Asianet Suvarna News Asianet Suvarna News

ಮಂಗಳೂರು ಬಾಂಬರ್ ಶರಣು: 8ನೇ ಎಸಿಎಂಎಂ ಕೋರ್ಟ್‌ಗೆ ಆರೋಪಿ ಹಾಜರ್

ಮಂಗಳೂರು ಬಾಂಬರ್ ಆದಿತ್ಯರಾವ್ ಶರಣು| ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ಪೊಲೀಸ್ ಸ್ಟೇಷನ್‌ ಗೆ ಅಗಮಿಸಿದ ಮಂಗಳೂರು ಪೊಲೀಸರು| 2018 ರಲ್ಲಿ ಏರ್ ಪೋರ್ಟ್ ಗೆ ಬಾಂಬ್ ಇಟ್ಟಿದ್ದೇನೆ ಎಂದು ಹುಸಿ ಬಾಂಬ್ ಕರೆ ಮಾಡಿದ್ದ ಆರೋಪಿ ಆದಿತ್ಯರಾವ್|ಹಿಂದಿನ ಪ್ರಕರಣದ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿರುವ ಮಂಗಳೂರು ಪೊಲೀಸರು|
 

Mangaluru Bomber Produce Before 8th ACMM Court in Bengaluru
Author
Bengaluru, First Published Jan 22, 2020, 1:18 PM IST

ಬೆಂಗಳೂರು[ಜ.22]: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯರಾವ್ ಪೊಲೀಸರಿಗೆ ಶರಣಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿ ಆದಿತ್ಯರಾವ್ ನನ್ನ ವಶಕ್ಕೆ ಪಡೆದುಕೊಳ್ಳಲು ಮಂಗಳೂರು ಪೊಲೀಸರು ನಗರದ ಕೆಂಪೇಗೌಡ ಅಂತರಾಷ್ಟ್ರೀಯ ಪೊಲೀಸ್ ಸ್ಟೇಷನ್‌ ಗೆ ಅಗಮಿಸಿದ್ದಾರೆ. 

"

ಕೆಲವೇ ಕ್ಷಣಗಳಲ್ಲಿ ಆರೋಪಿ ಆದಿತ್ಯರಾವ್ ನನ್ನ ಹಲಸೂರು ಗೇಟ್ ಪೊಲೀಸ್ ಗೆ ಕರೆದುಕೊಂಡು ಬರಲಿದ್ದಾರೆ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲೇ ಆದಿತ್ಯರಾವ್  ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಆರೋಪಿ ಆದಿತ್ಯರಾವ್ ನನ್ನ ವಶಕ್ಕೆ ಪಡೆಯಲು ಮಂಗಳೂರಿನಿಂದ ಎಸಿಪಿ ಬೆಳ್ಯಪ್ಪ ನೇತೃತ್ವ ತಂಡ ಆಗಮಿಸಿದೆ. 

ಮಂಗಳೂರು ಏರ್ಪೋರ್ಟ್‌ನಲ್ಲಿ ಸಜೀವ ಬಾಂಬ್ ಪತ್ತೆ!

ಮಂಗಳೂರು ಪೊಲೀಸರು ಕೆಂಪೇಗೌಡ ಅಂತರಾಷ್ಟ್ರೀಯ ಪೊಲೀಸ್ ಠಾಣೆಯಲ್ಲಿ ಆರೋಪಿ ಆದಿತ್ಯರಾವ್ ಬಗ್ಗೆ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. ಈ ಹಿಂದೆ 2018 ರಲ್ಲಿ ಏರ್ ಪೋರ್ಟ್ ಗೆ ಬಾಂಬ್ ಇಟ್ಟಿದ್ದೇನೆ ಎಂದು ಆರೋಪಿ ಆದಿತ್ಯರಾವ್ ಹುಸಿ ಬಾಂಬ್ ಕರೆ ಮಾಡಿದ್ದನು. ಹೀಗಾಗಿ ಹಿಂದಿನ ಪ್ರಕರಣದ ಬಗ್ಗೆಯೂ ಮಂಗಳೂರು ಪೊಲೀಸರು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. ಮಾಹಿತಿಗಾಗಿ ಏರ್ ಪೋರ್ಟ್ ಪೊಲೀಸ್ ಸ್ಟೇಷನ್ ಇನ್ಸ್ಪೆಕ್ಟರ್ ಜೊತೆ ಚರ್ಚೆ ನಡೆಸಿದ್ದಾರೆ.

"

ಮಂಗಳೂರು ವಿಮಾನ ನಿಲ್ದಾಣ ಬಾಂಬರ್ ಆರೋಪಿ ಪೊಲೀಸರಿಗೆ ಶರಣು

ಮಂಗಳೂರು ಪೊಲೀಸರಿಗೆ ಹಸ್ತಾಂತರಿಸುವ ಮುನ್ನ ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್ ಗೆ ಆರೋಪಿ ಆದಿತ್ಯರಾವ್ ನನ್ನ ಹಾಜರು ಪಡಿಸಲಿದ್ದಾರೆ . ಬಳಿಕವಷ್ಟೇ ಆರೋಪಿ  ಆದಿತ್ಯರಾವ್ ನನ್ನ ಮಂಗಳೂರು ಪೊಲೀಸರಿಗೆ ಹಸ್ತಾಂತರಗೊಳಿಸಲಿದ್ದಾರೆ ಎದಮು ತಿಳಿದು ಬಂದಿದೆ.  ಮೊದಲು ಆರೋಪಿ ಆದಿತ್ಯರಾವ್ ನನ್ನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸದೇ ನೇರವಾಗಿ ಪೊಲೀಸರಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದೇ ಹೇಳಲಾಗಿತ್ತು. 

Follow Us:
Download App:
  • android
  • ios