'ರೋಹಿಣಿ ಸಿಂಧೂರಿ ಬಹಿರಂಗ ಹೇಳಿಕೆ ಸರಿಯಲ್ಲ'
- ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ
- ಅಕ್ರಮಗಳ ವಿರುದ್ಧ ಕ್ರಮಕೈಗೊಳ್ಳಲು ಡೀಸಿಗಳಿಗೆ ಅಧಿಕಾರ ಇದೆ. ಅದು ಬಿಟ್ಟು ಪತ್ರಿಕಾಹೇಳಿಕೆ ನೀಡಿರುವುದು ಸರಿಯಲ್ಲ
- ಸಾರಾ ಮಹೇಶ್ ತಪ್ಪು ಮಾಡಿದ್ದರೆ ಕ್ರಮಕೈಗೊಳ್ಳಲಿ ಎಂದ ರಾಜ್ಯ ನೀತಿ ಆಯೋಗ ಉಪಾಧ್ಯಕ್ಷ
ಕೋಲಾರ (ಜೂ.12): ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ. ಅಕ್ರಮಗಳ ವಿರುದ್ಧ ಕ್ರಮಕೈಗೊಳ್ಳಲು ಡೀಸಿಗಳಿಗೆ ಅಧಿಕಾರ ಇದೆ. ಅದು ಬಿಟ್ಟು ಪತ್ರಿಕಾಹೇಳಿಕೆ ನೀಡಿರುವುದು ಸರಿಯಲ್ಲ. ಶಾಸಕ ಸಾರಾ ಮಹೇಶ್ ತಪ್ಪು ಮಾಡಿದ್ದರೆ ಕ್ರಮಕೈಗೊಳ್ಳಲಿ ಎಂದು ರಾಜ್ಯ ನೀತಿ ಆಯೋಗ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರು ಸುತ್ತ ಮುತ್ತ ಭೂ ಒತ್ತುವರಿ ಅಥವಾ ಅಕ್ರಮಗಳು ನಡೆದಿದ್ದರೆ ಅದನ್ನು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಅವುಗಳನ್ನು ತೆರವು ಮಾಡಿಸಬಹುದಿತ್ತು ಎಂದರು.
ನಾಯಕತ್ವ ಬದಲಾವಣೆ ಇಲ್ಲ : ಬೇಜವಾಬ್ದಾರಿಯುತ ವ್ಯಕ್ತಿಗಳು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಹೇಳಿಕೆ ನೀಡಿದ್ದಾರೆ. ಆ ನಾಯಕರ ವಿರುದ್ಧ ಪಕ್ಷದ ವರಿಷ್ಠರು ಕ್ರಮಕೈಗೊಳ್ಳಲಿದ್ದಾರೆ.
'ಶಿಲ್ಪಾ ನಾಗ್ ಹೆಗಲ ಮೇಲೆ ಬಂದೂಕು ಇಟ್ಟು ರೋಹಿಣಿ ಸಿಂಧೂರಿಗೆ ಶೂಟ್'
ನಾಯಕತ್ವ ಬದಲಾವಣೆ ಬಗ್ಗೆ ಈಗಾಗಲೇ ರಾಷ್ಟಿ್ರೕಯ ಮತ್ತು ರಾಜ್ಯಾಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿಗೆ ವಲಸೆ ಬಂದಿರುವವರಿಗೆ ಜವಾಬ್ದಾರಿ ಇಲ್ಲದಾಗಿದೆ ಎಂದು ದೂರಿದರು.
ಕೃಷ್ಣ ಬೈರೇಗೌಡರು ಮಾಡಿರ ಆರೋಪಕ್ಕೆ ಅವರು ದಾಖಲೆ ಕೊಡಲಿ. ಇಲ್ಲದಿದ್ದರೆ ಅವರ ಶಾಸಕ ಸ್ಥಾನಕ್ಕೆ ಶೋಭೆ ತರಲ್ಲ. ನಾನು ಸಹ ಅವರ ತಂದೆ ಬೈರೇಗೌಡರ ಜೊತೆ ಕೆಲಸ ಮಾಡಿರುವ ಅನುಭವ ಇದೆ. ಸರ್ಕಾರ ಯಾವ ವಿಚಾರದಲ್ಲಿ ಕಮಿಷನ್ ಪಡೆದುಕೊಂಡಿದೆ ಎಂಬುದಕ್ಕೆ ದಾಖಲೆ ಬಿಡುಗೆ ಮಾಡಿ ಗೌರವ ಉಳಿಸಿಕೊಳ್ಳಲಿ ಎಂದು ಹೇಳಿದರು.
ಕೆಸಿ ವ್ಯಾಲಿ ಎರಡನೇ ಹಂತದ ಟೆಂಡರ್ ಆಡಳಿತಾತ್ಮಕವಾಗಿ ವಿಳಂಬವಾಗಿದೆ. ಈ ವಿಚಾರದಲ್ಲಿ ವಿಜಯೇಂದ್ರ ಕಮಿಷನ್ ಪಡೆದುಕೊಂಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾದುದ್ದು ಎಂದರು.