ಎಲ್ಲ ಧರ್ಮಕ್ಕೆ ಮಿಗಿಲಾಗಿದ್ದು ಮನುಷ್ಯ ಧರ್ಮ; ಸಿದ್ದರಾಮಯ್ಯ
ಎಲ್ಲ ಧರ್ಮಕ್ಕೆ ಮಿಗಿಲಾಗಿದ್ದು ಮನಷ್ಯ ಧರ್ಮ. ಯಾರೇ ಆಗಿರಲಿ ಕಾಯಕ ಮತ್ತು ದಾಸೋಹವನ್ನು ಬದುಕಿನಲ್ಲಿ ಮಾಡುತ್ತಿರಬೇಕು. ನಾನು ಸೈದ್ಧಾಂತಿಕ ರಾಜಕಾರಣಿಯನ್ನು ಮಾಡಲು ಇಚ್ಛಿಸುತ್ತೇನೆ. ಎಲ್ಲರನ್ನು ಸಮಾನವಾಗಿ ನೋಡುವ ಮತ್ತು ಸಮಾನವಾಗಿ ಕಾಣುವ ದೃಷ್ಟಿನನ್ನದಾಗಿದೆ ಎಂದು ಬಾದಾಮಿ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಬಾದಾಮಿ (ಸೆ.11) : ಎಲ್ಲ ಧರ್ಮಕ್ಕೆ ಮಿಗಿಲಾಗಿದ್ದು ಮನಷ್ಯ ಧರ್ಮ. ಯಾರೇ ಆಗಿರಲಿ ಕಾಯಕ ಮತ್ತು ದಾಸೋಹವನ್ನು ಬದುಕಿನಲ್ಲಿ ಮಾಡುತ್ತಿರಬೇಕು. ನಾನು ಸೈದ್ಧಾಂತಿಕ ರಾಜಕಾರಣಿಯನ್ನು ಮಾಡಲು ಇಚ್ಛಿಸುತ್ತೇನೆ. ಎಲ್ಲರನ್ನು ಸಮಾನವಾಗಿ ನೋಡುವ ಮತ್ತು ಸಮಾನವಾಗಿ ಕಾಣುವ ದೃಷ್ಟಿನನ್ನದಾಗಿದೆ ಎಂದು ಬಾದಾಮಿ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
Bagalkote Floods: ಮಳೆ ಹಾನಿ ಪರಿಶೀಲನೆ ನಡೆಸಿದ ಸಿದ್ದರಾಮಯ್ಯ
ಪಟ್ಟಣದ ಪಿಎಲ್‌ಡಿ ಬ್ಯಾಂಕ್(PLD Bank) ಆವರಣದಲ್ಲಿ ಜರುಗಿದ ಶಿವಶರಣ ನೂಲಿ ಚಂದಯ್ಯ(Shivasharana Nooli Chandaiah)ನವರ 915ನೇ ಜಯಂತ್ಯುತ್ಸವ(Jayantyutsav) ಹಾಗೂ ಕೊರಮ (ಭಂಜತ್ರಿ) ಸಮಾಜದ ಪ್ರಪ್ರಥಮ ಸಮಾವೇಶದಲ್ಲಿ ಉದ್ಘಾಟಿಸಿ ಮಾತನಾಡಿ, ಬಸವಾದಿ ಶಿವಶರಣರ ಕಾಲದಲ್ಲಿ ನೂಲಿ ಚಂದಯ್ಯನವರು ಸಮಾಜದ ಅಂಕು, ಡೊಂಕು, ತಾರತಮ್ಯ ಮತ್ತು ಜಾತಿ ವ್ಯವಸ್ಥೆ ಹೋಗಲಾಡಿಸಲು ಸಾಮಾಜಿಕ ಕ್ರಾಂತಿ ಮಾಡುವ ಮೂಲಕ ಹಗಲಿರುಳು ಶ್ರಮಿಸಿದವರು. ಕೊರಮ (ಭಂಜತ್ರಿ) ಸಮಾಜ ಬಾಂಧವರು ಉತ್ತಮ ಶಿಕ್ಷಣವನ್ನು ಪಡೆದುಕೊಂಡು ಆರ್ಥಿಕವಾಗಿ ಬಲಿಷ್ಠರಾಗಿ ಇವತ್ತಿನ ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಪಡೆದುಕೊಳ್ಳಬೇಕು ಎಂದರು.
ಹಿಂದಿನ ಕಾಲದಲ್ಲಿ ಕೆಳವರ್ಗದವರಿಗೆ ಶಿಕ್ಷಣ ದೊರೆಯುತ್ತಿರಲ್ಲಿ. ಅದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಡಾ.ಬಿ.ಆರ್.ಅಂಬೇಡ್ಕರ್(Dr.B.R.Ambedkar) ಸಮಾನತೆಗಾಗಿ ಎಲ್ಲರಿಗೂ ನ್ಯಾಯ ದೊರೆಯಬೇಕು ಎಂಬ ಹಿನ್ನೆಲೆಯಲ್ಲಿ ಸಂವಿಧಾನವನ್ನು ರಚಿಸಿ ಈ ದೇಶಕ್ಕೆ ನೀಡಿದರು. ಮನುಷ್ಯ ಹುಟ್ಟುವಾಗ ಯಾವ ಜಾತಿ ಎಂದು ತಿಳಿದಿರುವುದಿಲ್ಲ. ಅವನು ಮಾಡುವ ಕಾಯಕದ ಮೇಲೆ ಅವನ ಜಾತಿಯಿಂದ ಗುರುತಿಸುತ್ತಾರೆ. ಕೊರಮ ಸಮಾಜ ಶ್ರೇಷ್ಠವಾದದ್ದು, ನೀವು ಮಾಡುವ ಕಾಯಕದಲ್ಲಿ ನಿಮ್ಮನ್ನು ನೀವು ತೊಡಕಿಸಿಕೊಂಡು ನಿಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡಿ ಎಂದರು.
ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ(M.K.Pattanashetty), ಜೆಡಿಎಸ್ ಜಿಲ್ಲಾ ಅಧ್ಯಕ್ಷ ಹನುಮಂತ ಮಾವಿನಮರ(Hanumanth Mavinamarad)ದ ಸಮಾಜವನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲಾ ಹಾಗೂ ವಿವಿಧ ತಾಲೂಕಿನ ಕೊರಮ ಸಮಾಜದ ಮುಖಂಡರು ಭಾಗವಹಿಸಿ ಸಮಾಜ ಕಟ್ಟುವ ನಿಟ್ಟಿನಲ್ಲಿ ಸಂಘಟನೆಯನ್ನು ಮಾಡೋಣ ಎಂದು ತಿಳಿಸಿದರು. ಶಿವಣಗಿಯ ನುಲಿ ಚಂದಯ್ಯ ಗುರು ಪೀಠದ ವೃಷಬೇಂದ್ರ ನುಲಿ ಚಂದ್ರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನವನ್ನು ನೀಡಿದರು. ತಾಲೂಕು ಕೊರಮ ಸಮಾಜದ ಅಧ್ಯಕ್ಷ ವೆಂಕಪ್ಪ ಭಜಂತ್ರಿ ಪ್ರಾಸ್ಥಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ವೇದಿಕೆಯಲ್ಲಿ ರಾಜ್ಯಾಧ್ಯಕ್ಷ ಜಿ.ಮಾದೇಶ, ಬಾಗಲಕೋಟೆ ಜಿಲ್ಲಾಧ್ಯಕ್ಷ ಎಸ್.ಎಸ್.ನಾಗರೇಶಿ, ಎಂ.ಎಚ್.ಚಲವಾದಿ, ಮಹೇಶ ಹೊಸಗೌಡರ, ಹನುಮಂತ ಭಜತ್ರಿ, ಹುಚ್ಚಪ್ಪ ಭಜಂತ್ರಿ, ಶಂಕರಾನಂದ ಪೂಜಾರ, ಶಿವಪುತ್ರಪ್ಪ ಬೀಳಗಿ, ಬಸವರಾಜ ಬಂಬಾಯಿ, ಮಾರುತಿ ಭಂಜತ್ರಿ, ಶರಣಗೌಡ ಪಾಟೀಲ, ರಾಮಪ್ಪ ಭಜಂತ್ರಿ, ಬಸುರಾಜ ಕಟ್ಟಿಮನಿ, ಹನುಮಂತ ಭಜಂತ್ರಿ, ನಗರಸಭೆ ಅಧ್ಯಕ್ಷ ಜ್ಯೋತಿ ಭಜಂತ್ರಿ, ನಾಗಪ್ಪ, ಭಜಂತ್ರಿ ಸೇರಿದಂತೆ ಉಪಸ್ಥಿತರಿದ್ದರು.
ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಿಂದ ಸುಂಮಗಲೆಯರು ಕುಂಭಮೇಳ ಹೊತ್ತು ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ಮೇಳದೊಂದಿಗೆ ಶಿವಶರಣ ನುಲಿ ಚಂದ್ಯನವರ ಭಾವಚಿತ್ರ ಮೆರವಣಿಗೆಯನ್ನು ನೆರವೇರಿಸಿದರು. ತಾಲೂಕಿನ ಕೊರಮ ಭಂಜತ್ರಿ ಸಮಾಜದ ಮುಖಂಡರು ಯುವಕರು ಸೇರಿದಂತೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಡಾ.ಲೋಕಣ್ಣ ಭಜಂತ್ರಿ ನಿರೂಪಿಸಿದರು. ಕೃಷ್ಣ ಭಜಂತ್ರಿ ವಂದಿಸಿದರು. Siddaramaiah Badami Tour ಮತ್ತೆ ಬಾದಾಮಿಯಿಂದ ಸ್ಫರ್ಧಿಸಲು ಹಿಂದೆ ಸರಿಯುತ್ತಾರಾ ಸಿದ್ದು?
ನಾನು 2013ರಲ್ಲಿ ನಿಮ್ಮ ಸಮಾಜದವರಿಗೆ ವಿಧಾನಸಭೆ ಸ್ಪರ್ಧಿಸಲು ಟಿಕೆಟ್ ನೀಡಿದ್ದೆ. ಆದರೆ, ಅವನು ಮುಂದೆ ಎತ್ತರಮಟ್ಟದಲ್ಲಿ ಬೆಳೆಯಲಿಲ್ಲ. ಬರುವ 2023ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವನ್ನು ನೀಡಿ ಸಾಧ್ಯವಾದಷ್ಟುನಿಮ್ಮ ಸಮಾಜದವರಿಗೆ ಉನ್ನತ ಸ್ಥಾನವನ್ನು ನೀಡಲು ಶ್ರಮಿಸುತ್ತೇನೆ. ಬಾದಾಮಿ ಕ್ಷೇತ್ರದಲ್ಲಿ ಸಭಾಭವನ ನಿರ್ಮಿಸಲು ಸಹಾಯವನ್ನು ಮಾಡುತ್ತೇನೆ.
ಸಿದ್ದರಾಮಯ್ಯ,ಬಾದಾಮಿ ಶಾಸಕ, ಮಾಜಿ ಸಿಎಂ.