ಬೆಳಗಾವಿ(ಏ.09): ಪಕ್ಷ ಬಯಸಿದರೆ ನಾನು ರಾಜ್ಯದ ಮುಖ್ಯಮಂತ್ರಿಯಾಗಲು ಸದಾ ಸಿದ್ಧ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದ ಯೋಗಿ ಸರ್ಕಾರದ ಮಾದರಿಯಲ್ಲಿಯೇ ಕರ್ನಾಟಕ ಸರ್ಕಾರ ಕೊಡುತ್ತೇನೆ. ಈ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರದ ಹಾದಿಯಲ್ಲಿಯೇ ನಮ್ಮ ಸರ್ಕಾರವನ್ನು ನಡೆಸುತ್ತೇನೆ ಎಂದು ಹೇಳಿದ್ದಾರೆ.

'ಸಿಎಂ ವಿರುದ್ಧವೇ ಕಿಡಿಯಾಡುವ ಈಶ್ವರಪ್ಪ, ಯತ್ನಾಳ್‌ ವಿರುದ್ಧ ಗಪ್‌ಚುಪ್‌: ಕಟೀಲ್‌ ಅಸಮರ್ಥ ಅಧ್ಯಕ್ಷ'

ನಾನು ಸಿಎಂ ಹುದ್ದೆ ಅಪೇಕ್ಷೆ ಪಡುವುದರಲ್ಲಿ ಏನೂ ತಪ್ಪಿಲ್ಲ. ನಾವು ಪಕ್ಷವನ್ನು ಕಟ್ಟಿದ್ದೇವೆ. ಯಾರಾರ‍ಯರೋ ಬಂದು ಮೊನ್ನೆ ಮೊನ್ನೆ ಪಕ್ಷಕ್ಕೆ ಬಂದವರು. ಬೆಂಗಳೂರು ಬಿಟ್ಟು ಹೊರಗೆ ಬಾರದವರು ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳುತ್ತಿದ್ದಾರೆ. ನಾನು ರೈಲ್ವೆ ಮಂತ್ರಿಯಾಗಿದ್ದ ವೇಳೆ ಚಾಮರಾಜನಗರದಿಂದ ಬೀದರ್‌ವರೆಗೆ ಪಕ್ಷ ಕಟ್ಟುವ ಕೆಲಸದಲ್ಲಿ ಭಾಗಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.