‘ಎಲ್ಲಾ ಪಕ್ಷಕ್ಕೂ ಹೋಗಿ ಬಂದಿದ್ದೇನೆ : ಈಗೆಲ್ಲೂ ಹೋಗಲ್ಲ’

ನಾನು ಈಗಾಗಲೇ ಹಲವು ಕಡೆ ಹೋಗಿ ಬಂದಿದ್ದೇನೆ ಇನ್ನೆಲ್ಲಿಯೂ ಹೋಗಲ್ಲ ಎಂದು ಜೆಡಿಎಸ್ ಮುಖಂಡರೋರ್ವರು ಹೇಳಿದ್ದಾರೆ. 

I Will Stay in JDS Says Former MP Shivaramegowda

 ಮಂಡ್ಯ [ಸೆ.22]:  ನಾನು ಎಲ್ಲಾ ಪಕ್ಷಗಳಿಗೆ ಹೋಗಿ ಬಂದಿದ್ದೇನೆ. ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಮಂಡ್ಯದ ಮಾಜಿ ಸಂಸದ ಶಿವರಾಮೇಗೌಡ ಹೇಳಿದ್ದಾರೆ . 

ಮಂಡ್ಯದಲ್ಲಿ ಮಾತನಾಡಿದ ಶಿವರಾಮೇಗೌಡ ತಾಲೂಕಿನ ಶಾಸಕ ಸುರೇಶ್‌ ಗೌಡ ನಾನು ಬಿಜೆಪಿಗೆ ಹೋಗಬೇಕು ಅನ್ನಿಸಿತ್ತು ಎಂದು ಎಲ್ಲೋ ಒಂದು ಕಡೆ ಹೇಳಿಕೊಂಡಿದ್ದಾರೆ. ಅವರು ಹೋಗಬಹುದೆನೋ ಆದರೆ, ನಾನು ಮಾತ್ರ ಜೆಡಿಎಸ್‌ ಪಕ್ಷ ಬಿಡುವುದಿಲ್ಲ. ದೇವೇಗೌಡರ ಜೊತೆ ಇದ್ದುಕೊಂಡು ಪಕ್ಷ ಕಟ್ಟುತ್ತೇನೆ. ವಾರಕ್ಕೊಮ್ಮೆ ಕ್ಷೇತ್ರದಲ್ಲಿದ್ದುಕೊಂಡು ಜನರ ಸಮಸ್ಯೆಗಳನ್ನು ಆಲಿಸುತ್ತೇನೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಜೆಡಿಎಸ್‌ನಲ್ಲೂ ಮತ್ತೆ ನಂಗೆ ಮೋಸವಾದರೆ ಅನಿವಾರ್ಯವಾಗಿ ಜನರ ಮುಂದೆ ಹೋಗಬೇಕಾಗುತ್ತದೆ. ಸಕ್ರೀಯ ರಾಜಕೀಯಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios