ಕುತಂತ್ರ ಮಾಡಿ ನನಗೆ 2019ರಲ್ಲಿ ಲೋಕಸಭಾ ಟಿಕೆಚ್‌ ತಪ್ಪಿಸಿದರು : ಮುದ್ದಹನುಮೇಗೌಡ

ನನ್ನ ಸಚ್ಛಾರಿತ್ರ ರಾಜಕೀಯದಿಂದ ನಾನು ಒಕ್ಕಲಿಗರ ನಾಯಕನಾಗಿ ಬಿಡುತ್ತೇನೆ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರು ಒಂದಾಗಿ ಕುತಂತ್ರ ಮಾಡಿ ನನಗೆ 2019ರಲ್ಲಿ ಲೋಕಸಭಾ ಟಿಕೆಚ್‌ ತಪ್ಪಿಸಲಾಯಿತು ಎಂದು ಮಾಜಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಅವರು ಎರಡು ಪಕ್ಷಗಳ ನಾಯಕರ ಮೇಲೆ ನೇರವಾಗಿ ಆರೋಪ ಮಾಡಿದರು.

I missed Lok Sabha Ticket in 2019  Muddahanumegowda snr

 ತುಮಕೂರು :  ನನ್ನ ಸಚ್ಛಾರಿತ್ರ ರಾಜಕೀಯದಿಂದ ನಾನು ಒಕ್ಕಲಿಗರ ನಾಯಕನಾಗಿ ಬಿಡುತ್ತೇನೆ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರು ಒಂದಾಗಿ ಕುತಂತ್ರ ಮಾಡಿ ನನಗೆ 2019ರಲ್ಲಿ ಲೋಕಸಭಾ ಟಿಕೆಚ್‌ ತಪ್ಪಿಸಲಾಯಿತು ಎಂದು ಮಾಜಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಅವರು ಎರಡು ಪಕ್ಷಗಳ ನಾಯಕರ ಮೇಲೆ ನೇರವಾಗಿ ಆರೋಪ ಮಾಡಿದರು.

ನಾಗವಲ್ಲಿಯ ಬಾಣವಾರ ಗೇಚ್‌ನ ಮಾಜಿ ಶಾಸಕ ಬಿ.ಸುರೇಶ…ಗೌಡ ಅವರ ಗೃಹಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಕ್ರಿಯಾಶೀಲ ಸಂಸದನಾಗಿದ್ದ ನನಗೆ ಟಿಕೆಟ್ ನಿರಾಕರಿಸಲಾಯಿತು, ಕಾಂಗ್ರೆಸ್‌ನವರೇ ಜೆಡಿಎಸ್‌ನಿಂದ ಸ್ಪರ್ಧಿಸುವಂತೆ ಹೇಳಿದರು, ನಾನು ತಪ್ಪು ಮಾಡಿದ್ದೆ, ಗೆಲ್ಲುತ್ತಾನೆ ಎಂಬ ಕಾರಣಕ್ಕೆ ಜೆಡಿಎಸ್‌ನವರು ಬೇಡ ಅಂದರು. ಲೋಕಸಭಾ ಟಿಕೆಚ್‌ ಅನ್ನು ಒಪ್ಪಿಸಿ ಬಂದರು ಎಂದು ಮುದ್ದಹನುಮೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಡಾ.ಜಿ.ಪರಮೇಶ್ವರ್‌ ಅವರು ನನ್ನ ಸಂಸದನಾಗಿ ಮಾಡಲು ಸಹಾಯ ಮಾಡಿದರು, 2018ರಲ್ಲಿ ಅವರು ಉಪಮುಖ್ಯಮಂತ್ರಿಯಾಗಲು, ಕೊರಟಗೆರೆಯಲ್ಲಿ ಶಾಸಕರಾಗಲು ನಾನು ಸಹಾಯ ಮಾಡಿಲ್ಲವೇ? ಅವರದ್ದು ದೊಡ್ಡ ಸಹಾಯ ಇರಬಹುದು, ನನ್ನದು ಸಣ್ಣ ಅಳಿಲು ಸೇವೆ ಇರಬಹುದು, ಕೊರಟಗೆರೆಯ ಜನರನ್ನ ಕೇಳಿ, ನಾನೇನು ಮಾಡಿಲ್ಲ ಅಂತ ಹೇಳಲಿ ನೋಡೋಣ ಎಂದು ಸವಾಲು ಎಸೆದರು.

ಸಮ್ಮಿಶ್ರ ಸರ್ಕಾರದಲ್ಲಿದ್ದ ಜೆಡಿಎಸ್‌ಗೆ ಸ್ಥಾನ ಕೇಳುವ ಹಕ್ಕಿತ್ತು, ಅವರು ಕೇಳಿದ್ದೇ ಇದ್ದರು ಸಹ ನಮ್ಮವರೊಬ್ಬರು, ಜೆಡಿಎಸ್‌ನವರು ಒಬ್ಬ ಕ್ರಿಯಾಶೀಲ ಸಂಸದನಿಗೆ ಅನ್ಯಾಯವಾಗಬಾರದು ಎನ್ನುವ ಹೃದಯ ವೈಶಾಲ್ಯತೆಯನ್ನು ತೋರಲಿಲ್ಲ. ದೇವೇಗೌಡರು, ಕುಮಾರಣ್ಣ ಯಾರು ತುಮಕೂರು ಬಿಟ್ಟು ಕೊಡಿ ಎಂದು ಕೇಳದಿದ್ದರೂ ಸಹ ಅಣ್ಣ ತಮ್ಮಂದಿರ ರಾಜಕೀಯ ಹಪಾಹಪಿತನದಿಂದ ನನಗೆ ಟಿಕೆಚ್‌ ತಪ್ಪಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಪಕ್ಷದ ನಾಯಕರನ್ನು ಭೇಟಿ ಮಾಡಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ವೇಣುಗೋಪಾಲ… ಅವರು ಸಮಾಧಾನ ಮಾಡಿ, ನಾಮಪತ್ರ ಹಿಂತೆಗೆಯುವಂತೆ ಹೇಳಿ, ರಾಜ್ಯಸಭೆಗೆ ಅವಕಾಶ ಕಲ್ಪಿಸುವುದಾಗಿ ಹೇಳಿದರು. ನಾಮಪತ್ರ ಹಿಂತೆಗೆದುಕೊಂಡ ನಂತರ ಒಂದು ಪೋನ್‌ ಸಹ ಮಾಡಲಿಲ್ಲ. ಪಕ್ಷಕ್ಕಾಗಿ ಗಾಣದ ಎತ್ತುಗಳಂತೆ ದುಡಿಯುತ್ತಲೇ ಇರಬೇಕಾ? ಅಧಿಕಾರ ಕೊಡುವುದು ಬೇಡ, ಕತ್ತು ಹಿಸುಕಲು ಬಂದರೆ ಹೇಗೆ ಇರಬೇಕು, ಎಂದು ಪ್ರಶ್ನಿಸಿದರು.

ಉಪಮುಖ್ಯಮಂತ್ರಿಯಾಗಿದ್ದ ಡಾ.ಜಿ.ಪರಮೇಶ್ವರ್‌ ಅವರ ಗಮನಕ್ಕೆ ಎಲ್ಲ ವಿಚಾರಗಳನ್ನು ತಂದರೂ ಸಹ ಸುಮ್ಮನೆ ಇದ್ದರು, ಅವರು ನನಗೆ ಸಹಾಯ ಮಾಡದೆ, ಅವರು ವಿಧಾನ ಪರಿಷತ್‌ ಚುನಾವಣೆ ಬಂದರು. ನನಗೆ ಅದನ್ನು ನೀಡಲಿಲ್ಲ, ಕನಿಷ್ಠ ಅದರ ಬಗ್ಗೆ ವಿಚಾರಿಸಲಿಲ್ಲ, ನಿರ್ಲಕ್ಷಕ್ಕೆ ಒಳಗಾದ ಜನ ಬಿಜೆಪಿಗೆ ಸೇರ್ಪಡೆಯಾಗುವಂತೆ ಒತ್ತಾಯಿಸಿದ್ದರಿಂದಲೇ ಪಕ್ಷಾಂತರ ಮಾಡಿದೆ ಎಂದು ಹೇಳಿದರು.

ತೀರ್ಪು ಪ್ರಕಟವಾಗಲಿದೆ: ಮಾಜಿ ಶಾಸಕ ಬಿ.ಸುರೇಶಗೌಡ ಮಾತನಾಡಿ, ಹಾಲಿ ಶಾಸಕರು ಗೆಲುವು ಸಾಧಿಸಿರುವುದು ನಕಲಿ ಬಾಂಡ್‌ಗಳನ್ನು ಹಂಚಿ ಮತ್ತು ಕ್ಷೇತ್ರದ ವಿದ್ಯಾವಂತ ಯುವಕರಿಗೆ ಇನ್ನಿಲ್ಲದ ಆಸೆ, ಆಕಾಂಕ್ಷೆಗಳನ್ನು ತೋರಿಸಿ,ಈಗಾಗಲೇ ಈ ವಿಚಾರವಾಗಿ ನ್ಯಾಯಾಲಯದಲ್ಲಿ ವಾದ ವಿವಾದ ಮುಗಿದು,ತೀರ್ಪು ಪ್ರಕಟವಾಗಲಿದೆ ಎಂದರು.

ಹಾಲಿ ಶಾಸಕರ ಸುಳ್ಳು ಭರವಸೆಗಳನ್ನು ನಂಬಿ ಅವರೊಂದಿಗೆ ಇದ್ದ ಬಹುತೇಕ ಮುಖಂಡರು ಬಿಜೆಪಿ ಸೇರಿದ್ದಾರೆ. ಮುಂದೆಯೂ ಕೆಲವರು ಸೇರಲಿದ್ದಾರೆ. ಅಲ್ಲದೆ ಈ ಭಾಗದಲ್ಲಿ ಎರಡು ಬಾರಿ ಶಾಸಕರಾಗಿ,ಐದು ವರ್ಷ ಸಂಸದರಾಗಿ,10 ವರ್ಷಗಳ ಕಾಲ ಒಂದು ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿ,ಅಪಾರ ಅಭಿಮಾನಿ ಗಳನ್ನು ಹೊಂದಿದ್ದಾರೆ.ಅವರು ಪಕ್ಷಕ್ಕೆ ಬಂದಿರುವುದು ಮತ್ತಷ್ಟುಬಲ ಬಂದಿದೆ.ಇದು ನನ್ನ ಗೆಲುವಿಗೆ ಸಹಕಾರಿ ಯಾಗಲಿದೆ ಎಂದರು.

ಇದೇ ವೇಳೆ ಕಾಂಗ್ರೆಸ್‌ ಪಕ್ಷದ ತುಮಕೂರು ಗ್ರಾಮಾಂತರ ಬ್ಲಾಕ್‌ ಅಧ್ಯಕ್ಷ ವಿಜಯಕುಮಾರ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಚಿಕ್ಕಸ್ವಾಮಿ, ಎಪಿಎಂಸಿ ಮಾಜಿ ನಿರ್ದೇಶಕ ನರಸೇಗೌಡ, ಬೋರೇಗೌಡರು ಗ್ರಾಮ ಪಂಚಾಯತ್‌ ಸದಸ್ಯರು, ದೊಡ್ಡಯ್ಯ ಶಾಮಿಯಾನ ಮಾಲಂಗಿ,ಬಾಲಕೃಷ್ಣ ಗೊಲ್ಲಹಳ್ಳಿ, ರೇವಯ್ಯ ಹೆಬ್ಬೂರು, ಮುರುಡೇಗೌಡ ದೊಮ್ಮನಕುಪ್ಪೆ, ನಾಗರಾಜು ಪೊನ್ನಸಂದ್ರ, ಬಸವರಾಜು ಹೆಬ್ಬೂರು,ಗಂಗಣ್ಣ ಕಂಬತ್ತನಹಳ್ಳಿ, ಶಿವಕುಮಾರ್‌ ಗೌರಿಪುರ,ನಾಗರಾಜು ಕಂಬತ್ತನಹಳ್ಳಿ,ಪುನೀತ್‌ ಹೆಬ್ಬೂರು ,ರಘು ಗರಡಕುಪ್ಪೆ,ಸುರೇಶ್‌ ಮಾಜಿ ಗ್ರಾಮ ಪಂಚಾಯತ್‌ ಸದಸ್ಯರು ಹೆಬ್ಬೂರು, ರಾಮಕೃ?Ü್ಣಪ್ಪ, ಎಸ್‌.ಎನ್‌.ಪಾಳ್ಯ, ಹೆಬ್ಬೂರು ,ಮುನಿಯಪ್ಪ ತಿಮ್ಮಸಂದ್ರ,ದಿನೇಶ್‌ ತಿಮ್ಮಸಂದ್ರ, ಕೆ.ಎಸ್‌.ಆರ್‌.ಟಿ.ಸಿ.,ಹನುಮಂತರಾಯಪ್ಪ ಮಾಜಿ ಸೈನಿಕ, ಮನೋಜ್‌ ಹೆಬ್ಬೂರು, ರೇವಯ್ಯಾ ಹೆಬ್ಬೂರು,ವೆಂಕಟೇಶ್‌ ಹೆಬ್ಬೂರು,ಗಾರೆ ಬಸವಯ್ಯ ಮಾಜಿ ಗ್ರಾಮ ಪಂಚಾಯತ್‌ ಸದಸ್ಯರು,ಚಿಕ್ಕಸ್ವಾಮಿ ಹೆಬ್ಬೂರು,ರವಿ ಹೆಬ್ಬೂರು ಸೇರಿದಂತೆ ಅನೇಕ ಮುಖಂಡರು ಕಾಂಗ್ರೆಸ್‌ ಪಕ್ಷ ತ್ಯಜಿಸಿ,ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

Latest Videos
Follow Us:
Download App:
  • android
  • ios