ಕೂಡ್ಲಿಗಿ(ಡಿ.10): ಜತೆಯಲ್ಲಿ ಸಪ್ತಪದಿ ತುಳಿದು ತುಂಬು ಜೀವನ ನಡೆಸಿದ್ದ ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿ, ಒಂದೇ ದಿನ ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಂಚೋಬನಹಳ್ಳಿ ಗ್ರಾಮದಲ್ಲಿ ಬುಧವಾರ ಜರುಗಿದೆ. 

ಗ್ರಾಮದ ಹೊಸಮನಿ ಲಕ್ಷ್ಮೀದೇವಿ (70) ಬುಧವಾರ ಬೆಳಗ್ಗೆ ಮೃತಪಟ್ಟಿದ್ದರು. ಕೈಹಿಡಿದ ಹೆಂಡತಿ ಸಾವಿನ ದುಃಖ ತಾಳಲಾರದೆ ಮಾನಸಿಕವಾಗಿ ನೊಂದ ಗಂಡ ಹೊಸಮನಿ ಮಹಾದೇವಪ್ಪ (75) ಮಧ್ಯಾಹ್ನ ಮೃತಪಟ್ಟಿದ್ದಾರೆ.

ಹೊಸಪೇಟೆ: ನಕಲಿ ದಾಖಲೆ ಸೃಷ್ಟಿ, ಉಪನೋಂದಣಾಧಿಕಾರಿ ಸೇರಿ ಇಬ್ಬರ ಬಂಧನ

ಗ್ರಾಮಸ್ಥರು ಸೇರಿ ಮೃತರ ಅಂತ್ಯಕ್ರಿಯೆಯನ್ನು ಗ್ರಾಮದ ರುದ್ರಭೂಮಿಯಲ್ಲಿ ಬುಧವಾರ ಸಂಜೆ ನೆರವೇರಿಸಿದ್ದಾರೆ.   ಮೃತರಿಗೆ ಒಬ್ಬ ಪುತ್ರ ಇದ್ದಾರೆ.