ಹಾಸನ [ಡಿ.10]: ಕುಡಿದ ಮತ್ತಿನಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ.  ಪತ್ನಿ ಇನ್ನೊಬ್ಬರೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಪತ್ನಿ ಒಡವೆಯನ್ನೇ ಮಾರಾಟ ಮಾಡಿ ಮನೆಗೆ ಸಿಸಿ ಟಿವಿ ಹಾಕಿಸಿದ್ದ ಗಂಡ ಕೊನೆಗೂ ಹೆಂಡತಿಯನ್ನು ಹತ್ಯೆ ಮಾಡಿದ್ದಾನೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕಾಳೇನಹಳ್ಳಿಯಲ್ಲಿ ಕುಡಿದ ಮತ್ತಿನಲ್ಲಿ ಪತ್ನಿ ಕಾವ್ಯ[26] ಗಂಡನಿಂದಲೇ ಹತ್ಯೆಗಿಡಾದ ಮಹಿಳೆ. ನಿತ್ಯ ಕುಡಿದು ಬಂದು ಪತಿ ಶಂಕರ್  ಪತ್ನಿ ಕಾವ್ಯಾ ಜೊತೆಗೆ ಗಲಾಟೆ ಮಾಡುತ್ತಿದ್ದ.  ಇದರಿಂದ ಮನೆಯಲ್ಲಿ ದಿನವೂ ಜಗಳವಾಗುತಿತ್ತು. 

ಮದುವೆ ಆಗದೆ ಪ್ರೇಮಿಯಿಂದ ಮಗು ಪಡೆದ ಪದವೀಧರೆ : ಮೊಮ್ಮಗು ಮಾರಿದ ಅಜ್ಜಿ!...

ಸೋಮವಾರ ರಾತ್ರಿಯೂ ಕೂಡ ಕುಡಿದು ಬಂದು ಗಲಾಟೆ ಮಾಡಿದ್ದು ಈ ವೇಳೆ ಜಗಳ ತಾರಕಕ್ಕೆ ಏರಿದ್ದು ಕುತ್ತು ಬಿಗಿದು ಕೊಲೆ ಮಾಡಿದ್ದಾನೆ.  ಹೆಂಡತಿಯನ್ನು ಕೊಂದ ಗಂಡ ಶಂಕರ್ ಬಳಿಕ ಸೀದಾ ಹೊಳೆನರಸೀಪುರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಈ ಸಂಬಂಧ ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.  ಹೆಂಡತಿಯ ಮೇಲಿನ ಅನುಮಾನದ ಭೂತ ಗಂಡನ ಕೈನಿಂದಲೇ ಕೊಲೆ ಮಾಡಿಸಿದೆ.