ಹಾಸನ [ಜ.25]: ಶುಕ್ರವಾರ ಹಾಸನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ನಾನಾ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆ ಮೇಲೆ ಚರ್ಚೆ ನಡೆಯುತ್ತಿತ್ತು. ಈ ವೇಳೆ ಎಚ್‌.ಡಿ.ರೇವಣ್ಣನವರು, ಹೇಮಾವತಿ ಜಲಾಶಯದ ವ್ಯಾಪ್ತಿಯ ನಾಲೆಗಳ ಅಭಿವೃದ್ಧಿ ಕಾಮಗಾರಿಗೆ ನೀಡಿದ್ದ ಹಣವನ್ನು ತಡೆ ಹಿಡಿಯಲಾಗಿದೆ. ಅದನ್ನು ಬಿಡುಗಡೆ ಮಾಡಿಸಬೇಕು ಎಂದರು.

ಆಗ ಮಾಧುಸ್ವಾಮಿ ಅವರು ಮಾತನಾಡಿ, ರೇವಣ್ಣ ನೀನು ಹೇಳಿದರೇ ಸಿಎಂ ಯಡಿಯೂರಪ್ಪನವರು ಅನುದಾನನೂ ಬಿಡುಗಡೆ ಮಾಡುತ್ತಾರೆ. ಎಲ್ಲಾ ಕೆಲ್ಸಗಳನ್ನು ಮಾಡಿಕೊಡ್ತಾರೆ ಎಂದು ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ಆಯ್ತು ಸ್ವಾಮಿ, ನಾನು ಸಿಎಂ ಸಾಹೇಬ್ರು ಹತ್ರ ಹೋಗುವಾಗ ನಿಮ್ಮನ್ನು ಕರ್ಕಂಡ್‌ ಹೋಗ್ತೀನಿ ಎಂದು ಹೇಳಿದಾಗ, ಮಾಧುಸ್ವಾಮಿ ಆಯ್ತು, ಆಯ್ತು ಎಂದು ನಗುತ್ತಲೇ ಹೇಳಿದರು.

'ಮಾಜಿ ಸಿಎಂ ಕುಮಾರಸ್ವಾಮಿಗೆ ಅಷ್ಟು ಶಕ್ತಿ ಇಲ್ಲ'

ಇನ್ನು ಒದೇ ವೇಳೆ ಸರ್ಕಾರ 2018ನೇ ಸಾಲಿಗೆ ನೀಡಿದ ಅನುದಾನವನ್ನು ನಾನಾ ಇಲಾಖೆ ಅಧಿಕಾರಿಗಳು ಪೂರ್ಣವಾಗಿ ಬಳಸಿಕೊಂಡಿಲ್ಲ. 

ಸಿಎಂ BSY ಚುನಾವಣಾ ನಿವೃತ್ತಿ ವಿಚಾರ ನನಗೆ ಗೊತ್ತಿಲ್ಲ : ಸಚಿವ ಮಾಧುಸ್ವಾಮಿ.

ಹೀಗಾದರೆ ಮುಂದಿನ 2019ನೇ ಆರ್ಥಿಕ ಸಾಲಿನಲ್ಲಿ ಹೊಸದಾಗಿ ಹೆಚ್ಚಿನ ಅನುದಾನ ಕೇಳಿವುದೇ ಹೇಗೆ? ಅನುದಾನ ಬಳಸದ ಅಧಿಕಾರಿಗಳು ಬೇಜವಾಬ್ದಾರಿ ಅಧಿಕಾರಿಗಳು. ಅವರಿಗೆ ನಾಚಿಕೆ ಆಗಬೇಕು ಎಂದು ಮಾಧುಸ್ವಾಮಿ ಅಸಮಾಧಾನ ಹೊರಹಾಕಿದರು.