ಅಮೃತ್‌ ಮಹಲ್ ಕಾವಲು ಜಮೀನು ಮಂಜೂರು ಮಾಡುವ ಅಧಿಕಾರ ನನ್ನ ಕೈಯಲ್ಲಿ ಇಲ್ಲ. ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಕಾನೂನು ತಜ್ಞರ ಸಲಹೆ ಪಡೆದು ತೀರ್ಮಾನಕ್ಕೆ ಬರಲಾಗುವುದು ಎಂದ ಪಶುಸಂಗೋಪನ ಸಚಿವ ಕೆ.ವೆಂಕಟೇಶ್‌

ಹೊಸದುರ್ಗ(ಜ.30): ಅಮೃತ್‌ ಮಹಲ್ ಕಾವಲು ಜಮೀನು ಮಂಜೂರು ಮಾಡುವ ಅಧಿಕಾರ ನನ್ನ ಕೈಯಲ್ಲಿ ಇಲ್ಲ. ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಕಾನೂನು ತಜ್ಞರ ಸಲಹೆ ಪಡೆದು ತೀರ್ಮಾನಕ್ಕೆ ಬರಲಾಗುವುದು ಎಂದು ಪಶುಸಂಗೋಪನ ಸಚಿವ ಕೆ.ವೆಂಕಟೇಶ್‌ ಹೇಳಿದರು. ತಾಲೂಕಿನ ಕೈನಡು ಅಮೃತ್ ಮಹಲ್ ತಳಿ ಸಂವರ್ಧನಾ ಉಪಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಕಾವಲುಗಾರರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

ನಿಮ್ಮ ಬೇಡಿಕೆ ಸರಿ ಇದೆ. ಈ ಭಾಗದ ಶಾಸಕ ಬಿ.ಜಿ.ಗೋವಿಂದಪ್ಪ ಹಾಗೂ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಸಿಎಂ ಬಳಿ ಕರೆದುಕೊಂಡು ಹೋಗಿ ಈ ಬಗ್ಗೆ ಸಿಎಂಗೆ ಮಾಹಿತಿ ನೀಡಲಾಗುವುದು. ತಮ್ಮೆಲ್ಲರಿಗೂ ನ್ಯಾಯ ಒದಗಿಸುವ ಕೆಲಸ ನಮ್ಮ ಸರ್ಕಾರ ಮಾಡಲಿದೆ. ಎಲ್ಲರ ಪರವಾಗಿ ನಮ್ಮ ಸರ್ಕಾರ ಅಭಿವೃದ್ಧಿ ಕೆಲಸ ಮಾಡುತ್ತಿದೆ. ನಿಮ್ಮ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಸಂವಿಧಾನ ಬದಲಾಯಿಸಿದ್ದು ಯಾರು ಅನ್ನೋದು ಸಾಕ್ಷ್ಯ ಸಮೇತ ಇತಿಹಾಸದಲ್ಲಿ ದಾಖಲಾಗಿದೆ: ಕಾಂಗ್ರೆಸ್‌ಗೆ ಗುಮ್ಮಿದ ಯದುವೀರ್ ಒಡೆಯರ್!

ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ರಾಜ್ಯದ 6 ಜಿಲ್ಲೆ 18 ತಾಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 53ಸಾವಿರ ಎಕೆರೆ ಪ್ರದೆಶದಲ್ಲಿ ಅಮೃತ್‌ ಮಹಲ್‌ ಕಾವಲು ಪ್ರದೇಶವಿದ್ದು, ಹೊಸದುರ್ಗ ತಾಲೂಕಿನಲ್ಲಿಯೇ 8 ಸಾವಿರ ಎಕೆರೆ ಅಮೃತ್‌ ಮಹಲ್‌ ಕಾವಲು ಪ್ರದೆಶವಿದೆ. ಇಲ್ಲಿಯ ಕಾವಲುದಾರರು ತಲ ತಲಾಂತರಗಳಿಂದ ಈ ಪ್ರದೇಶವನ್ನು ಕಾವಲು ಕಾಯ್ದುಕೊಂಡು ಬಂದಿರುವ ಹಿನ್ನೆಲೆ ಇಲ್ಲಿಯವರೆಗೂ ಈ ಪ್ರದೇಶ ಯಾವುದೇ ಒತ್ತುವರಿಯಾಗದೆ ಉಳಿದಿದೆ. 2015ರಲ್ಲಿನ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಅಂದಿನ ಪಶುಸಂಗೋಪನಾ ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಅಧ್ಯಕ್ಷತೆಯಲ್ಲಿ ಕಂದಾಯ, ಪಶು ಇಲಾಖೆ, ಕಾವಲು ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆದು ಕಾವಲುದಾರರಿಗೆ ಜಮೀನು ಮಂಜೂರು ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಂಡಿತ್ತು. ಆದರೆ ಇಲ್ಲಿಯವರೆಗೂ ಯಾವುದೇ ಪ್ರಕ್ರಿಯೇ ನಡೆದಿಲ್ಲ ನಿಮ್ಮ ಅಧಿಖಾರದ ಅವಧಿಯಲ್ಲಾದರೂ ಇವರಿಗೆ ತಲಾ 10 ಎಕರೆ ಜಮೀನು ಮಂಜೂರು ಮಾಡಿ ಬ ಖಾಯಂ ಸಾಗುವಳಿ ಪತ್ರ ನೀಡಬೇಕು. ಇದನ್ನೇ ನಂಬಿಕೊಂಡು ಬಂದಿರುವುದಕ್ಕೆ ಅವರಿಗೆ ರಕ್ಷಣೆ ಇಲ್ಲದಿರುವುದರಿಂದ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಅಜ್ಜಂಪುರ ಅಮೃತ್‌ ಮಹಲ್‌ ಸಂವರ್ಧನಾ ಕೇಂದ್ರದ ಉಪ ನಿರ್ದೇಶಕ ಡಾ.ಜಿ.ಪಿ.ರಾಘವೇಂದ್ರ ಪಾಟೀಲ್‌ ಸೇರಿ ಪಶುಸಂಗೋಪನಾ ಇಲಾಕೆಯ ವೈದ್ಯರು, ಸ್ಥಳೀಯ ಮುಖಂಡರು, ಅಮೃತ್‌ ಮಹಲ್‌ ಕಾವಲುದಾರರು ಹಾಜರಿದ್ದರು.

ಕಾವಲುದಾರರ ಬೇಡಿಕೆ ಕೇಳಿ ತಡಬಡಾಯಿಸಿದ ಸಚಿವ:

ಸಚಿವರ ಬಳಿ ತಮ್ಮ ಬೇಡಿಕೆ ಸಲ್ಲಿಸುವ ಉದ್ದೇಶದಿಂದ ರಾಜ್ಯದ 6 ಜಿಲ್ಲೆಗಳ 18 ತಾಲೂಕುಗಳ ವ್ಯಾಪ್ತಿಯಲ್ಲಿರುವ ಅಮೃತ್‌ಮಹಲ್‌ ಕಾವಲುದಾರರು ಈ ಸಭೆಯಲ್ಲಿ ಭಾಗವಹಿಸಿದ್ದರು. ಸಭೆ 2ಗಂಟೆ ನಿಗಧಿಯಾಗಿತ್ತಾದರೂ ಸಚಿವರು 2ಗಂಟೆ ತಡವಾಗಿ ಸಭೆಗೆ ಬಂದರು. ಸಭೆಯಲ್ಲಿ ನಾಡಗೀತೆ, ಉದ್ಘಾಟನೆ, ಪ್ರಾಸ್ತಾವಿಕ ನುಡಿ ಕಾರ್ಯಕ್ರಮದ ಪಟ್ಟಿ ಸಿದ್ದವಾಗಿತ್ತು. ಆದರೆ ಸಭೆಗೆ ಸಚಿವರು ಬರುತ್ತಿದ್ದಂತೆ ಇದಾವುದನ್ನು ಮಾಡದೆ ನೇರವಾಗಿ ತಮ್ಮ ಬೇಡಿಕೆ ಹೇಳಿ ಎಂದರು.

ಕಾವಲುದಾರರು ತಮ್ಮ ಬೇಡಿಕೆಯ ವರದಿ ಓದಿದಾಗ ಅವರ ಬಗ್ಗೆ ಅರ್ಥವಾಗದೆ ತಮ್ಮ ಪಕ್ಕದಲ್ಲಿದ್ದ ಶಾಸಕರನ್ನು ಏನಿದು ಎಂದು ಕೇಳಿದರು ಆಗ ಶಾಸಕರು ಎಲ್ಲವನ್ನು ಬಿಡಿಸಿ ಹೇಳಿದಾಗ ಇದು ನನ್ನ ಕಯ್ಯಲ್ಲಿ ಇಲ್ಲ ಈ ಬಗ್ಗೆ ಸಿಎಂ ಬಳಿ ಮಾತನಾಡುತ್ತೇನೆ ಎಂದು ಹೇಳಿದರು. ಈ ವೇಳೆ ಅವರು ತೋರಿದ ವರ್ತನೆಯನ್ನು ಕಂಡ ಕಾವಲುದಾರರು ಸಚಿವರಿಗೆ ತಮ್ಮ ಇಲಾಕೆಯ ವ್ಯಾಪ್ತಿಯ ಅರಿವು ಇದ್ದಂತಿಲ್ಲ ಇಂತಹ ಸಚಿವರಿಂದ ನಮ್ಮ ಬೇಡಿಕೆ ಈಡೇರುತ್ತಾ ಎಂಬ ಸಂಶಯವನ್ನು ಸಭೆಯಲ್ಲಿಯೇ ವ್ಯಕ್ತ ಪಡಿಸುತ್ತಿದ್ದು ಕಂಡು ಬಂತು.

ದರ್ಶನ್ ಮನೆಗೆ ಹೋಗಿದ್ದೆವು ಎಂಬುದು ಸುಳ್ಳು: ರೇಣುಕಾಸ್ವಾಮಿ ತಂದೆ ಕಾಶಿನಾಥ ಶಿವನಗೌಡ್ರು

ಮುಡಾ ಹಗರಣ ಕಾರ್ಯಕರ್ತರಿಗೆ ಗೊಂದಲ ಬೇಡ:

ಮುಡಾ ಹಗರಣ ಬಿಜೆಪಿಯವರ ಕೂಸು. ಇದನ್ನು ಸಿದ್ದರಾಮಯ್ಯನವರ ಹೆಸರಿಗೆ ಮಸಿ ಬಳಿಯಲು ಬಳಸಿಕೊಳ್ಳುತ್ತಾದ್ದಾರೆ. ಈ ಬಗ್ಗೆ ನಮ್ಮ ಕಾರ್ಯಕರ್ತರು ವಿಚಲಿರಾಗುವುದು ಬೇಡ ಎಂದು ಪಶುಸಂಗೋಪನಾ ಸಚಿವ ವೆಂಕಟೇಶ್‌ ಹೇಳಿದರು.

ಪಟ್ಟಣದ ಕಾಂಗ್ರೇಸ್‌ ಕಚೇರಿಯಲ್ಲಿ ತಮ್ಮ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರು ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕಾರ್ಯ ಮಾಡುತ್ತಿರುವುದನ್ನು ಸಹಿಸದೆ, ಸಣ್ಣಪುಟ್ಟ ವಿಚಾರಗಳನ್ನು ಬೀದಿಗೆ ತರುತ್ತಿದ್ದಾರೆ. ಮುಡಾ ಸೈಟ್ ಹಂಚಿದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಆಗ ಇವರೇ ಬದಲಿ ನಿವೇಶನ ನೀಡಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆಗೆ ಮುಡಾ ಅಧಿಕಾರಿಗಳನ್ನು ಒಳಪಡಿಸಬೇಕು. ಮುಡಾ ಹಗರಣದಲ್ಲಿ ಸಿದ್ಧರಾಮಯ್ಯನವರ ಪಾತ್ರವೇ ಇಲ್ಲ, ಆದರೂ ಅವರನ್ನು ತನಿಖೆಗೆ ಒಳಪಡಿಸಲಾಗಿ ಎಂದು ಸಚಿವರು ತಿಳಿಸಿದರು.