ಮೈಸೂರು (ನ.24):  ನನ್ನ ಮುಂದಿನ ರಾಜಕೀಯ ನಡೆ ಅಂದಿನ ರಾಜಕೀಯ ಸನ್ನಿವೇಶ, ಪರಿಸ್ಥಿತಿ ಮತ್ತು ಜನರ ಅಭಿಪ್ರಾಯವನ್ನು ಅವಲಂಬಿಸಿರುತ್ತದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

ತಾಲೂಕಿನ ಉದ್ಬೂರು ಗ್ರಾಮದಲ್ಲಿ ಸೋಮವಾರ ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನಾನು ಪಕ್ಷ ಬಿಡುವುದಿಲ್ಲ. ಉಳಿದ ಎರಡು ವರ್ಷವನ್ನು ಜೆಡಿಎಸ್‌ ಶಾಸಕನಾಗಿಯೇ ಕಳೆಯುತ್ತೇನೆ. ಮುಂದಿನ ಚುನಾವಣೆ ವೇಳೆಗೆ ಪರಿಸ್ಥಿತಿ ನೋಡಿಕೊಂಡು ತೀರ್ಮಾನಿಸುತ್ತೇನೆ. ಕ್ಷೇತ್ರದ ಜನರೊಂದಿಗೆ ಸಮಾಲೋಚಿಸಿ, ಕೇಳದೆ ಯಾವುದೇ ತೀರ್ಮಾನ ಮಾಡುವುದಿಲ್ಲ. ಅಂದಿನ ಪರಿಸ್ಥಿತಿಗೆ ಯಾವ ಪಕ್ಷದ ಸ್ಥಿತಿ ಹೇಗಿರುತ್ತದೆ ಎಂಬುದನ್ನು ನೋಡಿಕೊಂಡು ಮುಂದಿನ ತೀರ್ಮಾನ ಮಾಡುತ್ತೇನೆ. ಈಗ ಯಾವುದೇ ತೀರ್ಮಾನ ಮಾಡುವುದಿಲ್ಲ ಎಂದರು.

ಡಿ.ಕೆ.ಸುರೇಶ್‌ ವಿರುದ್ಧ ಎಚ್‌ಡಿಕೆ ಗರಂ : ನಂದೆ ಅಂತಾರೆಂದು ವ್ಯಂಗ್ಯ .

ಗ್ರಾಪಂ ಚುನಾವಣೆ ಪಕ್ಷಾತೀತವಾಗಿ ನಡೆಯಬೇಕು. ಬಿಜೆಪಿ ಕಾಂಗ್ರೆಸ್‌ ನಾವೇ ಗೆಲ್ಲುತ್ತೇವೆ ಎಂದು ಹೇಳಿದರೂ, ನಾನು ಯಾರು ಜನರ ಸೇವೆ ಮಾಡುತ್ತಾರೆ ಅವರನ್ನು ಗೆಲ್ಲಿಸುವಂತೆ ಹೇಳುತ್ತೇನೆ. 

 ಯಾರು ಗ್ರಾಮಸ್ಥರ ಸಂಕಷ್ಟಕ್ಕೆ ಸ್ಪಂದಿಸುತ್ತಾರೆ, ಪಿಂಚಣಿ ಕೊಡುವುದು, ಸರ್ಕಾರಿ ಸವಲತ್ತು ಒದಗಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ನೋಡಿ ತೀರ್ಮಾನಿಸಬೇಕು. ಮತದಾರರೇ ಶಾಸಕರು ಮತ್ತು ಸಂಸದರು. ಸದಸ್ಯರನ್ನು ಆಯ್ಕೆ ಮಾಡಲು ಅವರಿಗೆ ಬಿಡುಬೇಕು. ಇದರಲ್ಲಿ ರಾಜಕೀಯ ಬೆರೆಸಬಾರದು. 20 ಗುಂಟೆ ಜಮೀನು ಉಳ್ಳವನು ಅದನ್ನು ಮಾರಿಕೊಂಡು ಚುನಾವಣೆ ನಿಂತು ಹಾಳಾಗಬಾರದು. ಪಕ್ಷಾತೀತವಾಗಿ ಚುನಾವಣೆ ನಡೆಸಲು ಬಿಡಬೇಕು ಎಂದು ಅವರು ಹೇಳಿದರು.