ಕೆಜಿಎಫ್‌ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ: ಶಾಸಕಿ ರೂಪಕಲಾ ಶಶಿಧರ್‌

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ, ಕಾಂಗ್ರೆಸ್‌ ಶಾಸಕಿಯಾಗಿ ಕೆಜಿಎಫ್‌ ವಿಧಾನಸಭಾ ಕ್ಷೇತ್ರದಲ್ಲಿ 500 ಕೋಟಿ ರು.ಗಳ ಅಭಿವೃದ್ಧಿ ಕಾಮಗಾರಿ ಕೈಗೊಂಡು ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡ್ಯಯಲಾಗಿದೆ ಎಂದು ಶಾಸಕಿ ರೂಪಕಲಾ ಶಶಿಧರ್‌ ಹೇಳಿದರು.

I have worked hard for Development of KGF Constituency Says MLA Roopakala Shashidhar gvd

ಕೆಜಿಎಫ್‌ (ಡಿ.31): ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ, ಕಾಂಗ್ರೆಸ್‌ ಶಾಸಕಿಯಾಗಿ ಕೆಜಿಎಫ್‌ ವಿಧಾನಸಭಾ ಕ್ಷೇತ್ರದಲ್ಲಿ 500 ಕೋಟಿ ರು.ಗಳ ಅಭಿವೃದ್ಧಿ ಕಾಮಗಾರಿ ಕೈಗೊಂಡು ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡ್ಯಯಲಾಗಿದೆ ಎಂದು ಶಾಸಕಿ ರೂಪಕಲಾ ಶಶಿಧರ್‌ ಹೇಳಿದರು. ಶ್ರೀನಿವಾಸಂದ್ರ ಗ್ರಾಪಂ ವ್ಯಾಪ್ತಿಯ ಮೇಪಲ್ಲಿಯಲ್ಲಿ ಸಾಧನಾ ಸಮಾವೇಶದ ಜೊತೆಗೆ ವ್ಯವಸಾಯ ಸಹಕಾರ ಸಂಘದ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. 

ರಾಜಕೀಯಕ್ಕೆ ಮೊದಲು ಪಾದಾರ್ಪಣೆ ಮಾಡಿ ಜಿಪಂ, ಚುನಾವಣೆಯಲ್ಲಿ ಸೋಲು ಕಂಡ ನಂತರ ಒಂದು ದಿನವೂ ಮನೆಯಲ್ಲಿ ಇರದೇ ಸತತವಾಗಿ ಕೆಜಿಎಫ್‌ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 12 ವರ್ಷದಿಂದ ಸತತವಾಗಿ ಜನರ ಜೊತೆ ಬೆರತು, ಜನರ ನಾಡಿ ಮಿಡಿತ ಅರಿತು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವುದಾಗಿ ಹೇಳಿದರು.

ಕಳಸಾ ಬಂಡೂರಿ ಯೋಜನೆ ಫಾರೆಸ್ಟ್ ಕ್ಲಿಯರೆನ್ಸ್‌ಗೆ ದೆಹಲಿಗೆ ಹೋಗುವ ಅಗತ್ಯವಿಲ್ಲ: ಪ್ರಹ್ಲಾದ್ ಜೋಶಿ

ಕ್ಷೇತ್ರದ ಅಭಿವೃದ್ಧಿಗೆ 500 ಕೋಟಿ: ಕೆಜಿಎಫ್‌ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 4.5 ವರ್ಷಗಳಲ್ಲಿ ಶಾಸಕಿ ರೂಪಕಲಾ ಶಶಿಧರ್‌ವರಿಂದ 500 ಕೋಟಿ ರೂ.ಗಳ ಅನುದಾನದಲ್ಲಿ, ಪದವಿ ಕಾಲೇಜು ಕಟ್ಟಡ, ಮಿನಿ ವಿಧಾನಸೌಧ, ಸಾರ್ವಜನಿಕ ಆಸ್ಪತ್ರೆ, ಸರಕಾರಿ ಕಚೇರಿಗಳಿಗೆ ಕಟ್ಟಡಗಳ ನಿರ್ಮಾಣ, ಡಿಸಿಸಿ ಬ್ಯಾಂಕ್‌ನಿಂದ 75 ಕೋಟಿ ರೂ.ಗಳ ಸ್ತ್ರೀಶಕ್ತಿ ಮಹಿಳೆಯರಿಗೆ ಸಾಲ. ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ, ಮಿನಿ ವಿಧಾನಸೌಧ ಕಟ್ಟಡಕ್ಕೆ ಅನುದಾನ ನೀಡಿದ್ದ ದೇಶಪಾಂಡೆ, ಗ್ರಾಪಂ, ಕಟ್ಟಡಕ್ಕೆ ಅನುದಾನ ನೀಡಿದ್ದ ಕೃಷ್ಣ ಬೈರೇಗೌಡ, 8 ಕೋಟಿ ರೂ.ಗಳ ಆಸ್ಪತ್ರೆಗೆ ಅನುದಾನ ನೀಡಿದ್ದ ಮಾಜಿ ಸಚಿವ ಶಿವರಾಜ್‌ರನ್ನು ಶಾಸಕರು ನೆನಪಿಸಿಕೊಂಡರು.

ಕಳೆದ 15 ವರ್ಷದಿಂದ ನೆನಗುದ್ದಿಗೆ ಬಿದ್ದಿದ್ದ ಅಶೋಕನಗರ ರಸ್ತೆ ಕಾಮಗಾರಿಗೆ ಡಿಸಿ ಕಚೇರಿ ಮುಂಭಾಗ ಎರಡು ಸಾರಿ ಪ್ರತಿಭಟಿಸಿ ರಸ್ತೆಯ ಅಭಿವೃದ್ದಿ ಬಗ್ಗೆ ಮೆಲಕು ಹಾಕಿದರು. ನಗರಸಸಭೆ ಅಧ್ಯಕ್ಷ ವಳ್ಳಲ್‌ಮುನಿಸ್ವಾಮಿ ಮಾತನಾಡಿ, ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರಲು ಸ್ತ್ರೀ ಶಕ್ತಿ ಸಂಘಗಳಿಗೆ ಬಡ್ಡಿ ರಹಿತ ಸಾಲ ನೀಡುವ ಮೂಲಕ ಶಾಸಕಿ ರೂಪಕಲಾ ಅವರು ಸಹಾಯ ಹಸ್ತ ಚಾಚಿದ್ದಾರೆ. ಅವರನ್ನೇ ಮುಂದಿನ ಸಲ ಆಯ್ಕೆ ಮಾಡಿದ್ದರೆ ಕೆಜಿಎಫ್‌ ಕ್ಷೇತ್ರದ ಮೊದಲ ಸಚಿವರಾಗಲಿದ್ದಾರೆಂದು ತಿಳಿಸಿದರು.

Kodagu: ವರ್ಷದ ಕೊನೆಯ ಸೂರ್ಯಾಸ್ತ ಕಣ್ತುಂಬಿಕೊಂಡ ಪ್ರವಾಸಿಗರು!

ಅಚ್ಚುಕಟ್ಟಾದ ಭಾಡೂಟ ವ್ಯವಸ್ಥೆ: ಸಾವಿರಾರೂ ಕಾರ‍್ಯಕರ್ತರಿಗೆ ಒಂದು ಬಾರಿಗೆ ಸಾವಿರ ಜನರು ಊಟ ಮಾಡಲು ವ್ಯವಸ್ಥೆ ಮಾಡಲಾಗಿತ್ತು, ಊಟದ ಸಂದರ್ಭದಲ್ಲಿ ಯಾವುದೇ ಗೊಂದಲ ಇಲ್ಲದೆ ಬಾಡೂಟ ಸವಿದರು. ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಅ.ಮು.ಲಕ್ಷ್ಮೇನಾರಾಯಣ, ವಿಜಯಶಂಕರ್‌, ರಾಮಕೃಷ್ಣಾರೆಡ್ಡಿ, ಶ್ರೀನಿವಾಸರೆಡ್ಡಿ, ನಗರಸಭೆ ಉಪಾಧ್ಯಕ್ಷ ದೇವಿಗಣೇಶ್‌, ನಗರಸಭೆ ಸದಸ್ಯರಾದ ಮಾಣಿಕ್ಯಂ, ಕೃಷ್ಣಗೌಡ, ಶಿವು ಇದ್ದರು.

Latest Videos
Follow Us:
Download App:
  • android
  • ios