Asianet Suvarna News Asianet Suvarna News

ಕರಾವಳಿಗೆ ಕೊಡುಗೆ ನೀಡಬೇಕೆಂಬ ಕನಸಿದೆ: ರವಿಶಾಸ್ತ್ರಿ

ಉಡುಪಿ ಯರ್ಲಪಾಡಿಯ ತನ್ನ ಹಿರಿಯರ ಮೂಲ ನೆಲೆಯ ಕರ್ವಾಲು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನಕ್ಕೆ ಮಂಗಳವಾರ ಮಧ್ಯಾಹ್ನ ಭೇಟಿ ನೀಡಿ ಸೇವೆ ಸಲ್ಲಿಸಿದ ಬಳಿಕ ಅವರು 'ಕನ್ನಡಪ್ರಭ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಮನದಾಳದ ಅನಿಸಿಕೆ ಹಂಚಿಕೊಂಡರು.

I have a Dream to Contribute to the Karnataka Coastal Says Ravi Shastri grg
Author
First Published May 15, 2024, 7:02 AM IST | Last Updated May 15, 2024, 7:02 AM IST

ಗಣೇಶ್ ಕಾಮತ್ ಎಂ./ರಾಂ ಅಜೆಕಾರ್

ಕಾರ್ಕಳ(ಮೇ.15):  ಈಗ ಕ್ರಿಕೆಟ್ ಕಾಮೆಂಟೇಟರ್‌ ಜವಾಬ್ದಾರಿಯಿದೆ. ಇದೆಲ್ಲ ಮುಗಿದ ಬಳಿಕ ಮುಂದಿನ ದಿನಗಳಲ್ಲಿ ಕರಾವಳಿಯ ತನ್ನ ಹುಟ್ಟೂರಿನ ನೆಲಕ್ಕೆ ಕೊಡುಗೆ ನೀಡುವ ಕನಸು ಮತ್ತು ಆಸಕ್ತಿ ಇದೆ ಎಂದು ಭಾರತೀಯ ಕ್ರಿಕೆಟ್ ಮಾಜಿ ಕಪ್ತಾನ, ಖ್ಯಾತ ಕಮೆಂಟೇಟರ್‌ ರವಿಶಾಸ್ತ್ರಿ ಹೇಳಿದರು.

ಉಡುಪಿ ಯರ್ಲಪಾಡಿಯ ತನ್ನ ಹಿರಿಯರ ಮೂಲ ನೆಲೆಯ ಕರ್ವಾಲು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನಕ್ಕೆ ಮಂಗಳವಾರ ಮಧ್ಯಾಹ್ನ ಭೇಟಿ ನೀಡಿ ಸೇವೆ ಸಲ್ಲಿಸಿದ ಬಳಿಕ ಅವರು 'ಕನ್ನಡಪ್ರಭ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಮನದಾಳದ ಅನಿಸಿಕೆ ಹಂಚಿಕೊಂಡರು. ಅವರ ಸಂದರ್ಶನದ ಸಾರಾಂಶ ಹೀಗಿದೆ.

ರಾಜೀವನಗರದಲ್ಲಿ ನಕಲಿ ಮತದಾನ ಆರೋಪ; ಉಡುಪಿ ಜಿಲ್ಲಾಧಿಕಾರಿ ಹೇಳಿದ್ದೇನು?

• ನಿಮ್ಮ ವೃತ್ತಿ ಜೀವನದ ಹಾದಿ ಅವಲೋಕಿಸಿದಾಗ ಏನನ್ನಿಸುತ್ತಿದೆ? ಕರಾವಳಿಯಲ್ಲಿ ಆತ್ಮೀಯ ನೆನಪುಗಳಿವೆ. ಬೆಳವ ಣಿಗೆಯ ಹಂತದಲ್ಲಿ ನಾನು ಈ ಪರಿಸರವನ್ನು ಕಂಡಿದ್ದೇನೆ. ಜೀವನದಲ್ಲಿ ದೇವರ ದಯೆ ಮುಖ್ಯ. ಕಠಿಣ ದುಡಿಮೆಯೂ ಮುಖ್ಯವಾಗು ಇದೆ. ತವರು ನೆಲಕ್ಕೆ ಬಂದಾಗಲೆಲ್ಲ ಸ್ಫೂರ್ತಿ ಪಡೆದಿದ್ದೇನೆ.

• ಭಾರತೀಯ ಕ್ರಿಕೆಟ್ ರಂಗದ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾದವರು ತಾವು, ಆ ಪೈಕಿ ಯಾವುದು ಮರೆಯಲಾಗದ್ದು?

1983ರ ವಿಶ್ವಕಪ್ ಗೆದ್ದ ತಂಡದಲ್ಲಿದ್ದದು, 1985ರ ಗೆಲುವು, ಆಸ್ಟ್ರೇಲಿಯಾದ ನೆಲದಲ್ಲಿ ಭಾರತೀಯನಾಗಿ ಸಿಡಿಸಿದ ಮೊದಲ ದ್ವಿಶತಕ, ಆಸ್ಟ್ರೇಲಿಯಾದ ನೆಲದಲ್ಲಿ 2 ಟೆಸ್ಟ್ ಸರಣಿ ಗೆಲುವು, ಕಮೆಂಟೇಟರ್‌ಆಗಿ 2007 ಮತ್ತು 2011ರ ವಿಶ್ವಕಪ್ ಗೆಲುವಿನ ಸಂಭ್ರಮ.

• ವೃತ್ತಿ ಜೀವನದ ಹಾದಿಯಲ್ಲಿ ಕನಸುಗಳೇನಾದರೂ ಇದೆಯೇ? ನಾವು ಜೀವನದಲ್ಲಿ ಮುನ್ನಡೆಯುತ್ತಲೇ ಇರ ಬೇಕು. ಸದ್ಯ ಕಮೆಂಟೇಟ‌ರ್ ಆಗಿ ನೋಡಿದ್ದನ್ನೇ ಹೇಳುವುದನ್ನು ಆನಂದಿಸುತ್ತಿದ್ದೇನೆ ಹಾಗೂ ಪ್ರೀತಿಸುತ್ತಿದ್ದೇನೆ.

ಏಕದಿನ ವಿಶ್ವಕಪ್​ನಲ್ಲಿ 4ನೇ ಕ್ರಮಾಂಕದಲ್ಲಿ ಆಡ್ತಾರಾ ವಿರಾಟ್ ಕೊಹ್ಲಿ ..? ರವಿಶಾಸ್ತ್ರಿ ಹೇಳಿದ್ದೇನು?

ಕರ್ವಾಲುಗೆ ಭೇಟಿ: ನಾಗ-ದೇವರ ಸೇವೆ

ಕರ್ವಾಲು ರವಿಶಾಸ್ತ್ರಿ ಅವರ ಪೂರ್ವಿಕರನೆಲ, ಜತೆಗೆ ವಿಶೇಷವಾಗಿ ಇಲ್ಲಿ ಪ್ರಾರ್ಥಿಸಿದ ಬಳಿಕವೇ ಮಗಳು ಅಲೈಕಾ ಹುಟ್ಟಿದ್ದು. ಈ ಕಾರಣಗಳಿಂದ 2007ರ ಬಳಿಕ ನಿರಂತರ ಕರ್ವಾಲು ದೇವಳಕ್ಕೆ ವರ್ಷಕ್ಕೊಂದು ಬಾರಿ ಭೇಟಿ ಕೊಟ್ಟು ಸೇವೆ ಸಲ್ಲಿಸುತ್ತಿರುವ ರವಿಶಾಸ್ತಿ ತಮ್ಮ ಬಿಡುವಿಲ್ಲದ ಚಟುವಟಿಕೆಗಳ ನಡುವೆಯೂ ಕರ್ವಾಲಿನ ನಾಗ-ದೇವರ ಸನ್ನಿಧಿಗೆ ಮಂಗಳವಾರ ಮಧ್ಯಾಹ್ನ 12.30 ರ ವೇಳೆ ಉಡುಪಿಯ ವಾದಿರಾಜ ಪೆಜತ್ತಾಯ ಅವರ ಜತೆಗೆ ಆಗಮಿಸಿ ವಿವಿಧ ಪೂಜೆ ಸಲ್ಲಿಸಿದರು.

ಕೆ.ಅಣ್ಣಾಮಲೈ ನೆನೆದ ರವಿಶಾಸ್ತ್ರಿ

ಬಂಧುಗಳ ಜತೆ ಮಾತನಾಡುತ್ತಾ ಚುನಾವಣೆ ವಿಷಯ, ನಿವೃತ್ತ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ರಾಜಕೀಯಕ್ಕೆ ಬಂದಿರುವ ವಿಷಯ ತಿಳಿದು ಪುಳಕಿತರಾದ ರವಿಶಾಸ್ತ್ರಿ 2014ರಲ್ಲಿ ಕಾರ್ಕಳ ಎಎಸ್ಪಿ ಆಗಿದ್ದ ಅಣ್ಣಾಮಲೈ ಅವರನ್ನು ಸನ್ಮಾಸಿಸಿದ ಕ್ಷಣ ನೆನಪಿಸಿಕೊಂಡರು. ಕರ್ವಾಲು ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಣ್ಣಾಮಲೈ ಸಿಕ್ಕಿದ್ದರು. ಈಗ ಅವರು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಉನ್ನತ ಮಟ್ಟಕ್ಕೇರಿರುವುದು ಖುಷಿ ತಂದಿದೆ ಎಂದರು. 

Latest Videos
Follow Us:
Download App:
  • android
  • ios