ಕಾಂಗ್ರೆಸ್‌ ಟಿಕೆಟ್‌ ನನಗೆ ಸಿಗೋದು ಖಚಿತ: ರವಿಕುಮಾರ್‌

ಮಂಡ್ಯ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ನನಗೆ ಸಿಗೋದು ಖಚಿತ. ನಾನೇ ಅಭ್ಯರ್ಥಿ. ಇದರಲ್ಲಿ ಯಾವುದೇ ಅನುಮಾನ ಬೇಡ. ಅಪಪ್ರಚಾರಗಳಿಗೆ ಕಿವಿಗೊಡದಂತೆ ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಮುಖಂಡ ರವಿಕುಮಾರ್‌ ಗಣಿಗ ಮತದಾರರಲ್ಲಿ ಮನವಿ ಮಾಡಿದರು.

I am sure I will get Congress ticket: Ravikumar snr

  ಮಂಡ್ಯ :   ಮಂಡ್ಯ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ನನಗೆ ಸಿಗೋದು ಖಚಿತ. ನಾನೇ ಅಭ್ಯರ್ಥಿ. ಇದರಲ್ಲಿ ಯಾವುದೇ ಅನುಮಾನ ಬೇಡ. ಅಪಪ್ರಚಾರಗಳಿಗೆ ಕಿವಿಗೊಡದಂತೆ ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಮುಖಂಡ ರವಿಕುಮಾರ್‌ ಗಣಿಗ ಮತದಾರರಲ್ಲಿ ಮನವಿ ಮಾಡಿದರು.

ತಾಲೂಕಿನ ಹಬ್ಬದ ಮಾರನಹಳ್ಳಿ, ಚಂದಗಾಲು, ಮಾಯಣ್ಣನ ಕೊಪ್ಪಲು, ಚಲ್ಲನಾಯಕನಹಳ್ಳಿ, ಬಿ.ಹೊಸೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.

ಕಳೆದ ಚುನಾವಣೆಯಲ್ಲಿ ನೀವೆಲ್ಲರೂ ಸಾಕಷ್ಟುಮತಗಳನ್ನು ನನಗೆ ಕೊಟ್ಟಿದ್ದೀರಿ. ಗೆಲುವಿನ ಹತ್ತಿರಕ್ಕೆ ತಂದಿದ್ದಿರಿ. ಆ ಋುಣ ನನ್ನ ಮೇಲಿದೆ. ಅದನ್ನು ತೀರಿಸುವ ಅವಕಾಶವೂ ದೊರಕಿದೆ. 2023ರ ಚುನಾವಣೆಯಲ್ಲಿ ಪಕ್ಷ ನನಗೇ ಟಿಕೆಟ್‌ ನೀಡಲಿದ್ದು, ಮತದಾರರು ನನ್ನನ್ನು ಗೆಲ್ಲಿಸುವ ಮೂಲಕ ಜನರ ಸೇವೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.

ಜನರಿಗೆ ಉಪಯೋಗವಾಗುವಂತಹ ಗ್ಯಾರಂಟಿ ಕಾರ್ಡ್‌ಗಳನ್ನು ಕಾಂಗ್ರೆಸ್‌ ಪಕ್ಷ ವಿತರಿಸುತ್ತಿದೆ. 200 ಯೂನಿಟ್‌ ಉಚಿತ ವಿದ್ಯುತ್‌, ಗೃಹಿಣಿಯರಿಗೆ ಮಾಸಿಕ 2000 ರು., ಬಡವರಿಗೆ ಪ್ರತಿ ತಿಂಗಳು 10 ಕೆಜಿ ಉಚಿತ ಅಕ್ಕಿ ನೀಡುವ ಭರವಸೆಯನ್ನು ಕೊಟ್ಟಿದೆ. ಇದೆಲ್ಲವೂ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ದಿನದಿಂದಲೇ ಚಾಲನೆಗೆ ಬರಲಿವೆ ಎಂದು ನುಡಿದರು.

ಅಧಿಕಾರವನ್ನು ನನ್ನ ಸ್ವಾರ್ಥಕ್ಕಾಗಿ ಕೇಳುತ್ತಿಲ್ಲ. ಅಭಿವೃದ್ಧಿಗಾಗಿ ಜನರ ಬಳಿ ಬೇಡುತ್ತಿದ್ದೇನೆ. ಮಂಡ್ಯ ಜಿಲ್ಲಾ ಕೇಂದ್ರ ಅಭಿವೃದ್ಧಿಯಿಂದ ಸಾಕಷ್ಟುವಂಚಿತವಾಗಿದೆ. ಅಭಿವೃದ್ಧಿಗೆ ಪೂರಕವಾದ ಅವಕಾಶಗಳಿದ್ದರೂ ಇಚ್ಛಾಶಕ್ತಿಯ ಕೊರತೆಯಿಂದ ಜಿಲ್ಲೆ ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ ಎಂದರು.

ಕಾಂಗ್ರೆಸ್‌ ಪಕ್ಷವನ್ನು ಬಹುಮತದೊಂದಿಗೆ ಗೆಲ್ಲಿಸಿದಾಗ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ. ಬಿಜೆಪಿ ಒಂದು ಭ್ರಷ್ಟಸರ್ಕಾರ. ಅದನ್ನು ಕಿತ್ತೊಗೆದು ಕಾಂಗ್ರೆಸ್‌ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು. ಬೆಲೆ ಏರಿಕೆಗೆಲ್ಲಾ ಬಿಜೆಪಿ ಮೂಲ ಕಾರಣವಾಗಿದೆ. ಜನರ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿ ಹಣ ಲೂಟಿಯಲ್ಲಿ ತೊಡಗಿದೆ. ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಗಬೇಕಾದರೆ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುವಂತೆ ಸಲಹೆ ನೀಡಿದರು.

ಹಬ್ಬದಮಾರನಹಳ್ಳಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ಕೊಟ್ಟಕಾಂಗ್ರೆಸ್‌ ಮುಖಂಡ ರವಿಕುಮಾರ್‌ ಗೌಡ ಅವರನ್ನು ಗ್ರಾಮದ ಕನಕ ಯುವಕ ಮಿತ್ರರು ಅದ್ಧೂರಿಯಾಗಿ ಸ್ವಾಗತ ಕೋರಿದರು.

ತಂಡೋಪತಂಡವಾಗಿ ಜೆಡಿಎಸ್‌ಗೆ

 ಪಾವಗಡ :  ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದ ಜನಪರ ಕಾರ್ಯಕ್ರಮಗಳ ಹಿನ್ನಲೆ ವಿವಿಧ ಪಕ್ಷಗಳ ಕಾರ್ಯಕರ್ತರು ತಂಡೋಪತಂಡವಾಗಿ ಜೆಡಿಎಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್‌ ಅಧಿಕೃತ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪ ಹೇಳಿದರು.

ಪಟ್ಟಣದ ಮೆಹರ್‌ ಬಾಬಾ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನಿಂದ ಸುಮಾರು 160ಕ್ಕೂ ಹೆಚ್ಚು ಸದಸ್ಯರನ್ನು ಜೆಡಿಎಸ್‌ಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.

ತಾವು ಶಾಸಕರಾಗಿದ್ದ ಅವಧಿಯ ಜನಪರ ಕಾರ್ಯಕ್ರಮ ಹಾಗೂ ಪಕ್ಷದ ನಾಯಕತ್ವದ ಹಿನ್ನಲೆಯಲ್ಲಿ ಕಾಂಗ್ರೆಸ್‌ ಬಿಜೆಪಿಯಿಂದ ಆನೇಕ ಮಂದಿ ಜೆಡಿಎಸ್‌ಗೆ ಸೇರ್ಪಡೆಯಾಗುತ್ತಿದ್ದು, ಜೆಡಿಎಸ್‌ನತ್ತ ಜನತೆ ಒಲವು ವ್ಯಕ್ತವಾಗುತ್ತಿದೆ. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಪಕ್ಷದಲ್ಲಿ ಉನ್ನತಾ ಸ್ಥಾನಮಾನ ನೀಡುವ ಮೂಲಕ ವಿಶೇಷವಾಗಿ ಪರಿಗಣಿಸಲಾಗುವುದಾಗಿ ಹೇಳಿದರು.

ಇದೇ ವೇಳೆ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆರ್‌.ಸಿ.ಅಂಜಿನಪ್ಪ, ರಾಜ್ಯ ಜೆಡಿಎಸ್‌ ಘಟಕದ ಉಪಾಧ್ಯಕ್ಷ ಎನ್‌.ತಿಮ್ಮಾರೆಡ್ಡಿ ಇತರೆ ಮುಖಂಡರು ಮಾತನಾಡಿದರು. ಜೆಡಿಎಸ್‌ ತಾಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ, ಕಾರ್ಯಾಧ್ಯಕ್ಷ ಎನ್‌.ಎ.ಈರಣ್ಣ, ಪ್ರಧಾನ ಕಾರ್ಯದರ್ಶಿ ಗೋವಿಂದಬಾಬು, ಗೌರವಾಧ್ಯಕ್ಷ ರಾಜಶೇಖರಪ್ಪ, ಗುಟ್ಟಹಳ್ಳಿ ಮಣಿ, ಮಾಜಿ ಪುರಸಭೆ ಸದಸ್ಯರಾದ ಮನುಮಹೇಶ್‌, ಜಿ.ಎ.ವೆಂಕಟೇಶ್‌, ನಾಗೇಂದ್ರಪ್ಪ, ವಸಂತ್‌ಕುಮಾರ್‌, ಗೋಪಾಲ್‌ ಕಾವಲಗೆರೆ, ರಾಮಾಂಜಿನಪ್ಪ ಅಪ್‌ಬಂಡೆ, ಗೋಪಾಲ್‌ ಜಾಲೋಡು, ಪರಮೇಶ್‌ಕೆ.ಟಿ.ಹಳ್ಳಿ, ಸೋಡಾ ಮಂಜುನಾಥ್‌ ಹಾಗೂ ಆನೇಕ ಮಂದಿ ಮುಖಂಡರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios