ಚಾಮರಾಜನಗರ(ಫೆ.07): ನಾನು ಮತ್ತೆ ಮುಖ್ಯಮಂತ್ರಿಯಾದರೆ ಉಪ್ಪಾರ ಜನಾಂಗವನ್ನು ಪರಿಶಿಷ್ಟವರ್ಗಕ್ಕೆ ಸೇರಿಸುವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಶ್ವಾಸನೆ ನೀಡಿದ್ದಾರೆ. ತಾಲೂಕಿನ ನಲ್ಲೂರು ಮೋಳೆ ಗ್ರಾಮದ ಮಲ್ಲಿಗಮ್ಮನ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಮಲ್ಲಿಗಮ್ಮನ ನೂತನ ವಿಗ್ರಹ ಪ್ರತಿಷ್ಠಾಪನೆ ಹಾಗೂ ನೂತನ ರಾಜಗೋಪುರ ಉದ್ಘಾಟನೆ ಮತ್ತು ಕಳಶ ಪ್ರತಿಷ್ಠಾಪನೆ, ಅಂಕ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾನು ಸಿಎಂ ಆಗಿದ್ದಾಗ ಉಪ್ಪಾರ ಅಭಿವೃದ್ಧಿ ನಿಗಮ ಸ್ಥಾಪನೆ, ಭಗೀರಥ ಜಯಂತಿಯನ್ಜು ಸರ್ಕಾರದಿಂದ ಆಚರಣೆ ಮಾಡಲು ಪ್ರಾರಂಭಿಸಿದೆ ಎಂದು ಹೇಳಿದ ಅವರು ಈ ಹಿಂದೆಯೂ ಉಪ್ಪಾರ ಜನಾಂಗ ಆಶೀರ್ವದಿಸಿದ್ದೀರಿ. ಮುಂದೆಯೂ ನನ್ನನ್ಮು ಆಶೀರ್ವದಿಸಿ. ಅನುಭವ ಮಂಟಪದಂತೆ ವಿಧಾನಸೌಧದಲ್ಲೂ ಸಾಮಾಜಿಕ ನ್ಯಾಯ ಸಿಗಬೇಕೆಂದು ಪುಟ್ಟರಂಗಶೆಟ್ಟಿಅವರಿಗೆ 2008ರಲ್ಲಿ ಟಿಕೆಟ್‌ ಕೊಡಿಸಿದೆ. ಅಂದು ವಿ. ಶ್ರೀನಿವಾಸಪ್ರಸಾದ್‌ ಅವರು ಸಿ. ಗುರುಸ್ವಾಮಿಗೆ ಟಿಕೆಟ್‌ ಕೊಡಬೇಕೆಂದು ಪಟ್ಟು ಹಿಡಿದಿದ್ದರು. ಆದರೆ, ನಾನು ಉಪ್ಪಾರ ಜನಾಂಗಕ್ಕೆ ಚಾಮರಾಜನಗರ ಇಲ್ಲವೇ ಅರಭಾವಿಯಲ್ಲಿ ಮಾತ್ರ ಟಿಕೆಟ್‌ ನೀಡುವ ಅವಕಾಶ ಇರುವುದರಿಂದ ಪುಟ್ಟರಂಗಶೆಟ್ಟಿಗೆ ಟಿಕೆಟ್‌ ಕೊಡಿಸಿದೆ ಎಂದು ನೆನಪಿಸಿಕೊಂಡರು.

ವಾರದ ಗಡುವು: ನಿರ್ಭಯಾ ಹಂತಕರ ಹೊಸ ಡೆತ್‌ವಾರಂಟ್‌ಗೆ ಅರ್ಜಿ!

ಉಪ್ಪಾರ ಮಹಸಭಾದ ಪುರುಷೋತ್ತಮನಂದಪುರಿ ಸ್ವಾಮೀಜಿ, ಸರಗೂರು ಅಯ್ಯನಮಠದ ಚಿನ್ನಸ್ವಾಮಿ, ಶಾಸಕ ಸಿ. ಪುಟ್ಟರಂಗಶೆಟ್ಟಿ, ಮಾಜಿ ಸಂಸದ ಆರ್‌. ಧ್ರುವನಾರಾಯಣ, ಮಾಜಿ ಸಂಸದ ಶಿವಣ್ಣ, ಮಾಜಿ ಶಾಸಕರಾದ ಎ.ಆರ್‌. ಕೃಷ್ಣಮೂರ್ತಿ, ಎಸ್‌. ಬಾಲರಾಜು, ಜಿಪಂ ಸದಸ್ಯರಾದ ಯೋಗೀಶ್‌, ಸದಾಶಿವಮೂರ್ತಿ, ಕಾವೇರಿ, ಡಿಸಿಸಿ ಜಿಲ್ಲಾಧ್ಯಕ್ಷ ಪಿ. ಮರಿಸ್ವಾಮಿ, ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ, ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ, ಇತರರು ಇದ್ದರು.