ಜಾತಿ ಆಧರಿಸಿ ಯಾರ ಹೆಸರನ್ನೂ ಶಿಫಾರಸು ಮಾಡುವುದಿಲ್ಲ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥ ಶ್ರೀಪಾದರು ಸ್ಪಷ್ಟನೆ ನೀಡಿದ್ದಾರೆ. ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು, ರಾಮದಾಸ್ ಸಮರ್ಥರು, ಅನೇಕ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂದರು.
ಮೈಸೂರು(ಆ.28): 'ಬ್ರಾಹ್ಮಣ ಸಮುದಾಯದ ರಾಮದಾಸ್ ಡಿಸಿಎಂ ಆಗಲಿ' ಎಂಬ ವಿಚಾರವಾಗಿ ಉಡುಪಿ ಪೇಜಾವರ ಶ್ರೀಗಳು ಮೈಸೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಶಾಸಕ ಎಸ್.ಎ.ರಾಮದಾಸ್ ಸಮರ್ಥರು. ಬ್ರಾಹ್ಮಣ ಸಮುದಾಯದವರು ನನ್ನ ಬಳಿ ಬಂದು ಮನವಿ ಮಾಡಿದ್ದಾರೆ. ಬ್ರಾಹ್ಮಣ ಸಮುದಾಯದ ರಾಮದಾಸ್ ಅವರನ್ನು ಡಿಸಿಎಂ ಮಾಡಬೇಕೆಂದು ಕೇಳಿಕೊಂಡಿರುವುದಾಗಿ ಶ್ರೀಗಳ ಹೇಳಿದ್ದಾರೆ.
ಹೈಕಮಾಂಡ್ ಮೇಲೆ ಪೇಜಾವರ ಶ್ರೀ ಒತ್ತಡ? ಬ್ರಾಹ್ಮಣರಿಗೆ ಮತ್ತೊಂದು ಮಂತ್ರಿ ಸ್ಥಾನ?
ನಾನು ಜಾತಿ ಆಧಾರದ ಮೇಲೆ ಯಾರ ಹೆಸರನ್ನೂ ಶಿಫಾರಸು ಮಾಡುವುದಿಲ್ಲ. ಆದರೆ ರಾಮದಾಸ್ ಸಮರ್ಥರು, ಅನೇಕ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.ಸೂಕ್ತ ಸಂದರ್ಭ ನೋಡಿ ಮುಖ್ಯಮಂತ್ರಿಗೆ ಶಿಫಾರಸು ಮಾಡುತ್ತೇನೆ ಎಂದು ಶ್ರೀ ವಿಶ್ವೇಶ್ವರತೀರ್ಥ ಶ್ರೀಪಾದರು ಸ್ಪಷ್ಟಪಡಿಸಿದ್ದಾರೆ.
ಮೈಸೂರು ಜಿಲ್ಲೆಯ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆದರೆ ಮುಖ್ಯಮಂತ್ರಿಗಾಗಲಿ, ಅಥವಾ ಅಮಿತ್ ಷಾ ಅವರಿಗಾಗಿ ನಾನು ಫೋನ್ ಮಾಡಿಲ್ಲ ಎಂದಿರುವ ಶ್ರೀಗಳು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಕರೆ ಮಾಡಿರುವ ವಿಚಾರವನ್ನು ಅಲ್ಲಗಳೆದಿದ್ದಾರೆ. ಶಾಸಕ ರಾಮದಾಸ್ ಅವರಿಗೆ ಸಚಿವ ಸ್ಥಾನ ನೀಡುವಂತಡ ಒತ್ತಾಯಿದ್ದ ಬಗ್ಗೆ ವರದಿಯಾಗಿತ್ತು.
