ನವದೆಹಲಿ[ಫೆ.07]: ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ನೇಣಿಗೇರಿಸುವ ಸಂಬಂಧ ಹೊಸದಾಗಿ ಡೆತ್‌ ವಾರಂಟ್‌ ಹೊರಡಿಸುವಂತೆ ಕೋರಿ ದೆಹಲಿಯ ತಿಹಾರ್‌ ಜೈಲಿನ ಅಧಿಕಾರಿಗಳು ಗುರುವಾರ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಈ ಸಂಬಂಧ ಶುಕ್ರವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ನಾಲ್ವರೂ ಅಪರಾಧಿಗಳಿಗೆ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರು ಸೂಚಿಸಿದ್ದಾರೆ. ಜ.23ರಂದು ನಿರ್ಭಯಾ ಹಂತಕರನ್ನು ಗಲ್ಲಿಗೇರಿಸಲು ನ್ಯಾಯಾಲಯ ಡೆತ್‌ ವಾರಂಟ್‌ ಹೊರಡಿಸಿತ್ತು. ಆದರೆ ಹಂತಕರು ಕಾನೂನು ಅಸ್ತ್ರ ಪ್ರಯೋಗಿಸಿದ ಹಿನ್ನೆಲೆಯಲ್ಲಿ ಫೆ.1ರ ಮುಹೂರ್ತ ನಿಗದಿಯಾಗಿತ್ತು.

ಆದರೆ ಹಂತಕರಿಗೆ ಕಾನೂನು ಮಾರ್ಗದಡಿ ಮತ್ತಷ್ಟುಅವಕಾಶವಿದ್ದ ಕಾರಣ ಜ.31ರಂದು ಆ ಡೆತ್‌ವಾರಂಟ್‌ಗೆ ನ್ಯಾಯಾಲಯ ತಡೆ ಕೊಟ್ಟಿತ್ತು.