ಬೆಂಗಳೂರು: ಹುಟ್ಟುಹಬ್ಬದ ದಿನವೇ ಐಐಎಂ ವಿದ್ಯಾರ್ಥಿ ಹಾಸ್ಟೆಲ್‌ನ 2ನೇ ಫ್ಲೋರಿಂದ ಬಿದ್ದು ಸಾವು
ಪ್ರತಿಷ್ಠಿತ ಸಿದ್ದ ಉಡುಪು ತಯಾರಿಕಾ ಕಂಪನಿಯಲ್ಲಿ ಪಟೇಲ್ ಕ್ಯಾಂಪಸ್ ಆಯ್ಕೆಯಾಗಿದ್ದು, ಇದೇ ಸೋಮವಾರದಿಂದ ಕೆಲಸಕ್ಕೆ ಸೇರಬೇಕಿತ್ತು. ಆದರೆ ವಿಧಿಯಾಟವೇ ಬೇರೆ ಇತ್ತು ಎಂದು ತಿಳಿಸಿದ ಪೊಲೀಸರು
ಬೆಂಗಳೂರು(ಜ.07): ತನ್ನ ಹುಟ್ಟುಹಬ್ಬ ದಿನವೇ ಕಾಲೇಜಿನ ಹಾಸ್ಟೆಲ್‌ನ 2ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ (ಐಐಎಂಬಿ) ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ. ಬನ್ನೇರುಘಟ್ಟ ರಸ್ತೆಯ ಐಐಎಂಬಿ ವಿದ್ಯಾರ್ಥಿ ನಿಲಯ್ ಕೈಲಾಸ್‌ಬಾಯ್ ಪಟೇಲ್ (28) ಮೃತಪಟ್ಟಿದ್ದು, 2 ದಿನಗಳ ಹಿಂದೆ ತನ್ನ ಸ್ನೇಹಿತರ ಜತೆ ಪಟೇಲ್ ಹುಟ್ಟುಹಬ್ಬದ ಸಂಭ್ರಮ ಮುಗಿಸಿದ ಬಳಿಕ ಈ ಅವಘಡ ಸಂಭವಿಸಿದೆ.
ಮೃತ ಪಟೇಲ್ ಮೂಲತಃ ಗುಜರಾತ್ ರಾಜ್ಯದ ಸೂರತ್‌ನವನಾಗಿದ್ದು, ಬನ್ನೇರುಘಟ್ಟ ರಸ್ತೆಯ ಐಐಎಂಬಿಯಲ್ಲಿ 2ನೇ ವರ್ಷದ ಸಾತ್ನಕೋತ್ತರ ವಿದ್ಯಾರ್ಥಿಯಾಗಿದ್ದ. ತನ್ನ ಹುಟ್ಟುಹಬ್ಬದ ನಿಮಿತ್ತ ಜ.4 ರಂದು ಸ್ನೇಹಿತರ ಜತೆ ಹೊರ ಹೋಗಿದ್ದ ಪಟೇಲ್, ನಂತರ ಪಾರ್ಟಿ ಮುಗಿಸಿಕೊಂಡು ಹಾಸ್ಟೆಲ್ ರೂಮಿಗೆ ಬಂದಿದ್ದು, ತದನಂತರ ಹಾಸ್ಟೆಲ್‌ನಲ್ಲಿ ಗೆಳೆಯನ ರೂಮಿಗೆ ಹೋಗಿ ಅಲ್ಲಿ ಕೇಕ್ ಕತ್ತರಿಸಿ ರಾತ್ರಿ ಮತ್ತೆ ತನ್ನ ರೂಮಿಗೆ ಪಟೇಲ್ ಮರಳಿದ್ದಾಗ 2ನೇ ಹಂತದ ಬಾಲ್ಕನಿಯಿಂದ ಆತ ಕಾಲು ಜಾರಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ತುಮಕೂರು: ಬೆಳ್ಳಂಬೆಳಗ್ಗೆ ಓಬಳಾಪುರ ಬಳಿ ಭೀಕರ ಅಪಘಾತ, ಸ್ಥಳದಲ್ಲೇ ಮೂವರ ದುರ್ಮರಣ
ಕೆಲಸಕ್ಕೆ ಹೋಗೋಕಿದ್ದವನ ಬದುಕಿನಲ್ಲಿ ವಿಧಿಯಾಟ!
ಪ್ರತಿಷ್ಠಿತ ಸಿದ್ದ ಉಡುಪು ತಯಾರಿಕಾ ಕಂಪನಿಯಲ್ಲಿ ಪಟೇಲ್ ಕ್ಯಾಂಪಸ್ ಆಯ್ಕೆಯಾಗಿದ್ದು, ಇದೇ ಸೋಮವಾರದಿಂದ ಕೆಲಸಕ್ಕೆ ಸೇರಬೇಕಿತ್ತು. ಆದರೆ ವಿಧಿಯಾಟವೇ ಬೇರೆ ಇತ್ತು ಎಂದು ಪೊಲೀಸರು ಹೇಳಿದ್ದಾರೆ.