳು ಸಾಗಿಸುವ ವೇಳೆ ಟ್ರಾಕ್ಟರ್‌ಗಳನ್ನ ಯರ್ರಾಬಿರಿ ಚಲಾವಣೆ ನಡೆಸುವುದಲ್ಲದೆ, ಸ್ಥಳೀಯ ಗ್ರಾಮಸ್ಥರ ನಿದ್ದೆಗೆಡಿಸುತ್ತವೆ. ಹಗಲು, ರಾತ್ರಿ ಎನ್ನದೆ ಅಡ್ಡಾದಿಡ್ಡಿಯಾಗಿ ವಾಹನಗಳ ಓಡಾಟ ಜೋರಾಗಿ ಸದ್ದು ಮಾಡುತ್ತವೆ. ಇದರಿಂದ ಬೂದಗುಂಪಾ, ತಿಮ್ಮಾಪೂರ, ಹಾಲಸಮುದ್ರ, ನಂದಿಹಳ್ಳಿ, ಕಕ್ಕರಗೋಳ, ಊಳೇನುರು ಗ್ರಾಮಸ್ಥರು ಈ ಅಕ್ರಮ ಮರಳುಗಾರಿಕೆಗೆ ಬಳಸುವ ವಾಹನಗಳ ಆರ್ಭಟಕ್ಕೆ ನಲುಗಿ ಹೋಗಿದ್ದಾರೆ.

ರಾಜ್ಯದಲ್ಲಿ ಮರಳು ನೀತಿ ಕರಡು ಸಿದ್ಧ, ಶೀಘ್ರದಲ್ಲೇ ಜಾರಿ: ಆಚಾರ್‌

ಈಚೆಗೆ ಇನ್ನು ನದಿಪಾತ್ರಕ್ಕೆ ಕಾರಟಗಿ ಪಿಎಸ್‌ಐ ಯಲ್ಲಪ್ಪ, ಆರ್‌ಐ ಮರಳುಸಿದ್ದಪ್ಪ ಭೇಟಿ ನೀಡುತಿದ್ದಂತೆ ಅಕ್ರಮವಾಗಿ ಮರಳು ತುಂಬುತಿದ್ದ ಟ್ರ್ಯಾಕ್ಟರ್‌ಗಳ ಟ್ರಾಲಿಗಳನ್ನ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಇನ್ನು ಟ್ರ್ಯಾಕ್ಟರ್‌ಗಳಿಗೆ ಅಕ್ರಮವಾಗಿ ಮರಳು ತುಂಬುತಿದ್ದ ಯುವಕರು, ಮಹಿಳೆಯರು ಅಧಿಕಾರಿಗಳನ್ನ ನೋಡುತ್ತಲೆ ಅಲ್ಲಿಂದ ಪಲಾಯನವಾದರು.

ನದಿಯಲ್ಲಿ(River) ಟ್ರ್ಯಾಕ್ಟರ್‌ಗಳಿಗೆ ಮರಳು ತುಂಬುವ ಮಹಿಳೆಯರಿಗೆ ಹಾಗೂ ಯುವಕರನ್ನು ತರಾಟೆಗೆ ತಗೆದುಕೊಂಡ ಕಂದಾಯ ನಿರೀಕ್ಷಕ ಮರುಳಸಿದ್ದಪ್ಪ, ಇನ್ನೊಮ್ಮೆ ಅಕ್ರಮವಾಗಿ ಮರಳು ತುಂಬುವದು ಕಂಡುಬಂದಲ್ಲಿ. ಅಂತವರನ್ನು ಕೂಡಲೇ ವಶಕ್ಕೆ ಪಡೆದು ಸೂಕ್ತ ಕಾನೂನು ಶಿಕ್ಷೆಗೆ ಒಳಪಡಿಸುವುದಾಗಿ ಎಚ್ಚರಿಕೆ ನೀಡಿದರೂ ಸಹ ಅಕ್ರಮ ಮರಳುಗಾರಿಕೆ ಮಾತ್ರ ಇಂದಿಗೂ ಮಾತ್ರ ಈ ಮರಳುಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದ್ದು, ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕಕ್ಕರಗೋಳ ಮತ್ತು ನಂದಿಹಳ್ಳಿಯ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ಸಾಗಿಸುವವರನ್ನ ತಡೆಯಲು ನಮಗೆ ದೊಡ್ಡ ತಲೆನೋವಾಗಿದೆ, ಇವರ ಬಗ್ಗೆ ಸಾಕಷ್ಟು ಬಾರಿ ಪತ್ರದ ಮೂಲಕ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೆ ಪ್ರಯೋಜನೆಯಾಗುತ್ತಿಲ್ಲ, ಈ ಭಾಗದಲ್ಲಿ ಒಂದು ಮರಳಿನ ಪಾಯಿಂಟ್‌ ಮಾಡಲು ತಿಳಿಸಲಾಗಿದೆ. ಆದರೆ ಯಾಕೆ ಸುಮ್ಮನಿದ್ದಾರೆ ಅನ್ನೋದು ನಮಗೂ ತಿಳಿಯದಂತಾಗಿದೆ ಎಂದು ಕಂದಾಯ ನಿರೀಕ್ಷಕ ಮರಳುಸಿದ್ದಪ್ಪ ತಿಳಿಸಿದ್ದಾರೆ.  
 

Follow Us:
Download App:
  • android
  • ios