ತುಮಕೂರು(ಮೇ 22): ಕೋಲಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ನಾಯಕರು ರಾಜೀನಾಮೆ ಕೇಳಿದರೆ ಒಂದು ಕ್ಷಣವೂ ಸುಮ್ಮನಿರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಂತೆ ರಾಜೀನಾಮೆ ಕೊಡಲು ಸಾಧ್ಯವಿಲ್ಲ. ನನ್ನನ್ನು ಯಾರೂ ತಬ್ಬಿಕೊಂಡು ಮುತ್ತೂ ಕೊಟ್ಟಿಲ್ಲ ಎಂದು ತಿರುಗೇಟು ನೀಡಿದರು. ನಾನು ರಾಜೀನಾಮೆ ಕೊಡುವ ಸ್ಥಿತಿ ನಿರ್ಮಾಣ ಆಗುವುದಿಲ್ಲವೆಂದು ಸಿದ್ದರಾಮಯ್ಯಗೆ ಹೇಳಿ ಎಂದರು.

ಮಲ್ಟಿಪ್ಲೆಕ್ಸ್‌ನಲ್ಲಿ ಸ್ಟಾರ್‌ಗಳ ಹವಾ, ನಿರ್ಮಾಪಕರಿಗೆ ವರದಾನವಾಗುತ್ತಾ OTT ಪ್ಲಾಟ್‌ಫಾರಂ?

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಸುವರ್ಣ ವಾಹಿನಿಯಲ್ಲಿ ಈ ಸಂಬಂಧ ಕ್ಷಮೆ ಕೇಳಿರುವುದಾಗಿ ತಿಳಿಸಿದರು. ಕೋಲಾರ ಭಾಗಕ್ಕೆ ನೀರು ಸಿಕ್ಕಿಲ್ಲ ಎಂಬ ಕಾರಣಕ್ಕೆ ಹೋಗಿದ್ದೆ. ಆ ಸಂದರ್ಭದಲ್ಲಿ ಈ ಘಟನೆ ನಡೆಯಿತು ಎಂದರು.

ಕೆರೆಗೆ ನೀರು ಬಿಡುವ ವಿಚಾರಕ್ಕೆ ಪರಿಶೀಲನೆಗಾಗಿ ತೆರಳಿದ್ದೆ. ಆಗ ಆ ಮಹಿಳೆ ಅಲ್ಲಿ ಬಂದಿದ್ದಳು. ಆಗ 130 ಎಕರೆ ಕೆರೆ ಒತ್ತುವರಿಯಾಗಿದೆ ಎಂದಳು. ಏನಮ್ಮ ಈ ಪ್ರಶ್ನೆ ನನ್ನ ಕೇಳ್ತಿಯ ಅಂತ ನಾನು ಕೇಳಿದೆ. ಅದಕ್ಕವಳು ಏನ್ರಿ ಮಾಡ್ತಾ ಇದ್ದೀರಿ ಅಂತ ನನ್ನನ್ನೇ ಕೇಳಿದರು. ಅದಕ್ಕೆ ಮುಚ್ಚಮ್ಮ ಬಾಯಿ ರ್ರಾಸ್ಕಲ್‌. ಆದೇಶ ಕೊಡಲಿಕ್ಕೆ ಬರಬೇಡ, ರಿಕ್ವೆಸ್ಟ್‌ ಮಾಡಿ ಅಂತ ಹೇಳಿದ್ದಾಗಿ ತಿಳಿಸಿದರು.

ವಿಮಾನ ದುರಂತ: ಕುಟುಂಬಕ್ಕೆ 7.64 ಕೋಟಿ ಗರಿಷ್ಠ ಪರಿಹಾರಕ್ಕೆ ಏರ್‌ಇಂಡಿಯಾಗೆ ಸುಪ್ರೀಂ ಆದೇಶ

ಪ್ರತಿ ಸರಿಯೂ ಈ ಯಮ್ಮನದು ಅದೇ ಕೆಲಸವಂತೆ. ಪ್ರತಿಯೊಬ್ಬ ರಾಜಕೀಯ ನಾಯಕರಿಗೂ ಇದೇ ರೀತಿ ಮಾಡುತ್ತಾರೆ. ಈ ಗಲಾಟೆ ನಡೆಯಬಾರದಿತ್ತು ಎಂದರು. ಹೆಣ್ಣು ಮಕ್ಕಳ ಮನಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಒಂದು ಮನುಷ್ಯನಿಗೆ ಹೇಳಿದರೆ ಜಾತಿಗೆ,ಲಿಂಗಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ ಎಂದರು.