ಲಕ್ನೋ(ಆ.  27)    ಮಹಿಳೆಯೊಬ್ಬಳು ತನ್ನ ಸಾಕುನಾಯಿಯನ್ನು ಕಾಲಿನಿಂದ ತುಳಿಯುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಆಕೆಯ ಮೇಲೆ ಎಫ್ ಐ ಆರ್ ದಾಖಲಾಗಿದೆ.

ಪ್ರಾಣಿಗಳ ಹಕ್ಕುಗಳ ಹೋರಾಟಗಾರ್ತಿ ಕಮಲಾ ಪಾಂಡೆ ಎನ್ನುವರ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೂಜಾ ದಿಲ್ಲೋನ್ ಮತ್ತು ಆಕೆಯ ಪತಿ ರಾಜ್ ದಿಲ್ಲೋನ್ ಪ್ರಾಣಿ ಹಿಂಸೆ ನೀಡಿದ  ಆರೋಪ ಹೊತ್ತಿದ್ದಾರೆ.

365  ಪ್ರಕರಣ ಪತ್ತೆ ಮಾಡಿದ್ದ ಗುಡ್ ಬಾಯ್ ರಾಕಿ ಇನ್ನಿಲ್ಲ

ಲಕ್ನೋ ಗೋಮತಿ ನಗರದ ನಿವಾಸಿಯಾದ ಮಹಿಳೆ ಕಾರಿನಲ್ಲಿ ಶ್ವಾನಕ್ಕೆ ಹಿಂಸೆ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ. ತನ್ನ ಕಾಲಿನಿಂದ ಶ್ವಾನವನ್ನು ತುಳಿದು ಸಾಯಿಸುವ ಯತ್ನ ಮಾಡಿದ್ದಾರೆ.

ಈ ನಡುವೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ದಂಪತಿ ನಮ್ಮ ತೇಜೋವಧೆ ಮಾಡಲು ಹೀಗೆ ಮಾಡಲಾಗುತ್ತಿದೆ. ತಂತ್ರಜ್ಞಾನ ಬಳಸಿ ಎಡಿಟ್ ಮಾಡಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.  ನಾವು ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇವೆ ಎಂದಿದ್ದಾರೆ. (ವಿಡಿಯೋ ಕ್ರೂರವಾಗಿರುವುದರಿಂದ ಪ್ರಕಟ ಮಾಡಿಲ್ಲ)