Asianet Suvarna News Asianet Suvarna News

Family Politics ಅಂತ್ಯಕ್ಕೆ ಕಾನೂನು ತರಲಿ : ಎಚ್ . ಡಿ ರೇವ​ಣ್ಣ

  • ನಮ್ಮ ಪಕ್ಷದಲ್ಲಿ ಕುಟುಂಬ ರಾಜಕೀಯ ನಡೆಯುತ್ತಿದೆ ಎಂದು ರಾಷ್ಟ್ರೀಯ ಪಕ್ಷಗಳು ಆರೋಪಿಸಿವೆ
  • ಎಲ್ಲಾ ರಾಷ್ಟ್ರೀಯ ಪಕ್ಷದಲ್ಲೂ ಹಲವು ದಶಕದಿಂದ ಕುಟುಂಬ ರಾಜಕೀಯ ಇದೆ
  • ಕೊನೆಗಾಣಿಸಲು ರಾಷ್ಟ್ರೀಯ ಪಕ್ಷದ ನಾಯಕರೇ ಹೊಸ ಕಾನೂನು ತರಲಿ
i will support family politics ban law  HD Revanna Taunts national Parties snr
Author
Bengaluru, First Published Nov 23, 2021, 2:34 PM IST

ಹಾಸನ (ನ.23):  ನಮ್ಮ ಪಕ್ಷದಲ್ಲಿ ಕುಟುಂಬ ರಾಜಕೀಯ (Family Politics) ನಡೆಯುತ್ತಿದೆ ಎಂದು ರಾಷ್ಟ್ರೀಯ ಪಕ್ಷಗಳು (National parties) ಆರೋಪಿಸಿವೆ. ಆದರೆ, ಎಲ್ಲಾ ರಾಷ್ಟ್ರೀಯ ಪಕ್ಷದಲ್ಲೂ ಹಲವು ದಶಕದಿಂದ ಕುಟುಂಬ ರಾಜಕೀಯ ಇದೆ. ಇದನ್ನು ಕೊನೆಗಾಣಿಸಲು ರಾಷ್ಟ್ರೀಯ ಪಕ್ಷದ ನಾಯಕರೇ ಹೊಸ ಕಾನೂನು (law) ತರಲಿ. ಅದಕ್ಕೆ ನಮ್ಮ ಸ್ವಾಗತವಿದೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ (HD Revanna) ಚಾಟಿ ಬೀಸಿದರು. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜೆಡಿಎಸ್‌ನ (JDS) ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಕಾಂಗ್ರೆಸ್‌ ಪಕ್ಷ (Congress) ಎಂದರೆ ಇಂ​ದಿರಾ ಗಾಂಧಿ​(Indira Gandi), ರಾಜೀವ್‌ ಗಾಂಧಿ​ (Rajeev Gandhi), ಸಂಜಯ್‌ ಗಾಂ​ಧಿ (Sanjay Gandhi), ರಾಹುಲ್‌ ಗಾಂ​ಧಿ, ಪ್ರಿಯಾಂಕ ಗಾಂ​ಧಿ. ಇನ್ನು ಬಿಜೆಪಿಯಲ್ಲಿ (BJP) ಯಡಿಯೂರಪ್ಪ (BS Yediyurappa) ಅವರ ಮಕ್ಕಳು ರಾಜಕೀಯಕ್ಕೆ ಬಂದಿಲ್ಲವೇ ಎಂದು ಪ್ರಶ್ನೆ ಮಾಡಿದರು. 

ಕಾಂಗ್ರೆಸ್  ಹಾಗೂ ಬಿಜೆಪಿಯಲ್ಲಿರುವುದು ಕುಟುಂಬ ರಾಜಕಾರಣ ಅಲ್ಲವೇ? ನಾವೇನು ಹಿಂಬಾಗಿಲಿನಿಂದ ಬರುತ್ತಿದ್ದೇವಾ? ನಾವು ಚುನಾವಣೆಯಲ್ಲಿ (Election) ಸ್ಪರ್ಧಿಸಿಯೇ ಗೆದ್ದು ಬರುತ್ತಿದ್ದೇವೆ ಎಂದು ಮಾಜಿ ಸಚಿವ ಜೆಡಿಎಸ್  ಮುಖಂಡ ಎಚ್ ಡಿ ರೇವಣ್ಣ ಟಾಂಗ್‌ ನೀಡಿದರು.

ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದಲ್ಲಿರುವವರು ಜೆಡಿಎಸ್‌ನ ಪ್ರೊಡಕ್ಷನ್‌ (JDS Products) ಆಗಿದ್ದಾರೆ. ಪರಿಷತ್‌ ಚುನಾವಣೆಯಲ್ಲಿ (MLC Election) ನಾವು ಎರಡೂ ರಾಷ್ಟ್ರೀಯ ಪಕ್ಷಗಳನ್ನು (National Parties) ದೂರವಿಡಬೇಕು. ಎರಡೂ ರಾಷ್ಟ್ರೀಯ ಪಕ್ಷಗಳು ಈ ದೇಶಕ್ಕೆ ಒಂದು ರೀತಿಯಲ್ಲಿ ಕಂಟಕವಾಗಿವೆ ಎಂದರು.

ಸೂರಜ್ ರೇವಣ್ಣ ಎಂಟ್ರಿ :   ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿಕೊಟ್ಟಿದೆ. ಹಾಸನ (Hassan)ಸ್ಥಳೀಯ ಸಂಸ್ಥೆಗಳಿಂದ ನಡೆಯುವ ಚುನಾವಣೆಗೆ (MLC Election) ಜೆಡಿಎಸ್ ಅಭ್ಯರ್ಥಿಯಾಗಿ ಡಾ. ಸೂರಜ್ ರೇವಣ್ಣ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.

ಹಾಸನ ಕ್ಷೇತ್ರದಿಂದ ಜೆಡಿಎಸ್(JDS) ಅಭ್ಯರ್ಥಿಯಾಗಿ ಮಾಜಿ ಸಚಿವ ಎಚ್. ಡಿ. ರೇವಣ್ಣ ಪುತ್ರ ಡಾ. ಸೂರಜ್ ರೇವಣ್ಣ (Suraj Revanna) ಅಥವ ರೇವಣ್ಣ ಪತ್ನಿ ಭವಾನಿ ರೇವಣ್ಣ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಪಕ್ಷದ ವರಿಷ್ಠ ಎಚ್. ಡಿ. ದೇವೇಗೌಡರು ಅಭ್ಯರ್ಥಿ ಆಯ್ಕೆ ಬಗ್ಗೆ ಜಿಲ್ಲೆಯ ಶಾಸಕರ ಜೊತೆ ಸಭೆ ನಡೆಸಿದ್ದರು. ಕೆಲವು ಶಾಸಕರು ಸಹ ಡಾ. ಸೂರಜ್ ರೇವಣ್ಣಗೆ ಟಿಕೆಟ್ ನೀಡಬೇಕು ಎಂದು ಒತ್ತಾಯ ಮಾಡಿದ್ದರು. ಅಂತಿಮವಾಗಿ ಪಕ್ಷ ಸೂರಜ್ ರೇವಣ್ಣ ಅವರನ್ನು ಕಣಕ್ಕಿಳಿಸಲಾಗಿದೆ. ಈ ನಿಟ್ಟಿನಲ್ಲಿ ಇದೀಗ ಅನೆಕ ರೀತಿಯ ಚರ್ಚೆಗಳಾಗುತ್ತಿದೆ. 

ಜೆಡಿಎಸ್‌ನಲ್ಲಿ ದೇವೇಗೌಡರ ಕುಟುಂಬದ ಒಟ್ಟು 8 ಮಂದಿ ರಾಜಕೀಯದಲ್ಲಿ ಇದ್ದು  ರಾಜ್ಯದಲ್ಲಿ ಅನೇಕ ನಾಯಕರು ಈ ಬಗ್ಗೆ ವಾಕ್ ಪ್ರಹಾರ ನಡೆಸುತ್ತಿದ್ದಾರೆ. ಹೊಸದಾಗಿ ರೇವಣ್ಣ ಇಲ್ಲೋರ್ವ ಪುತ್ರ ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವುದು  ಕುಟುಮಬ ರಾಜಕಾರಣ ಹೇಳಿಕೆಗೆ ಇನ್ನಷ್ಟು ಪುಷ್ಠಿ ನೀಡಿದಂತಾಗಿದೆ. 

ಸಿದ್ದರಾಮಯ್ಯ ಲೇವಡಿ :  ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ (HD Devegowda) ಕುಟುಂಬದ ಮತ್ತೊಂದು ಕುಡಿ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಮತ್ತೊಬ್ಬ ಪುತ್ರ ಸೂರಜ್‌ ರೇವಣ್ಣ  (Sooraj Revanna) ವಿಧಾನ ಪರಿಷತ್‌ ಚುನಾವಣೆಯಲ್ಲಿ ಹಾಸನದಿಂದ  (Hassan) ಕಣಕ್ಕಿಳಿದಿದ್ದಾರೆ.   ಮಾಜಿ ಪ್ರಧಾನಿ ದೇವೇಗೌಡರು ಇಳಿ ವಯಸ್ಸಿನಲ್ಲೂ ರಾಜಕೀಯದಲ್ಲಿ (Politics)  ಸಕ್ರಿಯರಾಗಿದ್ದಾರೆ. ಅವರ ಪುತ್ರರೂ ರಾಜಕೀಯ ಕಣದಲ್ಲಿದ್ದಾರೆ. ಎಚ್‌.ಡಿ.ರೇವಣ್ಣ ರಾಜಕೀಯದಲ್ಲಿದ್ದಾರೆ. ಇನ್ನು ಅವರ ಪತ್ನಿ ಭವಾನಿ ರೇವಣ್ಣ ಹಾಸನ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿದ್ದರು. ಎರಡನೇ ಪುತ್ರ ಪ್ರಜ್ವಲ್‌ ರೇವಣ್ಣ ಹಾಸನದಿಂದ ಸಂಸದರಾಗಿದ್ದರೆ, ಈಗ ಸೂರಜ್‌ ವಿಧಾನ ಪರಿಷತ್‌ ಚುನಾವಣೆಗೆ ಕಣಕ್ಕಿಳಿಯುವ ಮೂಲಕ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.  'ಇಡೀ ದೇಶದಲ್ಲಿ ಒಂದೇ ಕುಟುಂಬದ ಎಂಟು ಜನರು ರಾಜಕಾರಣದಲ್ಲಿರುವ ಏಕೈಕ ಕುಟುಂಬವೆಂದರೆ ಅದುವೇ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬ'  ಇದು ಜೆಡಿಎಸ್‌ ಅಲ್ಲ, ಜೆಡಿಎಸ್ ಎಫ್ ಎಂದು ಮಾಜಿ ಪ್ರಧಾನಿ ಸಿದ್ದರಾಮಯ್ಯ ಹೇಳಿದ್ದಾರೆ.

Follow Us:
Download App:
  • android
  • ios