ಮಂಗಳೂರಿನಲ್ಲಿ 2010 ಮೇ 22ರಂದು ನಡೆದ ಏರ್‌ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟಕುಟುಂಬಗಳ ಪೈಕಿ ಒಂದು ಕುಟುಂಬ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ 7.64 ಕೋಟಿ ರು. ಮೊತ್ತದ ಗರಿಷ್ಠ ಪರಿಹಾರ ಪಡೆದುಕೊಂಡಿದೆ.

ಮಂಗಳೂರು(ಮೇ 22): ಮಂಗಳೂರಿನಲ್ಲಿ 2010 ಮೇ 22ರಂದು ನಡೆದ ಏರ್‌ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟಕುಟುಂಬಗಳ ಪೈಕಿ ಒಂದು ಕುಟುಂಬ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ 7.64 ಕೋಟಿ ರು. ಮೊತ್ತದ ಗರಿಷ್ಠ ಪರಿಹಾರ ಪಡೆದುಕೊಂಡಿದೆ.

ವಿಮಾನದಲ್ಲಿದ್ದ 166 ಪ್ರಯಾಣಿಕರ ಪೈಕಿ 158 ಮಂದಿ ಸಾವಿಗೀಡಾಗಿದ್ದರು. 8 ಮಂದಿ ಬದುಕುಳಿದಿದ್ದರು. ಸಾವಿಗೀಡಾದವರ ಪೈಕಿ ಎಲ್ಲರಿಗೂ ಅಂತಾರಾಷ್ಟ್ರೀಯ ದುರಂತ ಪರಿಹಾರ ಕಾಯ್ದೆಯ ಅನ್ವಯ ಪರಿಹಾರ ನೀಡಲಾಗಿತ್ತು.

Fact Check| ಡೊನಾಲ್ಡ್‌ ಟ್ರಂಪ್‌ಗೆ ಕೊರೋನಾ ಸೋಂಕು!

ಅದರಲ್ಲಿ ಮಂಗಳೂರಿನ ಮಹೇಂದ್ರ ಕೋಡಿಕಣಿ ಹಾಗೂ ಅವರ ಅತ್ತೆ ಕೂಡ ಸಾವಿಗೀಡಾಗಿದ್ದರು. ಅವರ ಅತ್ತೆಗೆ ಪೂರ್ತಿ ಪರಿಹಾರ ಪಾವತಿಸಲಾಗಿತ್ತು. ಆದರೆ 45 ವರ್ಷದ ಮಹೇಂದ್ರ ಅವರು ದುಬೈನಲ್ಲಿ ಉನ್ನತ ಹುದ್ದೆಯಲ್ಲಿದ್ದರು.

ಅವರಿಗೆ ಇನ್ನೂ 15 ವರ್ಷಗಳ ಸೇವಾ ಅವಕಾಶ ಇತ್ತು. ಈ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಆರಂಭದಲ್ಲಿ 7.35 ಕೋಟಿ ರು. ಪರಿಹಾರವನ್ನು ಅಂ.ರಾ. ಪರಿಹಾರ ಕಾಯ್ದೆಯಡಿ ನೀಡಲಾಗಿತ್ತು. ಆದರೆ ಇದು ಸಮರ್ಪಕವಾಗಿ ಇಲ್ಲ ಎಂದು ಅವರ ಪತ್ನಿ ಮತ್ತು ಪುತ್ರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಈಗ ಈ ಕುಟುಂಬಕ್ಕೆ ಇತರೆ ವೆಚ್ಚ ಸೇರಿಸಿ 7.64 ಕೋಟಿ ರು. ಪರಿಹಾರ ನೀಡುವಂತೆ ಏರ್‌ ಇಂಡಿಯಾಗೆ ಏಪ್ರಿಲ್‌ನಲ್ಲಿ ಆದೇಶ ನೀಡಿದೆ.

ಕೊರೋನಮ್ಮ ನಮ್ಮ ಊರಿಗೆ ಬರಬೇಡಮ್ಮ: ಗ್ರಾಮಸ್ಥರಿಂದ ವಿಶಿಷ್ಟ ಆಚರಣೆ

ಮಂಗಳೂರು ವಿಮಾನ ದುರಂತಕ್ಕೆ ಮೇ 22ಕ್ಕೆ 20 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 10.30ಕ್ಕೆ ಇಲ್ಲಿನ ತಣ್ಣೀರುಬಾವಿ ಪರಿಸರದಲ್ಲಿ ಮೃತರ ಸ್ಮಾರಕ ಬಳಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಜಿಲ್ಲಾಡಳಿತ ಆಯೋಜಿಸಿದೆ.