ಡೆಡ್ಲಿ ಸೋಂಕಿಗೆ ತಾಯಿ ಬಲಿ, ಪ್ರಜ್ಞೆ ತಪ್ಪಿದ್ದ ತಂದೆ, ಮಕ್ಕಳ ಗೋಳು

ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ಮನೆಯಲ್ಲೇ ಪ್ರಾಣ ಬಿಟ್ಟ ತಾಯಿ| ಕೊರೋನಾ ಸೋಂಕು ತಮಗೂ ಹಬ್ಬುತ್ತದೆ ಎಂಬ ಆತಂಕದಿಂದ ಮನೆಯ ಬಳಿಗೆ ತೆರಳಲು ಹಿಂದೇಟು ಹಾಕಿದ ಅಕ್ಕಪಕ್ಕದವರು| ಶವ ನೀಡದೇ ಹೈಡ್ರಾಮಾ| 

Husband Refuse to Wife Funeral in Bengaluru grg

ಬೆಂಗಳೂರು(ಏ.29): ಮಹಾಮಾರಿ ಕೊರೋನಾಗೆ ತಾಯಿ ಬಲಿ. ಪತ್ನಿಯ ಮೃತದೇಹ ಕಂಡು ಪ್ರಜ್ಞಾಹೀನ ತಂದೆ. ತಾಯಿ ಸಾವು, ಪ್ರಜ್ಞಾಹೀನ ತಂದೆಯ ಕಂಡು ಗೋಳಾಡಿದ ಇಬ್ಬರು ಹೆಣ್ಣು ಮಕ್ಕಳು. ಗಂಟೆಗಳ ನಂತರ ಎಚ್ಚರಗೊಂಡ ತಂದೆಯಿಂದ ತನ್ನ ಪತ್ನಿಯ ಅಂತ್ಯಕ್ರಿಯೆಗೆ ಪಾರ್ಥಿವ ಶರೀರ ಸಾಗಿಸಲು ನಿರಾಕರಿಸಿ ಐದಾರು ತಾಸು ಹೈಡ್ರಾಮಾ ಸೃಷ್ಟಿ.

ಬೆಂಗಳೂರಿನ ವಿದ್ಯಾರಣ್ಯಪುರದ ಸಿಂಗಾಪುರದ ನಿವಾಸಿ ಖಾಸಗಿ ಕಂಪನಿ ಉದ್ಯೋಗಿ ಶಿವು ಅವರ ಮನೆಯಲ್ಲಿ ನಡೆದ ಘಟನೆಯಿದು. ಕೊರೋನಾಗೆ ಬಲಿಯಾದ ಪತ್ನಿಯ ಪಾರ್ಥಿವ ಶರೀರವನ್ನು ಚಿತಾಗಾರಕ್ಕೆ ಒಯ್ಯಲು ಆಗಮಿಸಿದ ಆ್ಯಂಬುಲೆನ್ಸ್‌ಗೆ ಮೃತದೇಹ ನೀಡದೆ ಸಚಿವರು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದ ಶಿವು ಅವರು ತಾಸುಗಟ್ಟಲೇ ದೇಹ ಒಯ್ಯಲು ಅವಕಾಶ ನೀಡದೆ ಸತಾಯಿಸಿದ್ದಾರೆ. ಅಂತಿಮವಾಗಿ ಸ್ಥಳೀಯ ಕಾರ್ಪೋರೇಟ್‌ ಮತ್ತು ಹಿರಿಯ ಪೊಲೀಸ್‌ ಅಧಿಕಾರಿಗಳು ಮನವೊಲಿಸಿ, ಮೃತ​ದೇ​ಹ​ವನ್ನು ಪಡೆದು ಅಂತ್ಯಕ್ರಿಯೆಗೆ ಕಳು​ಹಿ​ಸಿ​ಕೊ​ಟ್ಟಿದ್ದಾರೆ.

ಆಕ್ಸಿಜನ್‌ ಬೇಕಾ?: ರಾಕ ಟ್ಟಸ್ಟ್‌ ಸಂಪರ್ಕಿಸಿ

ಖಾಸಗಿ ಕಂಪನಿ ಉದ್ಯೋಗಿ ಶಿವು ಎಂಬ​ವರು ತಮ್ಮ ಪತ್ನಿ ಗಿರಿಜಾ ಮತ್ತು ಇಬ್ಬರು ಹೆಣ್ಣು ಮಕ್ಕಳ ಜತೆ ವಾಸ​ವಾ​ಗಿ​ದ್ದರು. 31 ವರ್ಷದ ಪತ್ನಿಗೆ ಏ.26ರಂದು ಸೋಂಕು ದೃಢ​ಪ​ಟ್ಟಿತ್ತು. ತೀವ್ರ ಉಸಿರಾಟದ ಸಮಸ್ಯೆ ಉಲ್ಬಣಿಸಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಎರಡು ಮೂರು ದಿನ ಅಲೆದರೂ ಆಸ್ಪತ್ರೆಯಲ್ಲಿ ಹಾಸಿಗೆ ಸಿಗಲಿಲ್ಲ. ಒಂದು ಆಸ್ಪ​ತ್ರೆ​ಯಲ್ಲಿ ಲಕ್ಷಾಂತರ ರುಪಾಯಿಗೆ ಬೇಡಿ​ಕೆ ಇಟ್ಟಿ​ದ್ದಾರೆ. ಇದರಿಂದ ದಿಕ್ಕತೋಚದೆ ಶಿವು, ಸೋಂಕಿತ ಪತ್ನಿಯನ್ನು ಮನೆಗೆ ಕರೆತಂದಿದ್ದಾರೆ. ಆದರೆ, ಮಂಗಳವಾರ ರಾತ್ರಿ 10ಕ್ಕೆ ಮನೆಯಲ್ಲಿಯೇ ಸೋಂಕಿತಳು ಮೃತಪಟ್ಟಿದ್ದಾಳೆ. ಅಷ್ಟೊತ್ತಿಗಾಗಲೇ ಕಂಠಪೂರ್ತಿ ಕುಡಿದಿದ್ದ ಶಿವು, ಪತ್ನಿಯ ಶವ ಕಂಡ ನಂತರ ಕುಸಿದು ಬಿದ್ದಿದ್ದಾರೆ.

ತಾಯಿ ಶವ ಕಂಡು ಆಘಾತಗೊಂಡ ಹೆಣ್ಣು ಮಕ್ಕಳಿಬ್ಬರೂ ತಂದೆಯನ್ನು ಎಚ್ಚರಗೊಳಿಸಲು ಸತತ ಮಾಡಿದ ಪ್ರಯತ್ನ ಫಲಿಸಲಿಲ್ಲ. ಇದರಿಂದ ಅವರು ಗೋಳಾಡುತ್ತಾ ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಕೊರೋನಾ ಸೋಂಕು ತಮಗೂ ಹಬ್ಬುತ್ತದೆ ಎಂಬ ಆತಂಕದಿಂದ ಮನೆಯ ಬಳಿಗೆ ತೆರಳಲು ಅಕ್ಕಪಕ್ಕದವರು ಹಿಂದೇಟು ಹಾಕಿದ್ದಾರೆ. ಸಂಬಂಧಿಕರಿಗೆ ಕರೆ ಮಾಡಿದರೂ ಮನೆ ಹತ್ತಿರ ಸುಳಿಯಲಿಲ್ಲ. ಯಾರೂ ನೆರವಿಗೆ ಬಾರದಕ್ಕೆ ತಾಯಿಯ ಶವ ಸಾಗಿಸಬೇಕೋ, ತಂದೆಗೆ ಉಪಚಾರ ಮಾಡಬೇಕೋ ಎಂಬುದು ತಿಳಿಯದೇ ಇಬ್ಬರು ನರಕಯಾತನೆ ಅನುಭವಿಸಿದರು.

ಕೊರೋನಾ : ಇದು ಬೆಂಗಳೂರಿನ ದುಸ್ಥಿತಿ - ಎಚ್ಚರ

ಶವ ನೀಡದೇ ಹೈಡ್ರಾಮಾ

ಅಂತಿಮವಾಗಿ ಮಕ್ಕಳ ಅಳು ಕೇಳಿ​ಸಿ​ಕೊಂಡ ಸ್ಥಳೀ​ಯರು ಪೊಲೀ​ಸ​ರಿಗೆ ಮಾಹಿತಿ ನೀಡಿ​ದ್ದಾರೆ. ಸ್ಥಳಕ್ಕೆ ಬಂದ ಸಿವಿಲ್‌ ಡಿಫೆನ್ಸ್‌ ಮತ್ತು ವಿದ್ಯಾರಣ್ಯ ಠಾಣಾ ಪೊಲೀಸರು ನೆರವಿಗೆ ಧಾವಿಸಿದ್ದಾರೆ. ಆದರೆ, ಅಷ್ಟೊತ್ತಿಗೆ ಎಚ್ಚ​ರ​ಗೊಂಡಿದ್ದ ಶಿವು ಮನೆಯ ಗೇಟ್‌ ಹಾಕಿ​ದ್ದಾರೆ. ಪತ್ನಿ​ಯ ಮೃತ​ದೇ​ಹ​ವನ್ನು ಆ್ಯಂಬು​ಲೆನ್ಸ್‌ ಸಿಬ್ಬಂದಿಗೆ ಕೊಂಡೊ​ಯ್ಯಲು ಅವ​ಕಾಶ ನೀಡಲಿಲ್ಲ.

ಸಚಿ​ವರು, ಕಾರ್ಪೋ​ರೇ​ಟರ್‌ ಬರು​ವ​ವ​ರೆಗೂ ಮೃತ​ದೇಹ ಕೊಡು​ವು​ದಿಲ್ಲ ಎಂದು ಹಠಕ್ಕೆ ಬಿದ್ದಿದ್ದಾರೆ. ಯಡಿಯೂರಪ್ಪ, ದೇವೇಗೌಡರಿಗೆ ಕೊರೋನಾ ವಾಸಿಯಾಗುತ್ತದೆ. ನಮಗ್ಯಾಕೆ ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಸರ್ಕಾರ ಮತ್ತು ಆರೋಗ್ಯ ಸಚಿ​ವರ ವಿರು​ದ್ಧ ಅವಾಚ್ಯ ಶಬ್ಧ​ಗ​ಳಿಂದ ನಿಂದಿ​ಸಿ​ದ್ದಾನೆ. ಸುಮಾರು ಒಂದು ಗಂಟೆ ಕಾಲ ಹಿರಿಯ ಪೊಲೀಸ್‌ ಅಧಿ​ಕಾ​ರಿ​ಗಳು ಮನವೊಲಿಸಿದ ನಂತರ ಪತ್ನಿಯ ಮೃತ​ದೇಹ ಕೊಂಡೊ​ಯ್ಯಲು ಶಿವು ಅವ​ಕಾಶ ನೀಡಿ​ದ್ದಾ​ನೆ ಎಂದು ಪೊಲೀಸ್‌ ಇಲಾಖೆಯ ಮೂಲ​ಗಳು ತಿಳಿ​ಸಿ​ವೆ.
 

Latest Videos
Follow Us:
Download App:
  • android
  • ios