ಶಿರಾ (ಅ.30):  ಕಾಂಗ್ರೆಸ್‌ ಸರಕಾರ ಸಿದ್ದರಾಮಯ್ಯರನ್ನು ಬಿಟ್ಟರೆ ಕುರುಬ ಸಮಾಜದ ಇತರೆ ಶಾಸಕರಿಗೆ ಮಂತ್ರಿ ಭಾಗ್ಯ ಕರುಣಿಸಲಿಲ್ಲ. 

ಆದರೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ನನಗೆ ವಿಧಾನ ಪರಿಷತ್‌ ಸ್ಥಾನ ನೀಡಿ ಸಂಪುಟದಲ್ಲಿ ಮಂತ್ರಿ ಮಾಡುವುದರ ಜೊತೆಗೆ ಶಿರಾ ತಾಲೂಕಿನ ಕುರುಬ ಸಮಾಜದ ಮುಖಂಡ ಬೇವಿನಹಳ್ಳಿ ಬಿ.ಕೆ.ಮಂಜುನಾಥ್‌ಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗಲಿದೆ. ಕುರುಬ ಸಮಾಜಕ್ಕೆ ಇಂತಹ ಅವಕಾಶ ನೀಡುತ್ತಿರುವ ಕಾರಣ ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‌ಗೌಡ ಬೆಂಬಲಿಸಿ ಗೆಲ್ಲಿಸುವಂತೆ ವಿಧಾನ ಪರಿಷತ್‌ ಸದಸ್ಯ ಎಂಟಿಬಿ ನಾಗರಾಜು ಮನವಿ ಮಾಡಿದರು.

ಶಿರಾ ತಾಲೂಕಿನ ಕಾಮಗೊಂಡನಹಳ್ಳಿ, ಪಟ್ಟನಾಯಕನಹಳ್ಳಿ, ದ್ವಾರನಕುಂಟೆ, ಬೇವಿನಹಳ್ಳಿ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‌ ಗೌಡ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.

ಕಾಂಗ್ರೇಸ್‌ ಮತ್ತು ಜೆಡಿಎಸ್‌ ಪಕ್ಷಗಳ ಶಾಸಕರನ್ನು ನೋಡಿ ಬೇಸರಗೊಂಡಿರು ಕಾರಣ ಜನ ಬೆಜೆಪಿ ಪಕ್ಷದತ್ತ ಹೆಚ್ಚು ಒಲವು ವ್ಯಕ್ತ ಪಡಿಸುತ್ತಿದ್ದು, ಶಿರಾ ಕ್ಷೇತ್ರದ ಇತಿಹಾಸದಲ್ಲಿ ಪ್ರಪ್ರಥಮ ಈ ಭಾರಿ ಬಿಜೆಪಿ ಅಭ್ಯರ್ಥಿ ರಾಜೇಶ್‌ ಗೌಡ ಗೆಲುವು ಸಾಧಿಸಲಿದ್ದಾರೆ ಎಂದರು.

'ಆರ್‌ಆರ್‌ ನಗರ ಹುಲಿಯನ್ನು ನಾವು ಗೆದ್ದೇ ಗೆಲ್ಲಿಸ್ತೀವಿ, ಕೈ ಕುತಂತ್ರವೆಲ್ಲಾ ಇಲ್ಲಿ ನಡೆಯಲ್ಲ' ...

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ.ಮಂಜುನಾಥ್‌ ಮಾತನಾಡಿ, ಶಿರಾ ಕ್ಷೇತ್ರದಲ್ಲಿ ಎಂದೆಂದೂ ಕಾಣದಂತಹ ಅಭೂತ ಪೂರ್ವ ಜನಬೆಂಬಲ ಬಿಜೆಪಿ ಪಕ್ಷಕ್ಕೆ ವ್ಯಕ್ತವಾಗುತ್ತಿದೆ. ಉಳಿಕೆ ಅವಧಿಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ಅಭ್ಯರ್ಥಿಗಳಿಗೆ ಮತ ಕೊಟ್ಟರೆ ವಿಧಾನಸೌಧದಲ್ಲಿ ಒಂದು ಕುರ್ಚಿ ಭರ್ತಿಯಾಗುತ್ತದೆ ಅಷ್ಟೆ. ಬಿಜೆಪಿ ಅಭ್ಯರ್ಥಿ ರಾಜೇಶ್‌ ಗೌಡ ಗೆದ್ದರೆ ಶಿರಾ ಕ್ಷೇತ್ರದ ಜನತೆ ಬಹು ದಿನಗಳ ಬೇಡಿಕೆ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವುದು ಪ್ರಥಮ ಆಧ್ಯತೆ ನಂತರ ಗುಡಿಸಲು ಮುಕ್ತ ತಾಲೂಕು ಮಾಡಿ ಪ್ರತಿಯೊಬ್ಬ ಬಡವನಿಗೂ ಸೂರು ನೀಡುವಂತ ಕೆಲಸ ಮಾಡಲಿದ್ದಾರೆ. ಅಲ್ಲದೇ ಗ್ರಾಮೀಣ ಪ್ರದೇಶಗಳ ರಸ್ತೆಗಳ ಅಭಿವೃದ್ಧಿಗೆ ಆಧ್ಯತೆ ನೀಡಿ ಆಭಿವೃದ್ಧಿ ಪಡಿಸುವ ಕನಸು ಹೊತ್ತ ಬಿಜೆಪಿ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ.ಹುಲಿನಾಯ್ಕರ್‌, ಕುರುಬ ಸಮಾಜದ ಮುಖಂಡ ಮುಕುಡಪ್ಪ, ಮುಖಂಡರಾದ ಬಿ.ಕೆ.ಮಂಜುನಾಥ್‌, ನಿಜಲಿಂಗಪ್ಪ, ಪಿ.ಎನ್‌. ಗುಂಡಯ್ಯ, ಪುಟ್ಟರಾಜು, ನಾಗೇಶ್‌ ಕಲ್ಮನೆ, ಮೈಲಾರಿ, ಚಂದ್ರಯ್ಯ, ಸುರೇಶ್‌ ಸೇರಿದಂತೆ ನೂರಾರು ಮಹಿಳೆಯರು ಉಪಸ್ಥಿತರಿದ್ದರು.