ಕೊರೋನಾ ಕಾಟ: ಆರು ತಿಂಗಳ ಬಳಿಕ ಹೈದರಾಬಾದ್‌ ಬಸ್‌ ಸಂಚಾರ ಪುನಾರಂಭ

ವೇಗದೂತ ಮತ್ತು ಐಷಾರಾಮಿ ಬಸ್‌ಗಳು ಗದಗ, ಕೊಪ್ಪಳ, ಗಂಗಾವತಿ, ಸಿಂಧನೂರು, ರಾಯಚೂರು, ಮೆಹಬೂಬ ನಗರ, ಝಡ್‌ ಚರ್ಲಾ ಮಾರ್ಗವಾಗಿ ಸಂಚಾರ|  ಬೆಳಗ್ಗೆ 8 ಗಂಟೆಗೆ ಹೊರಡುವ ವೇಗದೂತ ಬಸ್‌ ನವಲಗುಂದ, ರೋಣ, ಗಜೇಂದ್ರಗಡ, ಕುಷ್ಟಗಿ, ಸಿಂಧನೂರು, ರಾಯಚೂರು, ಮೆಹಬೂಬ್‌ ನಗರ, ಝಡ್‌ ಚರ್ಲಾ ಮಾರ್ಗವಾಗಿ ಸಂಚಾರ| 
 

Hyderabad Bus Service Resumes After Six Months due to Coronavirus

ಹುಬ್ಬಳ್ಳಿ(ಸೆ.30): ಕೋವಿಡ್‌- 19 ಲಾಕ್‌ಡೌನ್‌ ಕಾರಣದಿಂದ ಕಳೆದ ಆರು ತಿಂಗಳಿಂದ ಸ್ಥಗಿತಗೊಂಡಿದ್ದ ಹುಬ್ಬಳ್ಳಿಯಿಂದ ಹೈದರಾಬಾದ್‌ಗೆ ಸಾರಿಗೆ ಬಸ್‌ ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ.

ಸರ್ಕಾರದ ಮಾರ್ಗದರ್ಶಿ ನಿರ್ದೇಶನಗಳ ಪ್ರಕಾರ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಬಸ್‌ಗಳ ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ಬಸ್‌ಗಳು ಗೋಕುಲ ರಸ್ತೆಯ ಹೊಸ ಬಸ್‌ ನಿಲ್ದಾಣ ಹಾಗೂ ಹೊಸೂರು ಪ್ರಾದೇಶಿಕ ಬಸ್‌ ನಿಲ್ದಾಣದಿಂದ ಹೊರಡುತ್ತವೆ ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌. ರಾಮನಗೌಡರ ತಿಳಿಸಿದ್ದಾರೆ.

ಮತ್ತೊಂದು ಚುನಾವಣೆ: ಗರಿಗೆದರಿದ ರಾಜಕೀಯ ಚಟುವಟಿಕೆ

ಮೊದಲ ಹಂತದಲ್ಲಿ 1 ಎಸಿ ಸ್ಲೀಪರ್‌(ರಾತ್ರಿ 8ಕ್ಕೆ), 1 ನಾನ್‌ ಎಸಿ ಸ್ಲೀಪರ್‌(ಸಂಜೆ 7ಕ್ಕೆ), 1 ರಾಜಹಂಸ( ಸಂಜೆ 7.30ಕ್ಕೆ) ಹಾಗೂ 2 ವೇಗದೂತ ಬಸ್‌ಗಳ(ಬೆಳಗ್ಗೆ 7 ಮತ್ತು 8ಕ್ಕೆ) ಸಂಚಾರವನ್ನು ಆರಂಭಿಸಲಾಗಿದೆ.
ಬೆಳಗ್ಗೆ 7 ಗಂಟೆಗೆ ಹೊರಡುವ ವೇಗದೂತ ಮತ್ತು ಐಷಾರಾಮಿ ಬಸ್‌ಗಳು ಗದಗ, ಕೊಪ್ಪಳ, ಗಂಗಾವತಿ, ಸಿಂಧನೂರು, ರಾಯಚೂರು, ಮೆಹಬೂಬ ನಗರ, ಝಡ್‌ ಚರ್ಲಾ ಮಾರ್ಗವಾಗಿ ಸಂಚರಿಸುತ್ತವೆ. ಬೆಳಗ್ಗೆ 8 ಗಂಟೆಗೆ ಹೊರಡುವ ವೇಗದೂತ ಬಸ್‌ ನವಲಗುಂದ, ರೋಣ, ಗಜೇಂದ್ರಗಡ, ಕುಷ್ಟಗಿ, ಸಿಂಧನೂರು, ರಾಯಚೂರು, ಮೆಹಬೂಬ್‌ ನಗರ, ಝಡ್‌ ಚರ್ಲಾ ಮಾರ್ಗವಾಗಿ ಸಂಚರಿಸುತ್ತದೆ.

ಕೋವಿಡ್‌- 19 ಮಾರ್ಗಸೂಚಿ ನಿರ್ದೇಶನಗಳ ಪ್ರಕಾರ ಎಲ್ಲ ಪ್ರಯಾಣಿಕರು ಮಾಸ್ಕ್‌ ಧರಿಸುವದು ಕಡ್ಡಾಯ. ಬಸ್ಸಿನಲ್ಲಿ ಬ್ಲಾಂಕೆಟ್‌ ಮತ್ತು ನೀರಿನ ಬಾಟಲಿಗಳನ್ನು ನೀಡುವುದಿಲ್ಲ. ಎಲ್ಲ ಬಸ್‌ಗಳಿಗೆ ಆನ್‌ಲೈನ್‌ ಮತ್ತು ಮುಂಗಡ ಬುಕ್ಕಿಂಗ್‌ ಕೌಂಟರುಗಳ ಮೂಲಕ ಆಸನಗಳನ್ನು ಕಾಯ್ದಿರಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ವೋಲ್ವೋ ಬಸ್‌ ಸಂಚಾರ ಆರಂಭಿಸುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ರಾಮನಗೌಡರ ಮಾಹಿತಿ ನೀಡಿದ್ದಾರೆ.
 

Latest Videos
Follow Us:
Download App:
  • android
  • ios