ರಾಜ್ಯದ ಬಿಜೆಪಿ ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಕಾರಣವೇನು ?

ಚಿತ್ರದುರ್ಗ [ಸೆ.23]: ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆ ಮಾಡುವುದಿಲ್ಲ. ಮೀಸಲಾತಿ ಪಡೆಯುತ್ತಿರುವವರು ಯಾರೂ ಆತಂಕಕ್ಕೆ ಒಳಗಾಗುವುದು ಬೇಡ. 

ಒಂದು ವೇಳೆ ಪರಿಶಿಷ್ಟಜಾತಿ, ಪರಿಶಿಷ್ಟವರ್ಗಕ್ಕೆ ಯಾವುದೇ ತೊಂದರೆಯಾದರೂ ಮೊದಲು ರಾಜೀನಾಮೆ ನೀಡಿ ನ್ಯಾಯದ ಪರ ಹೋರಾಡುತ್ತೇನೆ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಹೇಳಿದ್ದಾರೆ. 

ಸೀಬಾರ ಸಮೀಪದ ಬಂಜಾರ ಗುರುಪೀಠದಲ್ಲಿ ಭಾನುವಾರ ರಾಜ್ಯಮಟ್ಟದ ಬಂಜಾರ ಯುವ ಚಿಂತನಾ ಸಭೆ,ನಿವೃತ್ತ ಯೋಧರಿಗೆ ಗೌರವ ಸಮರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾವಣೆ ಮಾಡಲು ಎಂದು ಕೆಲವರ ಅಪಪ್ರಚಾರಕ್ಕೆ ಯಾರೂ ಕಿವಿಗೊಡಬೇಡಿ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪರಿಶಿಷ್ಟಜಾತಿ, ಪರಿಶಿಷ್ಟವರ್ಗಕ್ಕೆ ಯಾವುದೇ ತೊಂದರೆಯಾದರೂ ಮೊದಲು ರಾಜೀನಾಮೆ ನೀಡಿ ನ್ಯಾಯದ ಪರ ಹೋರಾಡುತ್ತೇನೆ ಎಂದು ಹೇಳಿದರು.