Asianet Suvarna News Asianet Suvarna News

ಎಂಟಿಬಿಗೆ ಸಚಿವ ಸ್ಥಾನ ಫಿಕ್ಸ್ : ಯಾವ ಖಾತೆ ಹೊಣೆ..?

ಬಿಜೆಪಿ ಮುಖಂಡ ಎಂಟಿಬಿ ನಾಗರಾಜ್ ತಮಗೆ ಸಚಿವ ಸ್ಥಾನ ಸಿಗೋದು ಪಕ್ಕಾ ಎಂದಿದ್ದು ಯಾವ ಖಾತೆ ಸಿಗಲಿದೆ ಎನ್ನುವುದು ಕುತೂಹಲವಾಗಿದೆ. 

i Will Get portfolio in BSY Cabinet Says MTB Nagaraj snr
Author
Bengaluru, First Published Nov 9, 2020, 8:28 AM IST
  • Facebook
  • Twitter
  • Whatsapp

ಬ್ಯಾಡಗಿ (ನ.09):  ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದೇನೆ. ಉಪಚುನಾವಣೆ ಫಲಿತಾಂಶದ ಆನಂತರ ಸಂಪುಟ ವಿಸ್ತರಣೆ ಅಥವಾ ಪುನರ್‌ ರಚನೆ ಆಗಲಿದ್ದು, ಆನಂತರ ಸಚಿವ ಸ್ಥಾನ ಸಿಗುವ ಭರವಸೆಯಿದೆ ಎಂದು ವಿಧಾನಪರಿಷತ್‌ ಸದಸ್ಯ ಎಂಟಿಬಿ ನಾಗರಾಜ ಹೇಳಿದರು.

ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತಿಂಗಳು ಹದಿನೈದು ಅಥವಾ ಇಪ್ಪತ್ತರ ಒಳಗಾಗಿ ಹೈಕಮಾಂಡ್‌ ಆದೇಶ ಪಡೆದು ವಿಸ್ತರಣೆ ಅಥವಾ ಪುನರಚನೆ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. 

ಕಾಂಗ್ರೆಸ್ ರಹಸ್ಯ ಹೇಳಿದ ಎಂಟಿಬಿ ನಾಗರಾಜ್ ...

ಈ ಹಿಂದೆ ಮುಖ್ಯಮಂತ್ರಿ ಕೊಟ್ಟಮಾತಿನಂತೆ ಸಚಿವ ಸ್ಥಾನ ನೀಡುತ್ತಾರೆ ಎಂಬ ವಿಶ್ವಾಸವಿದೆ. ಯಾವ ಖಾತೆಯನ್ನಾದರೂ ಕೊಡಲಿ. ಅದನ್ನು ನಾನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.

ಮಾಜಿ ಸಚಿವ ವಿನಯ್‌ ಕುಲಕರ್ಣಿ ಬಂಧನ ವಿಚಾರ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಿನಯ್‌ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ಬಂಧನ ಮಾಡಿದ್ದಾರೆ. ಜಾತಿ, ಪಕ್ಷ ಎಲ್ಲವನ್ನೂ ಬದಿಗೊತ್ತಿ ತನಿಖೆ ಮೂಲಕ ನ್ಯಾಯ ಒದಗಿಸಿಕೊಡಲಿ. ಅವರು ತಪ್ಪು ಮಾಡಿದ್ದಾರೋ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ ಪ್ರಕರಣಕ್ಕೆ ನ್ಯಾಯ ಸಿಗಬೇಕು ಎಂದರು.

Follow Us:
Download App:
  • android
  • ios