ಬಿಎಸ್‌ವೈ ಮದುವೆ ಸಿಡಿ,ಡೈರಿ ಡಿಕೆಶಿಗೆ ಕೊಟ್ಟಿದ್ದೆ : ಪದ್ಮನಾಭ ಪ್ರಸನ್ನ

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಮದುವೆ ಸಿಡಿ ಹಾಗೂ ಜೈಲಿನಿಂದ ಯಡಿಯೂರಪ್ಪ ಆಚೆ ಬರಲು ಎಷ್ಟುದುಡ್ಡು ಕೊಟ್ಟರು ಎಂಬ ಮಾಹಿತಿಯ ಡೈರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಮನೆ ರೈಡ್‌ ಆದ ವೇಳೆ ದೊರೆತ್ತಿದ್ದು, ಅವುಗಳೆರಡನ್ನೂ ಡಿಕೆಶಿಗೆ ನಾನೇ ಕೊಟ್ಟಿದ್ದು ಎಂದು ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ತಿಳಿಸಿದರು.

I gave BSY marriage CD  diary to DK Shivakumar says  Padmanabha Prasanna snr

 ತುಮಕೂರು :  ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಮದುವೆ ಸಿಡಿ ಹಾಗೂ ಜೈಲಿನಿಂದ ಯಡಿಯೂರಪ್ಪ ಆಚೆ ಬರಲು ಎಷ್ಟುದುಡ್ಡು ಕೊಟ್ಟರು ಎಂಬ ಮಾಹಿತಿಯ ಡೈರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಮನೆ ರೈಡ್‌ ಆದ ವೇಳೆ ದೊರೆತ್ತಿದ್ದು, ಅವುಗಳೆರಡನ್ನೂ ಡಿಕೆಶಿಗೆ ನಾನೇ ಕೊಟ್ಟಿದ್ದು ಎಂದು ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ತಿಳಿಸಿದರು.

ಅವರು ತುಮಕೂರಿನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆ ಡೈರಿ, ಸಿಡಿ ಯಾರು ಕೊಟ್ಟರು, ಎಲ್ಲಿಂದ ಬಂತು, ಯಾರು, ಅದರಲ್ಲಿ ಏನಿತ್ತು ಅಂತಾ ಎಂದು ಡಿ.ಕೆ.ಶಿವಕುಮಾರ್‌ ಅವರನ್ನು ಕೇಳಿದರೆ ಗೊತ್ತಾಗುತ್ತದೆ. ಯಡಿಯೂರಪ್ಪ ಜೈಲಿಂದ ಆಚೆ ಬರಲು ಎಷ್ಟು ಕೋಟಿ ಕೊಟ್ಟರು ಎಂಬ ಬಗೆ ನನ್ನ ಹತ್ತಿರ ಮಾಹಿತಿಯಿದ್ದು, ಈಗಲೂ ನನ್ನ ಹತ್ತಿರ ಅದರ ಇನ್ನೊಂದು ಕಾಪಿ ಇದ್ದು, ಮುಂದಿನ ದಿನಗಳಲ್ಲಿ ದಾಖಲೆ ಇಟ್ಟುಕೊಂಡು ಎಲ್ಲಾ ಹೇಳುತ್ತೇನೆ. ದುಡ್ಡಿಗೋಸ್ಕರ ನಾನು ಯಾವತ್ತು ಏನೂ ಮಾಡಿಲ್ಲ ಎಂದ ಪದ್ಮನಾಭ ಪ್ರಸನ್ನ, ಪಿಂಟೋ ಅನ್ನೋ ನ್ಯಾಯಾಧೀಶರಿಗೆ ಜೈಲಿಂದ ಬಿಡುಗಡೆ ಆಗಲು ದುಡ್ಡು ಕೊಟ್ಟಿದೀನಿ ಅಂತಾ ಯಡಿಯೂರಪ್ಪ ಆ ಡೈರಿಯಲ್ಲಿ ಬರೆದಿದ್ದು, ಡೈರಿಯನ್ನು ನಾಳೆಯೇ ಕೊಡುವುದಾಗಿ ಹೇಳಿದ ಕೆಜೆಪಿ ರಾಜ್ಯಾಧ್ಯಕ್ಷರು, ಗಾಳಿಯಲ್ಲಿ ಗುಂಡು ಹೊಡೆಯಲ್ಲಾ, ನೇರವಾಗೇ ಹೇಳುತ್ತೇನೆ ಎಂದರು.

224 ಕ್ಷೇತ್ರಗಳಲ್ಲೂ ಕೆಜೆಪಿ ಸ್ಪರ್ಧೆ: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ಜನತಾ ಪಕ್ಷ ರಾಜ್ಯದ 224 ಕ್ಷೇತ್ರಗಳಲ್ಲಿಯೂ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ. 2013ರಲ್ಲಿ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಕೆಜೆಪಿ ತದ ನಂತರ ಆದ ರಾಜಕೀಯ ಸ್ಥಿತ್ಯಂತರದ ಪರಿಣಾಮ 2018ರ ಚುನಾವಣೆಯಲ್ಲಿ ಅಂತಹ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ. ಇದಕ್ಕೆ ಸಂಪನ್ಮೂಲದ ಕೊರತೆಯೂ ಕಾರಣವಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಸಂಪನ್ಮೂಲದ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಿದ್ದು, ರಾಜ್ಯದಲ್ಲಿ ಚುನಾವಣಾ ಅಧಿಸೂಚನೆ ಹೊರ ಬೀಳುತಿದ್ದಂತೆಯೇ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಬಿಡುಗಡೆ ಮಾಡಲಿದ್ದೇವೆ. 224 ರಲ್ಲಿ 50-60 ಸ್ಥಾನಗಳಲ್ಲಿ ಕೆಜೆಪಿ ಈ ಬಾರಿ ಗೆದ್ದು, ಹೊಸ ಇತಿಹಾಸ ಸೃಷ್ಟಿಸಲಿದೆ ಎಂದರು.

ಬಿಎಸ್‌ವೈ ಸವಾಲಿನಿಂದ ವಿಪಕ್ಷದ ನಿದ್ದೆ ಹಾಳಾಗಿದೆ: ವಿಜಯೇಂದ್ರ

ರಾಜ್ಯದಲ್ಲಿರುವ ಎರಡು ರಾಷ್ಟ್ರೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಡಾ.ಸರೋಜಿನಿ ಮಹಿಷಿ ವರದಿಯ ಬಗ್ಗೆ ಪ್ರಸ್ತಾಪಿಸಿ, ಕನ್ನಡಿಗರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿವೆ. ಕನ್ನಡ ನಾಡಿನಲ್ಲಿ ಕನ್ನಡಿಗರೇ ಸಾರ್ವಭೌಮರು, ಎಲ್ಲಾ ಕ್ಷೇತ್ರಗಳಲ್ಲಿಯೂ ಕನ್ನಡಿಗರಿಗೆ ಅವಕಾಶಗಳು ದೊರೆಯಬೇಕೆಂಬ ದೂರದೃಷ್ಟಿಯನ್ನು ಹೊಂದಿಲ್ಲ. ಕೇವಲ ಬಾಯಿ ಮಾತಿನ ಕನ್ನಡ ಅಭಿವೃದ್ಧಿ ಇವುಗಳದ್ದಾಗಿದೆ. ಹಾಗಾಗಿ ಶೀಘ್ರದಲ್ಲಿಯೇ ಕೆಜೆಪಿ ಕನ್ನಡ ನಾಡಿನ ಸಮಸ್ತ ಜನರ ಅಭಿವೃದ್ಧಿಯ ದೃಷ್ಟಿಯಿಂದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಜೆಪಿ ಪಕ್ಷದ ರಾಜ್ಯಕಾರ್ಯಾಧ್ಯಕ್ಷ ಶ್ರೀಧರ್‌ ಆಜಾದ್‌, ತುಮಕೂರು ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿ ಇತರರಿದ್ದರು.

ಚುನಾವಣೆ ಮುಂದೂಡಲು ಬಿಜೆಪಿ ಹುನ್ನಾರ

ಏಕೆಂದರೆ ಇಂದಿನ ಪರಿಸ್ಥಿತಿಯನ್ನು ನೋಡಿದರೆ ಚುನಾವಣೆ ಮುಂದೂಡುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ. ಕೇಂದ್ರ ಸರಕಾರ ನಡೆಸಿದ ಆಂತರಿಕ ಸರ್ವೆಯಲ್ಲಿ ಬಿಜೆಪಿ 60 ಸೀಟುಗಳು ಬರುವುದು ಕಷ್ಟಎಂಬ ಮಾಹಿತಿ ಇದೆ. ಹಾಗಾಗಿ ಕೆಲ ತಾಂತ್ರಿಕ ಕಾರಣ ನೀಡಿ, ಚುನಾವಣೆ ಮುಂದೂಡಲು ಬಿಜೆಪಿ ಹುನ್ನಾರ ನಡೆಸುತ್ತಿದೆ. ಒಂದು ವೇಳೆ ಚುನಾವಣೆಗೆ ಮುನ್ನವೇ ಅಭ್ಯರ್ಥಿ ಪಟ್ಟಿಬಿಡುಗಡೆ ಮಾಡಿದರೆ, ನಮ್ಮ ಪಕ್ಷದ ಅಭ್ಯರ್ಥಿಯನ್ನು ಹೈಜಾಕ್‌ ಮಾಡುವ ಸಾಧ್ಯತೆ ಇದೆ ಎಂದು ಪದ್ಮನಾಭ ಪ್ರಸನ್ನಕುಮಾರ್‌ ಆತಂಕ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios