ಯಡಿಯೂರಪ್ಪ ಉನ್ನತ ಸ್ಥಾನಕ್ಕೇರದಿರಲು ಷಡ್ಯಂತ್ರ ಅಡ್ಡಿ: ಸಿಎಂ ಬೊಮ್ಮಾಯಿ ಬೇಸರ

ಶ್ರೀ ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ. ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರು ಭಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರಧಾನ.

Former Chief Minister B.S. Yediyurappa honoured Jagadguru Renukacharya award gow

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಮಾ.5): ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದಲ್ಲಿ ಇಂದು ಜಗದ್ಗುರು ರೇಣುಕಾಚಾರ್ಯ ಜಯಂತಿ , ಯುಗಮಾನೋತ್ಸವದ ಕಾರ್ಯಕ್ರಮ ನಡೆಯಿತು. ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯ ಭಾಗಿಯಾಗಿದ್ದರು. ಪ್ರತಿವರ್ಷದಂತೆ ಪೀಠದಿಂದ ನೀಡುವ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಯನ್ನು ಮಾಜಿ ಸಿಎಂ ಬಿ ಎಸ್ ಯಡಿಯ್ಯೂರಪ್ಪನವರಿಗೆ ಪ್ರಧಾನ ಮಾಡಲಾಯಿತು. ಇದೇ ಸಮಯದಲ್ಲಿ ಯಡಿಯ್ಯೂರಪ್ಪನವರ ಕೈ ಗೆ ಬಂಗಾರದ ಕಡಗವನ್ನು ರಂಭಾಪುರೀ ಶ್ರೀಗಳು ಹಾಕಿದರು. ಪ್ರಶಸ್ತಿ ಪ್ರಧಾನ ಮಾಡಿದ ನಂತರ ಯಡಿಯ್ಯೂರಪ್ಪನವರ ಕೈಗೆ  ಚಿನ್ನದ ಕಡಗವನ್ನು ಡಾ.ವೀರಸೋಮೇಶ್ವರ ಜಗದ್ಗುರು ಗಳು ತೊಡಿಸಿದರು. 

ಯಡಿಯೂರಪ್ಪ ಉನ್ನತ ಸ್ಥಾನಕ್ಕೇರದಿರಲು ಷಡ್ಯಂತ್ರ ಅಡ್ಡಿ : 
ಬಿ ಎಸ್ ಯಡಿಯೂರಪ್ಪನವರಿಗೆ ರೇಣುಕಾಚಾರ್ಯ ಪ್ರಶಸ್ತಿ ನನಗೆ ಸಂತೋಷ ತಂದಿದೆ, 40 ವರ್ಷಗಳ ಅವರ ಹೋರಾಟಕ್ಕೆ ಬೆಲೆ ಕಟ್ಟಲಾಗದು  ಎಂದು ತಿಳಿಸಿದ ಅವರು ಷಡ್ಯಂತ್ರ ಅವರನ್ನ ಹಿಂದೆ ಎಳೆಯುವ ಪ್ರಯತ್ಮ ಮಾಡಿದರು , ಕೆಲವರ ಷಡ್ಯಂತ್ರ ದ ಫಲವಾಗಿ  ಬಿ ಎಸ್  ಯಡಿಯೂರಪ್ಪನವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದರು. ಅಲ್ಲದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ  ಈ ಕ್ಷೇತ್ರ ಸೇರಿದಂತೆ ರಾಜ್ಯದ ಎಲ್ಲಾ ಧಾರ್ಮಿಕ ಕ್ಷೇತ್ರಗಳನ್ನು ಜಾತಿ, ಮತ ಬೇಧವಿಲ್ಲದೆ ಅಭಿವೃದ್ಧಿಪಡಿಸಿದ್ದಾರೆ. ಬೆಂಗಳೂರಿನ ಹಜ್ ಭವನಕ್ಕೆ 40 ಕೋಟಿ ರೂ. ಕೊಟ್ಟವರು ಯಡಿಯೂರಪ್ಪ ಅವರು ಎಂದರು. ಪ್ರಚಲಿತ ಸಮಸ್ಯೆಗಳಾದ ಜಾರಿ, ಮತ, ಪಂಥ, ಬೇಧ, ಭಾವಗಳನ್ನು ತೊಡದುಹಾಕಲು ರಂಭಾಪುರಿ ಶ್ರೀಗಳು ನಿರಂತರ ಅಭಿಯಾನ ಮಾಡುತ್ತಿದ್ದಾರೆ. ಹಲವಾರು ಸವಾಲುಗಳನ್ನು ಎದುರಿಸಿ ಪೀಠವನ್ನು ಹಾಗೂ ಸಮಾಜವನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಆತ್ಮ ಸಾಕ್ಷಿಯಿಂದ ನಡೆದ್ರೆ ನಿಜವಾದ ಸಾಧಕನಾಗುತ್ತಾನೆ : ಸಿಎಂ 
ಆತ್ಮ ಸಾಕ್ಷಿಯಿಂದ ನಡೆಯೋದು ಎಂದರೆ ಸತ್ಯದ ದಾರಿಯಲ್ಲಿ ನಡೆಯೋದು, ಹಾಗೆ ನಡೆದುಕೊಳ್ಳುವವನು ನಿಜವಾದ ಸಾಧಕನಾಗುತ್ತಾನೆ. ಅದನ್ನೇ ಆದಿಗುರು ರೇಣುಕಾಚಾರ್ಯರು ಪ್ರತಿಪಾದಿಸಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಅವರು ಇಂದು   ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ರಂಭಾಪುರಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾ ರಥೋತ್ಸವ ಹಾಗೂ ಶ್ರೀ ಜಗ್ದಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. 

ಟೀಕೆ ಮಾಡುವವರು ಈಗ ಅವರೇ ಬಂದು ಮಠಗಳಿಗೆ ಭೇಟಿ : 
ಮಠ ಮಾನ್ಯಗಳಿಗೆ ಅನುದಾನ ಯಾಕೆ ಕೊಡಬೇಕು ಎಂದು ಟೀಕೆ ಮಾಡುವವರು ಈಗ ಅವರೇ ಬಂದು ಮಠಗಳಿಗೆ ಭೇಟಿ ಮಾಡುತ್ತಿದ್ದಾರೆ. ಚುನಾವಣೆಗೆ ಬಂದಾಗ ಮಾತ್ರ ಗುರುಗಳು, ಮಠ ನೆನಪಾಗುತ್ತದೆ. ನಮ್ಮದು ಹಾಗಲ್ಲ. ವರ್ಷದ 365 ದಿನವೂ ಮಠದ ಬಗ್ಗೆ, ಜಗದ್ಗರುಗಳ ಬಗ್ಗೆ ವಿಶೇಷ ಗೌರವ ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದರು. ಬೆಳಗಾವಿಯ ನಿಪ್ಪಾಣಿಯಿಂದ ಹಿಡಿದು ಕೊಳ್ಳೇಗಾಲ ವರೆಗೆ, ಬೀದರ್‌ನಿಮದ ಹಿಡಿದು ಚಾಮರಾಜ ನಗರ ವರೆಗೆ ಸ್ವತಂತ್ರ್ಯ ಪೂರ್ವದಲ್ಲಿ ಯಾರ ಸರ್ಕಾವೂ ಇರಲಿಲ್ಲ. ಆ ಸಂದರ್ಭದಲ್ಲಿ ಬಡವರಿಗೆ ಅನ್ನ, ಅಕ್ಷರ, ಜ್ಞಾನ ದಾಸೋಹ ಮಾಡಿದ್ದು ಯಾವ ವ್ಯವಸ್ಥೆ, ಸ್ವಾತಂತ್ರ್ಯ ಪೂರ್ವದಲ್ಲಿ ಹೆಣ್ಣು ಮಕ್ಕಳಿಗೆ ಹಾಸ್ಟೆಲ್‌ಗಳನ್ನು ಮಾಡಿದ್ದು, ಸಾವಿರಾರು ಜನರಿಗೆ ಆಶ್ರಯಕೊಟ್ಟವರು ಮಠ ಮಾನ್ಯಗಳು ಈ ಕಾರಣಕ್ಕೆ ನಮ್ಮ ಕರ್ನಾಟಕ ಶಿಕ್ಷಣ, ಜ್ಞಾನಭರಿತವಾಗಿದೆ ಎಂದರು.

ಚಿಕ್ಕಮಗಳೂರು: ಇಂದು ಬಿಎಸ್‌ವೈಗೆ ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ

ಅಕ್ಷರಕೊಟ್ಟ ಗುರುವನ್ನು ಮರೆಯಬಾರದು ಹಾಗೇ ಹೊಟ್ಟೆಗೆ ಅನ್ನ ಕೊಟ್ಟು ಮತ್ಸಕಕ್ಕೆ ಜ್ಞಾನವನ್ನು ಕೊಟ್ಟವರನ್ನು ಎಂದಿಗೂ ಮರೆಯಬಾರದು. ಅವರು ಅನುದಾನ ತಗೊಂಡು ಬಡಮಕ್ಕಳಿಗೆ ಆಶ್ರಯ ಕೊಡುತ್ತಾರೆ. ಶಾಲೆ, ಹಾಸ್ಟೆಲ್ ಕಟ್ಟುತ್ತಾರೆ. ಹೀಗಾಗಿ ಅವರು ಮಾಡಿರುವ ಪರೋಪಕಾರಿ ಕೆಲಸ ಸರ್ಕಾರದ ಕೆಲಸವೇ ಆಗಿದೆ. ಅದನ್ನು ಕೊಡುವುದರಲ್ಲಿ ತಪ್ಪೇನಿದೆ ಎಂದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಶಾಸಕರುಗಳಾದ ಸಿ.ಟಿ.ರವಿ, ಡಿ.ಎಸ್.ಸುರೇಶ್, ಎಂ.ಪಿ.ಕುಮಾರಸ್ವಾಮಿ ಸೇರಿದಂತೆ ವಿವಿಧ ಮಠಾಧೀಶರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios