Asianet Suvarna News Asianet Suvarna News

ಪ್ರತಿಭಾವಂತರನ್ನು ಪ್ರೋತ್ಸಾಹಿಸಿದರೆ ಭವಿಷ್ಯದಲ್ಲಿ ಮತ್ತಷ್ಟು ಸಾಧನೆ : ಒಕ್ಕಲಿಗರ ಸಂಘದ ಅಧ್ಯಕ್ಷ

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹ ನೀಡಿದರೆ ಅವರು ಭವಿಷ್ಯದಲ್ಲಿ ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ. ಅಣ್ಣೇಗೌಡ ಹೇಳಿದರು.

If talented people are encouraged, they will achieve more in the future: President of Okkaligara Sangh snr
Author
First Published Dec 14, 2023, 10:17 AM IST

-  ಕೆ.ಆರ್. ನಗರ :  ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹ ನೀಡಿದರೆ ಅವರು ಭವಿಷ್ಯದಲ್ಲಿ ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ. ಅಣ್ಣೇಗೌಡ ಹೇಳಿದರು.

ಪಟ್ಟಣದ ಎಚ್.ಡಿ. ದೇವೇಗೌಡ ಸಮುದಾಯ ಭವನದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಪ್ರತಿಭಾ ಪುರಸ್ಕಾರ ನೆರವೇರಿಸಿ ಅವರು ಮಾತನಾಡಿದ ಅವರು ಇಂತಹ ಪುರಸ್ಕಾರಗಳಿಂದ ವಿದ್ಯಾರ್ಥಿಗಳು ಸ್ಫೂರ್ತಿ ಗೊಂಡು ಉನ್ನತ ಸ್ಥಾನಕ್ಕೇರುವುದರ ಜತೆಗೆ ಇತರರಿಗೂ ಮಾದರಿಯಾಗುತ್ತಾರೆ ಎಂದರು.

ಉತ್ತಮ ಮತ್ತು ಉನ್ನತ ಶಿಕ್ಷಣ ಪಡೆದರೆ ಸಮಾಜದಲ್ಲಿ ಎಲ್ಲವನ್ನು ಸಾಧಿಸಲು ಸಾಧ್ಯವಾಗಲಿದ್ದು, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದು ಮನವಿ ಮಾಡಿದ ಅವರು, ನಮ್ಮ ಸಮಾಜದ ವಿದ್ಯಾರ್ಥಿಗಳು ಮುಗಿಲೆತ್ತರದ ಸಾಧನೆ ಮಾಡಬೇಕು ಎಂದು ಪ್ರೋತ್ಸಾಹದ ಮಾತುಗಳನ್ನಾಡಿದರು.

ಮಾಜಿ ಸಚಿವ ಸಾ.ರಾ. ಮಹೇಶ್ ಅವರ ಸಹಕಾರದಿಂದ ನಾವು ಜಿಲ್ಲೆಯಲ್ಲಿಯೇ ಉತ್ತಮವಾದ ಸಮುದಾಯ ಭವನ ನಿರ್ಮಾಣ ಮಾಡಿದ್ದು, ಅವರ ಸಹಾಯವನ್ನು ಒಕ್ಕಲಿಗ ಸಮಾಜ ಎಂದಿಗೂ ಮರೆಯುವುದಿಲ್ಲ ಎಂದ ಅವರು, ನಮಗೆ ಬೆನ್ನೆಲುಬಾಗಿ ನಿಂತ ಪ್ರತಿಯೊಬ್ಬರನ್ನು ನಾವು ಸದಾಕಾಲ ನೆನೆಯುತ್ತೇನೆ ಎಂದು ಹೇಳಿದರು.

ಒಕ್ಕಲಿಗರ ಸಮಾಜದ ಪ್ರತಿಭಾವಂತ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಅಣ್ಣಾಜಿಗೌಡ, ಹಿರಿಯ ಉಪಾಧ್ಯಕ್ಷ ಎಚ್.ಪಿ. ಪರಶುರಾಮು, ನಿರ್ದೇಶಕರಾದ ಎ.ಟಿ. ಸೋಮಶೇಖರ್, ಬಿ. ಸಿದ್ದೇಗೌಡ, ಎಸ್.ಟಿ. ಕೀರ್ತಿ, ಎಂ.ಜೆ. ಕುಮಾರ್, ಚಂದ್ರೇಗೌಡ ಸೇರಿದಂತೆ ಒಕ್ಕಲಿಗ ಸಮಾಜದ ಮುಖಂಡರು ಮತ್ತು ಸದಸ್ಯರು ಇದ್ದರು.

13,600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಡ್ರಾಪ್ ಔಟ್

ನವದೆಹಲಿ (ಡಿ.8): ಕಳೆದ ಐದು ವರ್ಷಗಳಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯಗಳು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಗಳಲ್ಲಿ ಮೀಸಲು ವರ್ಗಗಳ 13,600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಲೋಕಸಭೆಯಲ್ಲಿ ಬಿಎಸ್‌ಪಿ ಸದಸ್ಯ ರಿತೇಶ್ ಪಾಂಡೆ ಅವರ ಪ್ರಶ್ನೆಗೆ ಉತ್ತರವಾಗಿ ಕೇಂದ್ರ ರಾಜ್ಯ ಸಚಿವರು (ಶಿಕ್ಷಣ ) ಸುಭಾಸ್ ಸರ್ಕಾರ್ ಅವರು ಡೇಟಾವನ್ನು ಒದಗಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ, ಒಟ್ಟು 4,596 ಒಬಿಸಿ, 2,424 ಎಸ್‌ಸಿ ಮತ್ತು 2,622 ಎಸ್‌ಟಿ ವಿದ್ಯಾರ್ಥಿಗಳು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ (CUs) ತಮ್ಮ ಅಧ್ಯಯನದಿಂದ ಹಿಂದೆ ಸರಿದಿದ್ದಾರೆ. IIT ಗಳಲ್ಲಿ, ವಿದ್ಯಾರ್ಥಿಗಳ ಡ್ರಾಪ್ಔಟ್ ಪ್ರಮಾಣವು 2,066 OBC ಗಳು, 1,068 SC ಮತ್ತು 408 ST ವಿದ್ಯಾರ್ಥಿಗಳು, ಆದರೆ IIM ಗಳಲ್ಲಿ, ಅನುಗುಣವಾದ ಅಂಕಿಅಂಶಗಳು OBC, SC ಮತ್ತು ST ವಿದ್ಯಾರ್ಥಿಗಳಿಗೆ ಕ್ರಮವಾಗಿ 163, 188 ಮತ್ತು 91 ರಷ್ಟಿದೆ. ಶಿಕ್ಷಣ ಖಾತೆಯ ರಾಜ್ಯ ಸಚಿವ ಸುಭಾಸ್ ಸರ್ಕಾರ್ ಹೇಳುವ ಪ್ರಕಾರ "ಉನ್ನತ ಶಿಕ್ಷಣ ಕ್ಷೇತ್ರದಲ್ಲಿ, ವಿದ್ಯಾರ್ಥಿಗಳು ಬಹು ಆಯ್ಕೆಗಳನ್ನು ಹೊಂದಿದ್ದಾರೆ ಮತ್ತು ಅವರು ಒಂದೇ ಸಂಸ್ಥೆಯಲ್ಲಿ ಒಂದು ಕೋರ್ಸ್/ಪ್ರೋಗ್ರಾಂನಿಂದ ಇನ್ನೊಂದಕ್ಕೆ ವಲಸೆ ಹೋಗಲು ಆಯ್ಕೆ ಮಾಡುತ್ತಾರೆ" ಎಂದು ತಿಳಿಸಿದ್ದಾರೆ.

"ಮೈಗ್ರೇಷನ್‌/ವಿತ್‌ಡ್ರಾವಲ್‌, ಯಾವುದಾದರೂ ಇದ್ದರೆ, ಮುಖ್ಯವಾಗಿ ಇತರ ವಿಭಾಗಗಳಲ್ಲಿ ಅಥವಾ ಅವರ ಆಯ್ಕೆಯ ಸಂಸ್ಥೆಗಳಲ್ಲಿ ಅಥವಾ ಯಾವುದೇ ವೈಯಕ್ತಿಕ ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸೀಟುಗಳನ್ನು ಭದ್ರಪಡಿಸುತ್ತದೆ" ಎಂದು ಅವರು ಹೇಳಿದ್ದಾರೆ ಶಿಕ್ಷಣದ ಅನ್ವೇಷಣೆಯಲ್ಲಿ ಸೀಮಿತ ಆರ್ಥಿಕ ವಿಧಾನಗಳನ್ನು ಹೊಂದಿರುವ ವಿದ್ಯಾರ್ಥಿಗಳನ್ನು ಬೆಂಬಲಿಸಲು ಸರ್ಕಾರವು ಹಲವಾರು ಕ್ರಮಗಳನ್ನು ಜಾರಿಗೊಳಿಸುತ್ತದೆ. ಇದು ಶುಲ್ಕವನ್ನು ಕಡಿಮೆ ಮಾಡುವುದು, ಹೆಚ್ಚುವರಿ ಸಂಸ್ಥೆಗಳನ್ನು ಸ್ಥಾಪಿಸುವುದು, ವಿದ್ಯಾರ್ಥಿವೇತನವನ್ನು ಒದಗಿಸುವುದು ಮತ್ತು ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿವೇತನಗಳಿಗೆ ಆದ್ಯತೆಯ ಪ್ರವೇಶವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios