ವಾಸ್ತವಾಂಶ ಅರಿತು ಮಾಹಿತಿ ನೀಡುವೆ: ಸಚಿವ ಸೋಮಣ್ಣ
ಮಳೆ ಪ್ರಮಾಣ ಈ ಬಾರಿ ಹೆಚ್ಚಿನ ರೀತಿ ಆಗಿದ್ದು, ಜನರ ರಕ್ಷಣೆ, ಜನರಿಗೆ ನೀಡಬೇಕಾದ ಸವಲತ್ತು ಒದಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.
ಕೊಳ್ಳೇಗಾಲ (ಸೆ.02): ಮಳೆ ಪ್ರಮಾಣ ಈ ಬಾರಿ ಹೆಚ್ಚಿನ ರೀತಿ ಆಗಿದ್ದು, ಜನರ ರಕ್ಷಣೆ, ಜನರಿಗೆ ನೀಡಬೇಕಾದ ಸವಲತ್ತು ಒದಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು. ಕೊಳ್ಳೇಗಾಲದ ಸರ್ಕಟನ್ ಚಾನಲ್ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಬಾರಿ ಮಳೆ ಹಿನ್ನೆಲೆ ಸೂಕ್ತ ಸವಲತ್ತು ನೀಡಲು ಅಗತ್ಯ ಕ್ರಮವಹಿಸುವೆ. ಇಂದೇ ಸಂತ್ರಸ್ಥರಿಗೆ 10ಸಾವಿರ ಪರಿಹಾರ ವಿತರಿಸಿ, ಮುಂದೆ ಆಗಬೇಕಾದ ಕೆಲಸ ಕಾರ್ಯಗಳು, ಕಾಮಗಾರಿ, ಜನರಿಗೆ ನೀಡಬೇಕಾದ ಸವಲತ್ತು ವಿತರಣೆಗೂ ಕ್ರಮವಹಿಸುವೆ.
ಗುರುವಾರ ಮತ್ತು ಶುಕ್ರವಾರ 2ದಿನ ಹಾನಿಗೀಡಾದ ಹಲವು ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವಾಂಶ ಅರಿತುಕೊಳ್ಳುವೆ, ಬಳಿಕ ಅಧಿಕಾರಿಗಳ ಸಭೆ ನಡೆಸಿ ಜಿಲ್ಲೆಯಲ್ಲಿ ಹಾನಿ ಪ್ರಮಾಣದ ಕುರಿತು ಮಾಹಿತಿ ನೀಡುವೆ, ಈಗಾಗಲೇ ಜಿಲ್ಲಾಡಳಿತ ತೆರೆದಿರುವ ಕಾಳಜಿ ಕೇಂದ್ರಕ್ಕೂ ಭೇಟಿ ನೀಡಿ ನೈಜತೆ ಅರಿತುಕೊಳ್ಳುವೆ ಎಂದರು. ಜಿಲ್ಲಾ ಕೇಂದ್ರವನ್ನು ಅನೇಕ ವರ್ಷಗಳಿಂದ ನೋಡುತ್ತಿರುವೆ. ಈ ಜಿಲ್ಲಾಭಿವೃದ್ಧಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡುವೆ, ಬೆನ್ನು ನೋವಿನಿಂದ ಸಕಾಲದಲ್ಲಿ ಮಳೆ ಹಾನಿ ಸ್ಥಳಕ್ಕೆ ಭೇಟಿ ನೀಡಲು ವಿಳಂಬವಾಗಿದೆ. ಅದಕ್ಕಾಗಿ ವಿಷಾಧಿಸುತ್ತೇನೆ ಎಂದರು.
ದೃಢ ನಿರ್ಧಾರದಿಂದ ಮಾತ್ರ ರಾಜಕೀಯದಲ್ಲಿರಲು ಸಾಧ್ಯ: ಸಂಸದ ಶ್ರೀನಿವಾಸ್ ಪ್ರಸಾದ್
ಖುದ್ದು ಸ್ಥಳ ವೀಕ್ಷಿಸುವೆ: ಮಳೆಯಿಂದಾಗಿ ಹಾನಿಗೀಡಾದ ವಿವರಗಳ ಕುರಿತು ಅಧಿಕಾರಿಗಳು ನೀಡಿರುವ ವರದಿಯನ್ನು ಮುಟ್ಟಿಲ್ಲ, ಈ ವಿಚಾರದಲ್ಲೂ ನಾನು ಸುಳ್ಳು ಹೇಳಲ್ಲ, ಅರ್ಧ ಮನೆ ಬಿದ್ದಿದೆ ಎಂಬಿತ್ಯಾದಿಯಾಗಿ ಅಧಿಕಾರಿಗಳು ಅವರದ್ದೆ ದಾಟಿಯಲ್ಲಿ ಕಥೆ ಹೇಳಿದ್ದಾರೆ, ಅದನ್ನ ನಾನು ಒಪ್ಪಲ್ಲ, ಇಂದು ನಾನೇ ಹಲವು ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ, ವಾಸ್ತವ ವರದಿ ಅರಿತುಕೊಳ್ಳುತ್ತೇನೆ. ಈ ಪ್ರಕರವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ, ನಾಳೆ ಬೆಳಗ್ಗೆ 9ಗಂಟೆಗೆ ಸಭೆ ಬಳಿಕ ಹಾನಿಯ ಸಂಪೂರ್ಣ ವಿವರ ಪ್ರಕಟಿಸುವೆ ಎಂದರು.
45ವರ್ಷ ಸೈಕಲ್ ತುಳಿದಿದ್ದೇನೆ: ಬೆಂಗಳೂರಿನಲ್ಲಿ 45ವರ್ಷಗಳ ಕಾಲ ಸೈಕಲ್ ತುಳಿದಿದ್ದೇನೆ, ಕೆಲವು ಕಡೆ ಮಾತ್ರ ಹಾನಿಗೊಳಗಾಗಿದೆ. ಹಾನಿಗೊಳಗಾದ ಪ್ರದೇಶಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಉತ್ಸುಕರಾಗಿ ಕ್ರಮಕೈಗೊಂಡಿದ್ದಾರೆ. ಹಿಂದಿಗಿಂತ ಈಗ ವಿಭಿನ್ನವಾಗಿ ಸರ್ಕಾರ ಕೆಲಸ ಮಾಡುತ್ತಿದೆ. ಭಯಂಕರ ವ್ಯವಸ್ಥೆ, ಇಷ್ಟೊಂದು ಮಳೆ ಇದನ್ನೆಲ್ಲ ಎದುರಿಸಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಮಹದೇವಪುರ ಸೇರಿದಂತೆ ಹಲವು ಕಡೆ ಮಾತ್ರ ಹೆಚ್ಚಿನ ತೊಂದರೆಯಾಗಿದೆ, ಬೆಂಗಳೂರು ನಗರದ ಉಸ್ತುವಾರಿ ಮಂತ್ರಿಯೂ ಆಗಿದ್ದೆ, ಈಗ ಬೆಂಗಳೂರನ್ನು ಕ್ಷೇಮವಾಗಿಡಲು ಸರ್ಕಾರ ಸನ್ನದ್ದವಾಗಿದೆ ಎಂದು ಹೇಳಿದರ
ಶ್ರೀಗಳ ಪ್ರಕರಣ, ಸರ್ಕಾರದ ಹಸ್ತಕ್ಷೇಪವಿಲ್ಲ: ಮುರುಘ ಶರಣರ ಶ್ರೀಗಳ ಪ್ರಕರಣ ನಿಜಕ್ಕೂ ದುರಂತ, ಅವರ ಬಂಧನ ಪ್ರಕರಣದಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ, ಈ ಪ್ರಕರಣ ಈಗ ನ್ಯಾಯಾಲಯದ ಅಂಗಳದಲ್ಲಿರುವ ಕಾರಣ ಈ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಸಚಿವ ಸೋಮಣ್ಣ ಹೇಳಿದರು. ಅವರು ಕೊಳ್ಳೇಗಾಲದಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಈ ಪ್ರಕರಣದಲ್ಲಿ ಶೂನ್ಯದಷ್ಟುಹಸ್ತಕ್ಷೇಪ ಮಾಡುತ್ತಿಲ್ಲ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೊಲೀಸ ಇಲಾಖೆಗೆ ಸೂಕ್ತ ತನಿಖೆಗೆ ಅವಕಾಶ ನೀಡಿದ್ದಾರೆ ಎಂದರು.
ನ್ಯಾಯಾಲಯದಲ್ಲೂ ಈ ಪ್ರಕರಣದ ಕುರಿತು ಈಗಾಗಲೇ ವಿವರಣೆ ಪಡೆಯಲಾಗಿದ್ದು ಈ ಪ್ರಕರಣದಲ್ಲಿ ಶ್ರೀಗಳ ಬಂಧನವಾಗದಂತೆ ಅಥವಾ ಅವರ ರಕ್ಷಿಸುವ ವಿಚಾರದಲ್ಲಿ ಹಸ್ತಕ್ಷೇಪವಾಗಿಲ್ಲ, ಈ ಪ್ರಕರಣದಲ್ಲಿ ವಾಸ್ತವಾಂಶ(ಸತ್ಯ) ಶೀಘ್ರದಲ್ಲೆ ಹೊರಬೀಳುತ್ತೆ, ಅದನೆಲ್ಲಾ, ನ್ಯಾಯಾಲಯ ಹಾಗೂ ಪೊಲೀಸರು ನೋಡಿಕೊಳ್ಳುತ್ತಾರೆ. ಯಾರು ಎಷ್ಟೆದೊಡ್ಡವರಾದರೂ ಕೂಡ ನ್ಯಾಯಾಲಯ, ಕಾನೂನಿನ ಮುಂದೆ ಎಲ್ಲರೂ ತಲೆಬಾಗಲೇಬೇಕು, ತನಿಖೆ ನಿಜಕ್ಕೂ ಪಾರದರ್ಶಕವಾಗಿದೆ ಎಂದರು.
3 ತಿಂಗಳೊಳಗೆ ಗ್ರಂಥಾಲಯ ಸಜ್ಜುಗೊಳಿಸಲು ಸೂಚನೆ: ಸಚಿವ ವಿ.ಸೋಮಣ್ಣ
ಸಚಿವರ ಜೊತೆ ವಕೀಲ ರುದ್ರಾರಾಧ್ಯ ಪ್ರತ್ಯಕ್ಷ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಬೇಸರಗೊಂಡು ಜೆಡಿಎಸ್ ಪಾಳೆಯ ಸೇರಿದ್ದ ಹಿರಿಯ ನಾಯಕ, ವಕೀಲ ರುದ್ರಾರಾದ್ಯರು ಪ್ರವಾಸಿ ಮಂದಿರದಲ್ಲಿ ಸಚಿವ ಸೋಮಣ್ಣ ಅವರ ಜೊತೆ ಕಾಣಿಸಿಕೊಳ್ಳುವ ಮೂಲಕ ನಾನಾ ಚರ್ಚೆಗೆಡೆ ಮಾಡಿಕೊಟ್ಟಿದ್ದಾರೆ. ರುದ್ರಾರಾದ್ಯರು ಈಗಾಗಲೇ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ನಾನೇ ಹನೂರಿನಿಂದ ಸ್ಪರ್ಧಿಸುವೆ ಎಂದು ಹಲವರು ತಮ್ಮ ಹಿತೈಷಿಗಳ ಜೊತೆ ಹೇಳಿಕೊಂಡಿದ್ದಾರೆ. ಬಹುತೇಕ ಅಮ… ಆದ್ಮಿ ಪಾರ್ಟಿಯಿಂದ ಸ್ಪರ್ಧೆ ಎನ್ನಲಾಗುತ್ತಿದೆ. ಏತನ್ಮದ್ಯೆಯಾದ ಅವರು ಸಚಿವ ಸೋಮಣ್ಣ ಅವರ ಜೊತೆ ಕೆಲಕಾಲ ಮಾತುಕತೆ ನಡೆಸಿ, ಚಹಾ ಸೇವಿಸಿ ಪಾಲ್ಗೊಂಡದ್ದು ನಾನಾ ಚರ್ಚೆಗೆ ಏಡೆ ಮಾಡಿಕೊಟ್ಟಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆರಾಧ್ಯರು ಸರ್ಕಾರದ ಮಟ್ಟದಲ್ಲಿ ಕೆಲಸಕ್ಕಾಗಿ ಸಚಿವರ ಭೇಟಿ ಮಾಡಿದ್ದೆ, ರಾಜಕೀಯಕ್ಕೂ ನನಗೂ ಬಹಳ ದೂರ ಎಂದರು.
ಸರ್ಕಟನ್ ಚಾನಲ್ ಕಾಮಗಾರಿ ನಾಳೆ ಬೆಳಗ್ಗೆಯೇ ಮುಗಿಯಬೇಕು, ನಾನು ನಾಳೆ ಬಂದು ವೀಕ್ಷಿಸುವೆ, ನೆರೆ ಸಂತ್ರಸ್ಥ ಪ್ರದೇಶಗಳ ಹಾನಿ ಪ್ರಕರವನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ.
-ಸೋಮಣ್ಣ. ಉಸ್ತುವಾರಿ ಸಚಿವ