Asianet Suvarna News Asianet Suvarna News

Bagalkot: ಹುನ್ನೂರ ಮಠದ ಶರಣ ಈಶ್ವರ ಮಂಟೂರ ಶ್ರೀಗಳು ಲಿಂಗೈಕ್ಯ

*   ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಹುನ್ನೂರ ಮಠ
*   ಎದೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಗಳು
*   ಈ ಭಾಗದಲ್ಲಿ ಶ್ರೀಗಳ ಬಹಳಷ್ಟು ಖ್ಯಾತಿ ಗಳಿಸಿದ್ದ ಸ್ವಾಮೀಜಿ 

Hunnuru Matha Sharana Eshwar Mantur Swamiji Passes Away Due to Heart Attack in Bagalkot grg
Author
Bengaluru, First Published Dec 10, 2021, 7:02 AM IST
  • Facebook
  • Twitter
  • Whatsapp

ಬಾಗಲಕೋಟೆ(ಡಿ.10):  ಹುನ್ನೂರ ಮಠದ ಶರಣ ಈಶ್ವರ ಮಂಟೂರ ಸ್ವಾಮೀಜಿ(48)(Sharana Eshwar Mantur Swamiji) ಹೃದಯಾಘಾತದಿಂದ(Heart Attack) ಇಂದು(ಶುಕ್ರವಾರ) ವಿಧಿವಶರಾಗಿದ್ದಾರೆ.  

ಬಾಗಲಕೋಟೆ(Bagalkot) ಜಿಲ್ಲೆಯ ಜಮಖಂಡಿಯ(Jamakhandi) ಹುನ್ನೂರ ಮಠದ(Hunnuru Matha) ಶರಣ ಈಶ್ವರ ಮಂಟೂರ ಸ್ವಾಮೀಜಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ನಿನ್ನೆ(ಗುರುವಾರ) ಜಮಖಂಡಿ ನಗರದ ಖಾಸಗಿ ಆಸ್ಪತ್ರೆಗೆ(Hospital) ದಾಖಲಿಸಲಾಗಿತ್ತು.

Gadag| ಹಾಲಕೆರೆಯ ಡಾ. ಅಭಿನವ ಅನ್ನದಾನೇಶ್ವರ ಶ್ರೀಗಳು ಲಿಂಗೈಕ್ಯ

ಆದರೆ,  ಹೆಚ್ಚಿನ ಚಿಕಿತ್ಸೆಗಾಗಿ ಇಂದು ಜಮಖಂಡಿಯಿಂದ ಬಾಗಲಕೋಟೆ ನಗರಕ್ಕೆ ಕರೆತರುವ ವೇಳೆ ಮಾರ್ಗಮಧ್ಯೆ ಶರಣ ಈಶ್ವರ ಮಂಟೂರ ಶ್ರೀಗಳು ಇಹಲೋಕ(Passed Away) ತ್ಯಜಿಸಿದ್ದಾರೆ ಎಂದು ತಿಳಿದು ಬಂದಿದೆ. ಹುನ್ನೂರಿನ ಬಸವ ಜ್ಞಾನ ಗುರುಕುಲದ ಮೂಲಕ ಧರ್ಮ ಪ್ರಚಾರ, ಶರಣ ಸಂಸ್ಕೃತಿ ಉತ್ಸವ, ಸಾಧಕರಿಗೆ ಸನ್ಮಾನ, ರಾಜ್ಯಮಟ್ಟದ ಪ್ರಶಸ್ತಿ ಸೇರಿದಂತೆ ಪ್ರವಚನಗಳ ಮೂಲಕ ಶರಣ ಈಶ್ವರ ಮಂಟೂರ ಶ್ರೀಗಳ ಬಹಳಷ್ಟು ಖ್ಯಾತಿಯನ್ನ ಗಳಿಸಿದ್ದರು. ಶ್ರೀಗಳ ಅಗಲಿಕೆಯಿಂದ ಭಕ್ತರಲ್ಲಿ(Devotees) ತೀವ್ರ ಆಘಾತವನನ್ನ ತರಿಸಿದೆ.  
 

Follow Us:
Download App:
  • android
  • ios