ಹಾಸನ (ಆ.30):   ಒಂದೇ‌ ಕಡೆ ನೂರಾರು ನಾಯಿಗಳ ತಲೆ ಬುರುಡೆ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಹಾಸನ ಜಿಲ್ಲೆ  ಹೊಳೆನರಸೀಪುರ ತಾಲೂಕು ಕೊಲ್ಲಿಹಳ್ಳ ಪ್ರದೇಶದಲ್ಲಿ ನೂರಾರು ನಾಯಿಗಳ ತಲೆ ಬುರುಡೆ ಪತ್ತೆಯಾಗಿದೆ.

"

ಹೊಳೆನರಸೀಪುರ ಪಟ್ಟಣದ ಅನತಿ ದೂರದಲ್ಲಿ ನಾಯಿಗಳ ತಲೆ ಬುರುಡೆ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ. 

ಮಾಂಸಕ್ಕಾಗಿ ನಾಯಿಗಳನ್ನು ಕೊಲ್ಲಲಾಗಿದೆಯಾ ಎಂಬ ಶಂಕೆ ಮೂಡಿದ್ದು, ಬೇರೆ ಕಡೆಯಿಂದ ಇಲ್ಲಿಗೆ ತಂದು ಹಾಕಿರಲೂ ಬಹುದು ಎನ್ನುವ ವದಂತಿಯೂ ಇದೆ. 

ಇವಳೆಂಥಾ ಹೆಂಗಸು, ತುಳಿದು ಶ್ವಾನ ಸಾಯಿಸಲು ಮುಂದಾದಳು! ವಿಡಿಯೋ.

ಹೊಳೆನರಸೀಪುರ- ಚನ್ನರಾಯಪಟ್ಟಣ ಮುಖ್ಯ ರಸ್ತೆಯ ಪಕ್ಕದ ನಿರ್ಜನ ಪ್ರದೇಶದಲ್ಲಿ ನಾಯಿಗಳ ರುಂಡ ಭಾಗ ಮಾತ್ರ ಪತ್ತೆಯಾಗಿವೆ.

ಸಿಕ್ಕಿರೋ ತಲೆ ಬುರುಡೆ  ಶ್ವಾನಗಳ ಸಾಮೂಹಿಕ ಸಂಹಾರ ಮಾಡಿರಬಹುದಾದ ಅನುಮಾನಕ್ಕೆ ಕಾರಣವಾಗಿದ್ದು, ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭೂಕುಸಿತದಲ್ಲಿ ಮಾಲೀಕನ ದೇಹ ಪತ್ತೆ ಹಚ್ಚಿದ ನಾಯಿ ದತ್ತು ಪಡೆದ ಪೊಲೀಸ್ ಡಾಗ್ ಟ್ರೈನರ್..

ಸಂಬಂಧ ಪಟ್ಟವರು ತನಿಖೆ ನಡೆಸಿ ರಹಸ್ಯ ಬಯಲು ಮಾಡುವಂತೆ ಮನವಿ ಮಾಡಿದ್ದಾರೆ.