ಪಿರಿಯಾಪಟ್ಟಣ (ಅ.29):  ಮಾಜಿ ಶಾಸಕರ ಅನುದಾನದ ಕಾಮಗಾರಿಗಳಿಗೆ ನಾನು ಚಾಲನೆ ನೀಡುತ್ತಿರುವುದಾಗಿ ಕೆಲ ವಿರೋಧಿಗಳು ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಅದು ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶಾಸಕ ಕೆ. ಮಹದೇವ್‌ ಸವಾಲು ಹಾಕಿದರು.

ಪಟ್ಟಣದ ಹೊರವಲಯದ ಹಜರತ್‌ ಬೋಲೆ ಬಾಲೆ ವಾಲಿ ಖಾದ್ರಿ ದರ್ಗಾದಲ್ಲಿ 45ಲಕ್ಷ ವೆಚ್ಚದ ನೂತನ ಅತಿಥಿಗೃಹ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಾನು ಶಾಸಕನಾಗಿ ಆಯ್ಕೆಯಾಗಿ ಎರಡೂವರೆ ವರ್ಷಗಳೇ ಕಳೆದವು, ಇಲ್ಲಿಯವರೆಗೂ ಹಿಂದಿನ ಶಾಸಕರ ಅನುದಾನ ಹಾಗೇ ಉಳಿದಿರುತ್ತದೆಯೆ ಎಂದು ಪ್ರಶ್ನಿಸಿ ವಿರೋಧ ಪಕ್ಷದವರು ನನ್ನ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಅದಕ್ಕೆ ಸರ್ಕಾರದಿಂದ ಹೆಚ್ಚು ಅನುದಾನ ತಂದು ನೂತನ ಕಾಮಗಾರಿಗಳನ್ನು ಆರಂಭಿಸುವುದರ ಮೂಲಕ ತಕ್ಕ ಉತ್ತರ ನೀಡುತ್ತಿದ್ದೇನೆ, ಸರ್ಕಾರ ಯಾವುದೇ ಇರಲಿ ತಾಲೂಕಿನ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ ಎಂದರು.

ಚುನಾವಣೆ ಬೆನ್ನಲ್ಲೇ ನಡೆದ ರಾಜಕೀಯ ಬೆಳವಣಿಗೆ : ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆ ...

ಜಾಮಿಯಾ ಮಸೀದಿ ಗುರುಗಳಾದ ಜಲೀಲ್ ಅಹ್ಮದ್‌, ಮುಖಂಡರಾದ ಮುಕ್ತಾರ್‌ ಪಾಷಾ, ರಫೀಕ್‌, ಅಮ್ಜದ್‌ ಪಾಷಾ, ಸೈಯದ್‌ ಇಲಿಯಾಸ್‌, ಮುಶೀರ್‌ ಖಾನ್‌, ಅಬ್ದುಲ್ ಅಜೀಜ್, ಅನ್ಸಾರ್‌, ಇಮ್ತಿಯಾಜ್ ಅಹ್ಮದ್‌, ಪುರಸಭಾ ಮುಖ್ಯಾಧಿಕಾರಿ ಚಂದ್ರಕುಮಾರ್‌ ಮತ್ತು ಸದಸ್ಯರು, ಅಲ್ಪಸಂಖ್ಯಾತ ಮುಖಂಡರು ಇದ್ದರು.