Asianet Suvarna News Asianet Suvarna News

ಬೆಳಗಾವಿ: ಸವದತ್ತಿ ಯಲ್ಲಮ್ಮನ ಜಾತ್ರೆಯಲ್ಲಿ ಮದ್ಯದ ಕಿಕ್‌..!

ತಂಪುಪಾನೀಯ ಮಾರಾಟ ಮಳಿಗೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ; ಭಕ್ತರ ಆಕ್ರೋಶ

Illegal Sale of Alcohol During Yallamma Devi Fair at Savadatti in Belagavi grg
Author
First Published Feb 5, 2023, 8:00 PM IST

ಜಗದೀಶ ವಿರಕ್ತಮಠ

ಬೆಳಗಾವಿ(ಫೆ.05):  ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ದಿಪಡೆದಿರುವ ಸವದತ್ತಿಯ ಶ್ರೀ ಯಲ್ಲಮ್ಮ ದೇವಿ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಅಷ್ಟೇ ಅಲ್ಲದೇ ಹೊರ ರಾಜ್ಯಗಳಿಂದಲೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದುಕೊಳ್ಳುತ್ತಾರೆ. ಆದರೆ ಯಲ್ಲಮ್ಮದೇವಿ ದರ್ಶನಕ್ಕೆ ಬರುವ ಭಕ್ತರಿಗೆ ದೇವಿಯ ಸನ್ನಿಧಾನದಲ್ಲಿಯೇ ಅಕ್ರಮವಾಗಿ ಮದ್ಯ ಮಾರಾಟ ದಂಧೆ ಜೋರಾಗಿದೆ.

ಭರತ ಹುಣ್ಣಿಮೆಯಂದು ಸವದತ್ತಿಯ ಶ್ರೀ ಯಲ್ಲಮ್ಮದೇವಿಯ ಜಾತ್ರೆ ಲಕ್ಷಾಂತರ ಭಕ್ತ ಸಮೂಹದ ಮಧ್ಯೆ ಅದ್ಧೂರಿಯಿಂದ ಜರುಗುತ್ತದೆ. ಈ ಜಾತ್ರೆಗೆ ಕರ್ನಾಟಕದ ಮೂಲೆಮೂಲೆಗಳಿಂದ ಮಾತ್ರವಲ್ಲದೇ, ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿ ಹೊರ ರಾಜ್ಯದಿಂದಲೂ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಈ ದೇವಿ ದರ್ಶನ ಪಡೆಯುವುದರಿಂದ ಕಷ್ಟ-ಕಾರ್ಪಣ್ಯ ದೂರ ಆಗುತ್ತವೆ ಎನ್ನುವ ನಂಬಿಕೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರ ದಂಡು ಜಾತ್ರೆಗೆ ಹರಿದು ಬರುತ್ತೆ. ಒಂದು ದಿನ ಮೊದಲು ಬಂದು ದೇವಿಗೆ ವಿಶೇಷ ಖಾದ್ಯಗಳನ್ನು ಸಿದ್ದಪಡಿಸಿ ನೈವೇದ್ಯ ಹಿಡಿದು ಜಾತ್ರೆ ಆಚರಿಸುವುದು ಸಂಪ್ರದಾಯ. ಆದರೆ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರನ್ನು ಗುರಿಯಾಗಿಸಿಕೊಂಡ ದಂಧೆಕೋರರು ಯಲ್ಲಮ್ಮದೇವಿಯ ದೇವಸ್ಥಾನದ ಆವರಣದಲ್ಲಿ ಹಾಕಿರುವ ಅಂಗಡಿ-ಮುಂಗಟ್ಟುಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದಲ್ಲದೇ, ಮದ್ಯ ಮಾರಾಟ ದಂಧೆಗೆ ಮಕ್ಕಳನ್ನು ಬಳಸಿಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಬೈಲಹೊಂಗಲ: ಅಂತಿಮಯಾತ್ರೆಗೂ ಸಿಗದ ದಾರಿ..!

ದೇಗುಲದ ಆಸುಪಾಸು ಅಂದಾಜು ಐವತ್ತಕ್ಕೂ ಹೆಚ್ಚು ಅಧಿಕ ಕೋಲ್ಡಿ್ರಂಕ್ಸ್‌ ಮಳಿಗೆಗಳನ್ನು ತೆರೆಯಲಾಗಿದೆ. ಈ ಮಳಿಗೆಗಳಲ್ಲಿ ಇದೀಗ ತಂಪು-ಪಾನನೀಯಗಳ ಜೊತೆ ಮದ್ಯ ಮಾರಾಟವೂ ಜೋರಾಗಿ ನಡೆಯುತ್ತಿದೆ. ಕೆಲವು ಅಂಗಡಿಗಳಲ್ಲಂತೂ ಒಳಗಡೆ ಬಾರ್‌ ಮಾದರಿಯ ಸಿದ್ಧತೆ ಮಾಡಿಕೊಂಡು ಅಲ್ಲಿಯೇ ಕುಡಿಯುವ ವ್ಯವಸ್ಥೆಯನ್ನು ಮಾಡಲಾಗಿದೆ. ಒಂದು ಕಡೆ ಅದ್ಧೂರಿಯಾಗಿ ಜಾತ್ರೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಜಾತ್ರೆಯಲ್ಲೇ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಜಾತ್ರೆಯ ಬಂದೋಬಸ್‌್ತಗಾಗಿ ಸಾಕಷ್ಟುಪೊಲೀಸರಬ್ಬು ನಿಯೋಜಿಸಲಾಗಿದೆ. ಅಲ್ಲದೇ ತಾಲೂಕು ಆಡಳಿತದ ಅಧಿಕಾರಿಗಳೂ ಗುಡ್ಡದಲ್ಲೇ ಬೀಡುಬಿಟ್ಟಿದ್ದಾರೆ. ಇವರ ಉಪಸ್ಥಿತಿಯಲ್ಲೂ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿ ಜನರ ನಿದ್ದೆಗೆಡಿಸಿದ ಏಕೈಕ ಬೀದಿ ನಾಯಿ, ಮಹಾನಗರ ಪಾಲಿಕೆ ವಿರುದ್ಧ ಜನರ ಅಸಮಾಧಾನ!

ಅಲ್ಲಲ್ಲಿ ಚಿಕ್ಕ ಮಕ್ಕಳು, ಮಹಿಳೆಯರೂ ಕೂಡ ಹಣ ಪಡೆದು ಟೆಟ್ರಾಪಾಕೇಟ್‌ಗಳನ್ನು ಮಾರಾಟ ಮಾಡುವ ದೃಶ್ಯ ಯಲ್ಲಮ್ಮನಗುಡ್ಡದಲ್ಲಿ ಸರ್ವೇ ಸಾಮಾನ್ಯವಾಗಿ ಕಂಡುಬರುತ್ತಿದೆ. ದೇವಿಯ ಭಂಡಾರ, ಪ್ರಸಾದ ಸಿಗಬೇಕಿದ್ದ ಜಾಗದಲ್ಲಿ ಇದೀಗ ಮದ್ಯ ಸಿಗುತ್ತಿದ್ದು ಅಬಕಾರಿ ಇಲಾಖೆ, ತಾಲೂಕು ಆಡಳಿತ ಹಾಗೂ ಪೊಲೀಸರೇ ಇದಕ್ಕೆ ನೇರ ಹೊಣೆಗಾರರು ಎಂದು ಸಾತ್ವಿಕ ಭಕ್ತರು ಆಕ್ರೋಶ ಹೊರಹಾಕಿದ್ದಾರೆ.

ಯಲ್ಲಮ್ಮನಗುಡ್ಡದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬರುತ್ತಿದ್ದಂತೆ ಜಾತ್ರೆ ಬಂದೂಬಸ್‌್ತಗೆ ನಿಯೋಜಿಸಿದ ಸಿಬ್ಬಂದಿ ಅಲ್ಲದೇ ಹೆಚ್ಚುವರಿಯಾಗಿ ಮೂವರು ಡಿಎಸ್‌ಪಿ ಸೇರಿದಂತೆ ಇನ್ನೀತರ ಅಧಿಕಾರಿಗಳನ್ನು ಈಗಾಗಲೇ ಕಳುಹಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಅಂತ ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ. 

Follow Us:
Download App:
  • android
  • ios