ಬೆಂಗಳೂರು [ಜ.25]:  ಬೆಂಗಳೂರು ಹೊರ ವಲಯದ ಕಾಡುಬೀಸನಹಳ್ಳಿ ಸಮೀಪ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ ಮಹಿಳೆಯನ್ನು ಮಾರತ್‌ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬಾಂಗ್ಲಾದೇಶದ ಬಾಗೇರ್‌ಹಟ್‌ ಜಿಲ್ಲೆಯ ಕೆಜುರ್‌ ಬರಿಯಾ ಗ್ರಾಮದ ನರ್ಗೀಸ್‌ ಬೇಗಂ (45) ಬಂಧಿತರು. ಅನುಮಾನಗೊಂಡು ಮಹಿಳೆಯನ್ನು ವಿಚಾರಿಸಿದಾಗ ಸಿಕ್ಕಿ ಬಿದ್ದಳು. ಈಕೆ ಬಳಿ ಭಾರತೀಯಳು ಎಂಬುದಕ್ಕೆ ಯಾವುದೇ ದಾಖಲೆಗಳು ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಕೆಲ ತಿಂಗಳ ಹಿಂದೆ ಮಹಿಳೆ ಬೆಂಗಳೂರಿಗೆ ಬಂದಿದ್ದು, ಕಾಡುಬೀಸನಹಳ್ಳಿಯ ನ್ಯೂ ಹೊರೈಜಾನ್‌ ಕಾಲೇಜು ಸಮೀಪದ ಜಮೀನಿನ ಜೋಪಡಿಯಲ್ಲಿ ನೆಲೆಸಿದ್ದರು. ಸ್ಥಳೀಯರು ಕೊಟ್ಟಮಾಹಿತಿ ಮೇರೆಗೆ ಪೊಲೀಸರು ಜೋಪಡಿಗೆ ತೆರಳಿ ಮಹಿಳೆಯನ್ನು ವಿಚಾರಣೆ ನಡೆಸಿದ್ದರು. 

ವೇಶ್ಯವಾಟಿಕೆ ದಂಧೆ: ಮೂವರು ಬಾಂಗ್ಲಾ ಪ್ರಜೆಗಳ ಅರೆಸ್ಟ್..

ಈ ವೇಳೆ ಮಹಿಳೆ ನಾನು ಬಾಂಗ್ಲಾದೇಶ ಪ್ರಜೆ. ಕೆಲ ತಿಂಗಳ ಹಿಂದೆ ಅಕ್ರಮವಾಗಿ ಗಡಿಯಿಂದ ಭಾರತ ಪ್ರವೇಶಿಸಿ ಬಳಿಕ ಅಲ್ಲಿಂದ ರೈಲು ಮೂಲಕ ಬೆಂಗಳೂರಿಗೆ ಬಂದು ನೆಲೆಸಿದ್ದೇನೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾಗಿ ಹೇಳಿಕೆ ನೀಡಿದ್ದಾಳೆ. ಮಹಿಳೆಯನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಮಂಗಳವಾರವಷ್ಟೇ ಬೆಂಗಳೂರಿನಲ್ಲಿ ಮೂವರು ಅಕ್ರಮ ಬಾಂಗ್ಲನ್ನರನ್ನು ಬಂಧಿಸಲಾಗಿತ್ತು.