ಮೈಸೂರು(ಜ.09): ಮೈಸೂರು ಮಹಾನಗರಪಾಲಿಕೆಯ ಮೇಯರ್- ಉಪಮೇಯರ್ ಚುನಾವಣೆಯಲ್ಲಿ ಮಾಜಿ ಸಚಿವ ಜಿ.ಟಿ. ದೇವೇಗೌಡ ಬೆಂಬಲಿಸುವ ವ್ಯಕ್ತಿಯನ್ನು ನಾನು ವೋಟ್ ಹಾಕುತ್ತೇನೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ತಿಳಿಸಿದ್ದಾರೆ.

ಈ ಸಂಬಂಧ ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ನಡೆಸಿದ ವೇಳೆ ಮಾತನಾಡಿದ ಅವರು, ಜಿಟಿಡಿ ನಮ್ಮ ಪಕ್ಷದ ಮುಖಂಡರು. ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ನಾನು ಹೇಳಿದವರೆ ಮೇಯರ್ ಆಗುತ್ತಾರೆ ಎಂಬುದು ಸತ್ಯಕ್ಕೆ ದೂರವಾದದ್ದು. ಮೇಯರ್ ಆಯ್ಕೆ ಪಕ್ಷದ ವರಿಷ್ಠರಿಗೆ ಬಿಟ್ಟದ್ದು ಎಂದಿದ್ದಾರೆ.

'ಪ್ರಧಾನಿ ಮೋದಿ ಕಾರ್ಪೋರೇಟ್ ಕಂಪನಿಗಳ ಸಿಎಒ'..!

ನಮ್ಮ ಅಭಿಪ್ರಾಯವನ್ನು ವರಿಷ್ಠರ ಗಮನಕ್ಕೆ ತಂದಿದ್ದೇನೆ. ಜಿಟಿಡಿ ಅವರ ನಿವಾಸಕ್ಕೆ ನಗರಾಧ್ಯಕ್ಷ ಕೆ.ಟಿ. ಚಲುವೇಗೌಡರು ಭೇಟಿ ನೀಡಿದ್ದು, ಅವರು ಆಯ್ಕೆ ಮಾಡುವವರಿಗೆ ನಮ್ಮ ಸಹಮತವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮೈಸೂರು ನಗರಪಾಲಿಕೆಯ ನೂತನ ಮೇಯರ್, ಉಪ ಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ಜ.18ರಂದು ಶನಿವಾರ ಮಧ್ಯಾಹ್ನ 11.30ಕ್ಕೆ ನಗರ ಪಾಲಿಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆಸಲು ನಿಗದಿಯಾಗಿದೆ.

ಮೈಸೂರಿನಿಂದ ಕೊನೆಗೂ ಫಿಲ್ಮ್‌ ಸಿಟಿ ಶಿಫ್ಟ್: ಎಲ್ಲಿಗೆ? ಕಾರಣ ಸಹಿತ ಉತ್ತರಿಸಿದ ಡಿಸಿಎಂ