ಸ್ಯಾಂಟ್ರೋ ರವಿ ಬಿಜೆಪಿಯಲ್ಲಿ ಇದ್ರೋ ಇಲ್ವೋ ನನ್ನ ಬಳಿ ಮಾಹಿತಿ ಇಲ್ಲ: ಸಿಟಿ ರವಿ

ದೇಶದ ಜನ ಕಾಂಗ್ರೆಸ್ ಅಧಿಕಾರದಲ್ಲಿದ್ದ ರಾಜ್ಯಗಳಲ್ಲೆಲ್ಲ ಆ ಪಕ್ಷವನ್ನೇ ಗುಡಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದ್ದಾರೆ.

I have no information whether Santro Ravi is in BJP or not says CT Ravi gow

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಜ.12): ದೇಶದ ಜನ ಕಾಂಗ್ರೆಸ್ ಅಧಿಕಾರದಲ್ಲಿದ್ದ ರಾಜ್ಯಗಳಲ್ಲೆಲ್ಲ ಆ ಪಕ್ಷವನ್ನೇ ಗುಡಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಸಂದರ್ಭದಲ್ಲಿ ರಸ್ತೆಯ ಕಸ ಗುಡಿಸಿ ಬಿಜೆಪಿಯ ಪಾಪದ ಕೊಳೆ ತೊಳೆದೆವು ಎಂದು ಮುಖಂಡರು ಹೇಳಿಕೊಂಡಿರುವ ಬಗ್ಗೆ ರವಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು. ಪ್ರಜಾಪ್ರಭುತ್ವದಲ್ಲಿ ನಮ್ಮ ಮಾಲೀಕರು ಜನ. ಅವರು ಪಂಜಾಬ್‌ನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸನ್ನು ಗುಡಿಸಿಹಾಕಿದರು. ದೆಹಲಿಯಲ್ಲಿ ಠೇವಣಿ ಸಹ ಇಲ್ಲದ ಸ್ಥಿತಿಗೆ ಗುಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ 399 ಸ್ಥಾನದಲ್ಲಿ ಸ್ಪರ್ಧೆ ಮಾಡಿತ್ತು. 387 ಸ್ಥಾನಗಳಲ್ಲಿ ಠೇವಣಿ ಹೋಯಿತು. ಜನರೇ ಅವರನ್ನ ಗುಡಿಸುತ್ತಿದ್ದಾರೆ ಎಂದರು.

ಅಂಬೇಡ್ಕರ್‌ ಹೆಸರು ಭಾರತರತ್ನಕ್ಕೆ ಶಿಫಾರಸು ಮಾಡಿದ್ದು ಅಟಲ್‌: ಸಿ.ಟಿ.ರವಿ

ಸ್ಯಾಂಟ್ರೋ ರವಿ ಬಿಜೆಪಿಯಲ್ಲಿ ಇದ್ರೋ ಇಲ್ವೋ ನನ್ನ ಬಳಿ ಮಾಹಿತಿ ಇಲ್ಲ:
ಬೆಂಗಳೂರಿನ ಸ್ಯಾಂಟ್ರೋ ರವಿ ಬಿಜೆಪಿಯಲ್ಲಿ ಇದ್ದರೋ ಇಲ್ಲವೋ ನಮಗೆ ಅಧಿಕೃತ ಮಾಹಿತಿ ಇಲ್ಲ. ಆನ್ಲೈನ್ ಸದಸ್ಯತ್ವ ಯಾರು ಬೇಕಾದರೂ ಪಡೆದುಕೊಳ್ಳಬಹುದು. ಅದೂ ಸಹ ಸ್ಪಷ್ಟತೆ ಇಲ್ಲ. ಪಕ್ಷದಲ್ಲಿ ಅವರಿಗೆ ಯಾವುದೇ ಜವಾಬ್ದಾರಿ ಇರಲಿಲ್ಲ. ಇಷ್ಟಾದಮೇಲೂ ಕಾನೂನು ಬಿಜೆಪಿಯವರಿಗೊಂದು, ದಳಕ್ಕೊಂದು, ಕಾಂಗ್ರೆಸ್ಗೊಂದು ಇಲ್ಲ. ತಪ್ಪು ಯಾರು ಮಾಡಿದರೂ ತಪ್ಪೇ ಎಂದು ರವಿ ಹೇಳಿದರು. ಸದ್ಯ ತನಿಖೆ ನಡೆಯುತ್ತಿದೆ. ನಂತರ ಯಾರು ಅವರ ಹಿಂದೆ ಇದ್ದಾರೆ ಗೊತ್ತಾಗುತ್ತದೆ. ಯಾವ ಪಕ್ಷ ಇದ್ದರೂ ಕ್ರಮ ಆಗುತ್ತದೆ. ನಮ್ಮ ಸರ್ಕಾರ ಐಜಿ ಮೇಲೂ ಕ್ರಮ ತೆಗೆದುಕೊಂಡಿದೆ. ಯಾರಮೇಲೂ ಮುಲಾಜು ತೋರಿಸಿಲ್ಲ. ಹಾಗಿರುವಾಗ ಯಾವುದನ್ನೂ ಮುಚ್ಚಿಹಾಕುವ ಪ್ರಶ್ನೆ ಇಲ್ಲ ಎಂದರು.

ಕೆಪಿಸಿಸಿ ವಕ್ತಾರ ಲಕ್ಷ್ಮಣ್ ವಿರುದ್ಧ ಸಿ.ಟಿ.ರವಿಯಿಂದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲು

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ನಂತರ ಸಿದ್ದು ಗೆ ವಿಶ್ವಾಸ ಇಲ್ಲ: 
ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು 40 ವರ್ಷದ ಸುದೀರ್ಘ ರಾಜಕೀಯ ಜೀವನದಲ್ಲಿ ಕಡೆವರೆಗೂ ಕ್ಷೇತ್ರ ಹುಡುಕುತ್ತಿರುವುದು ಒಂದು ದುರಂತವಾಗಿದೆ ಎಂದರು. ಮೈಸೂರಿನಲ್ಲಿ ಗೆಲ್ಲುವ ವಿಶ್ವಾಸ ಅವರಿಗಿಲ್ಲ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ನಂತರ ಅವರಿಗೆ ವಿಶ್ವಾಸ ಇಲ್ಲದಾಗಿದ್ದು ಅವರ ತವರು ಜಿಲ್ಲೆ ಮೈಸೂರು, ಅಲ್ಲೇ ಅವರಿಗೆ ಗೆಲ್ಲುವ ವಿಶ್ವಾಸ ಅವರಿಲ್ಲ ಬಾದಾಮಿಯಲ್ಲೂ ಎರಡೇ ಗೆಲ್ಲುತ್ತೇನೆಂಬ ವಿಶ್ವಾಸ ಅವರಿಗಿಲ್ಲ ಅವರು ಇದೀಗ ಕೋಲಾರಕ್ಕೆ ಹೋಗುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ಜನರ ತೀರ್ಮಾನ ಮಾಡ್ತಾರೆ, ಜನರ ತೀರ್ಮಾನ ವನ್ನ ನಾವೇನು ಹೇಳೋಕೆ ಆಗುವುದಿಲ್ಲ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios