ಶನಿವಾರ ಕೋಟೆನಾಡು ಚಿತ್ರದುರ್ಗ ನಗರದ ಹಳೆ ಮಾದ್ಯಮಿಕ ಶಾಲಾ‌ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಮದಕರಿ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಮರ್ಪಣಾ ಕಾರ್ಯಕ್ರಮ ತುಂಬಾ ಅದ್ದೂರಿಯಾಗಿ ನಡೆಯಿತು.

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಮೇ.29): ಶನಿವಾರ ಕೋಟೆನಾಡು ಚಿತ್ರದುರ್ಗ ನಗರದ ಹಳೆ ಮಾದ್ಯಮಿಕ ಶಾಲಾ‌ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಮದಕರಿ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಮರ್ಪಣಾ ಕಾರ್ಯಕ್ರಮ ತುಂಬಾ ಅದ್ದೂರಿಯಾಗಿ ನಡೆಯಿತು. ಇದಕ್ಕೆ ಸಾಕ್ಷಿಯೆಂಬಂತೆ ಸಾವಿರಾರು ಜನರು ನೆರೆದು ಕಾರ್ಯಕ್ರಮ ಯಶಸ್ವಿಗೆ ಕಾರಣರಾದರು. ಈ ಬೃಹತ್ ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್‌ನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಯಾದ ಕೇಶವ ಹೆಗಡೆ ಅವರು ಅಧಿಕೃತವಾಗಿ ಚಾಲನೆ ನೀಡಿದರು. ಈ ವೇಳೆ ಜಿಲ್ಲೆಯ ಪ್ರತಿಷ್ಠಿತ ಮಠಗಳಲ್ಲಿ ಒಂದಾಗಿರೋ ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಸ್ವಾಮೀಜಿ ಹಾಗೂ ಕಬೀರಾನಂದ ಆಶ್ರಮದ ಶಿವಲಿಂಗಾನಂದ ಶ್ರೀಗಳು ದಿವ್ಯ ಸಾನಿಧ್ಯವಹಿಸಿದ್ದರು. 

ಸಮರ್ಪಣಾ ಕಾರ್ಯಕ್ರಮದ ಮೂಲ‌ ಉದ್ದೇಶ: ನಮ್ಮ ಕರುನಾಡಿನಲ್ಲಿ ದೇಶಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿ ಹುತಾತ್ಮರಾಗಿರೋ ನಮ್ಮ ವೀರ ಯೋಧರ ಕುಟಂಬಗಳಿಗೆ ಗೌರವ ಧನ ನೀಡುವ ಮೂಲಕ ಅವರಿಗೆ ಆಸರೆ ಆಗಬೇಕು ಎಂಬುದು ಮೂಲ ಉದ್ದೇಶವಾಗಿತ್ತು. ಆದರಂತೆಯೇ ಕಾರ್ಯಕ್ರಮದ ಮೊದಲಿಗೆ ಎಲ್ಲರೂ ಬೇಗನೇ ಭಾಷಣಗಳನ್ನು ಮುಗಿಸಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ ಅವರ ಭಾಷಣವನ್ನು ಮಾತ್ರ ಪೆಂಡಿಂಗ್‌ ಇಟ್ಟಕೊಂಡು, ಏನು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಮ್ಮ‌ ನಾಡಿನ ಹೆಮ್ಮೆಯ ಪುತ್ರರನ್ನು ದೇಶ ಸೇವೆಗೆಂದೆ ಮುಡಿಪಾಗಿಟ್ಟ ಪೋಷಕರು ಆಗಮಿಸಿ ವಿಹಿಂಪ ಹಾಗೂ ಮದಕರಿ ಸೇವಾ ಟ್ರಸ್ಟ್ ವತಿಯಿಂದ ಗೌರವ ಧನ ಸ್ವೀಕರಿಸಿದರು.

ಒಟ್ಟಾರೆಯಾಗಿ ರಾಜ್ಯದ 7 ಹುತಾತ್ಮ ಯೋಧರ ಕುಟುಂಬಗಳು ಹಾಗೂ ಓರ್ವ ವೀರ ಯೋಧ ಸೇರಿ 8 ಕುಟುಂಬಗಳಿಗೆ ಗೌರವಿಸಿ ಅವರಿಗೆ ಸುಮಾರು 50000 ರೂ ಸಹಾಯ ಧನ‌ ನೀಡಲಾಯಿತು. ಇನ್ನೂ ಈ ವೇಳೆ ಹುತಾತ್ಮ ಯೋಧರ ತಂದೆ ತಾಯಂದಿರು ತಮ್ಮ ಪುತ್ರನನ್ನು ಪರದೆ ಮೇಲೆ‌ ನೋಡಿ ವೇದಿಕೆ ಮೇಲೆಯೇ ಕಣ್ಣೀರು ಹಾಕಿದ್ದು, ಅಲ್ಲಿ ಸೇರಿದ್ದ ಎಲ್ಲಾ ಜನರ ಕರಳು ಕಿವುಚಿದಂತಿತ್ತು. 

ಚಿತ್ರದುರ್ಗ: ಎಲ್ಲರ ಗಮ‌ನ ಸೆಳೆದ ದೇಸಿ ತಳಿ ಗೋವುಗಳ ಪ್ರದರ್ಶನ

ಹುತಾತ್ಮ ಯೋಧರ ಪೋಷಕರಿಗೆ ಸನ್ಮಾನಿಸುವ ವೇಳೆ ಭಾವುಕರಾದ ಶಾಸಕ ತಿಪ್ಪಾರೆಡ್ಡಿ: ಇನ್ನೂ ಟ್ರಸ್ಟ್ ವತಿಯಿಂದ ವೇದಿಕೆ‌ ಮೇಲೆ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸುವ ವೇಳೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಭಾವುರಾಗಿದ್ದು ಕಂಡು ಬಂದಿತು. ಯೋಧರ ತಂದೆ‌ ತಾಯಿ ಪುಣ್ಯಾತ್ಮರು ತಮ್ಮ ಮಗನನ್ನು ಕಳೆದುಕೊಂಡು ಕಣ್ಣೀರು ಹಾಕ್ತಿದ್ದ ಸಮಯದಲ್ಲಿ ಅಲ್ಲೇ ವೇದಿಕೆಯ ಮೇಲೆ ನಿಂತಿದ್ದ ಶಾಸಕ ತಿಪ್ಪಾರೆಡ್ಡಿ ಭಾವುಕರಾಗುವ ಮೂಲಕ‌ ಕಣ್ಣೀರು ಹಾಕಿದರು. ಕೂಡಲೇ ತನ್ನಲ್ಲಿದ್ದ ಕರ ವಸ್ತ್ರದ ಮೂಲಕ ಕಣ್ಣೀರು ಒರೆಸಿಕೊಳ್ಳುವ ಮೂಲಕ ಹುತಾತ್ಮರ ಪೋಷಕರಿಗೆ ಕೈ ಮುಗಿದು ನಮಸ್ಕರಿಸಿದರು.

ಏಕ‌‌ಕಾಲದಲ್ಲೇ 161 ಕಲಾವಿದರಿಂದ ವೀಣಾವಾದನ ಕಾರ್ಯಕ್ರಮ: ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ವೀಣೆಯನ್ನು ನುಡಿಸುವಂತಹ ಸುಮಾರು 161 ಕಲಾವಿದರನ್ನು ಒಂದೆಡೆ ಸೇರಿಸಿ ಅವರಿಂದ ವೀಣಾವಾದನ ಮಾಡಿಸುವ ಮೂಲಕ‌ ಚಿತ್ರದುರ್ಗ ಜಿಲ್ಲೆ‌ ಮತ್ತೊಮ್ಮೆ ಇತಿಹಾಸ ನಿರ್ಮಿಸುವತ್ತ ದಾಪುಗಾಲಿಟ್ಟಿತು. ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ಮಹಿಳಾ‌ ವೀಣಾವಾದಕರು ಏಕ‌ ಕಾಲದಲ್ಲೇ ಸುಮಾರು 2 ಗಂಟೆಗಳ ಕಾಲ ಸತತವಾಗಿ ವೀಣೆ ನುಡಿಸುವ ಮೂಲಕ ಅಲ್ಲಿ ನೆರೆದಿದ್ದ ಕೋಟೆನಾಡಿನ ಜನರಿಗೆ ಸಂಗೀತದ‌ ಔತಣವನ್ನೇ ಉಣ ಬಡಿಸಿದರು. ಅದ್ರಲ್ಲಿ ವಿದುಷಿ ಜ್ಯೋತಿ ಚೇತನ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಪ್ರತಿಯೊಬ್ಬ ಸಂಗೀತ ಪ್ರಿಯರು ಸಂತೋಷದಿಂದ ಕುಳಿತು ಸಂಭ್ರಮಿಸಿದರು.

ಈ ಸಮಪರ್ಣ‌ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಶೃಂಗಾರ ಗೌರಿ, ಕಾಶಿ ವಿಶ್ವನಾಥನನ್ನು ಮರಳಿ ಪಡೆಯುತ್ತಿದ್ದೇವೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸಿಲುಕಿರುವ ಶಾರದೆಯ ಭೂಮಿ ಮರಳಿ ಪಡೆಯಬೇಕಿದೆ. ಶ್ಲೋಕದ ಮೂಲಕ ಶಾರದೆಯ ಪ್ರಾರ್ಥಿಸಿದ ಸೂಲಿಬೆಲೆ, ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಚಕ್ರವರ್ತಿ ಸೂಲಿಬೆಲೆ ಪರೋಕ್ಷ ಟಾಂಗ್‌ ಕೊಟ್ಟರು. ನಮ್ಮ ನಾಡಿನಲ್ಲಿ ಕೆಲ‌ ಮೂರ್ಖರು ಇದ್ದಾರೆ. ಆರ್ಯರು ಬೇರೆ, ದ್ರಾವಿಡರು ಬೇರೆ ಎಂದು ಸುಳ್ಳು ಹೇಳುತ್ತಾರೆ. ಆರ್ಯರು ಹೊರಗಿನಿಂದ‌ ಬಂದವರು, ದ್ರಾವಿಡರು ಮೂಲ‌ ನಿವಾಸಿ ಅಂತಾರೆ. ಬ್ರಿಟಿಷರು ಹೇಳಿದ ಸುಳ್ಳನ್ನೇ ಇವರು ಹೇಳುತ್ತಿದ್ದಾರೆ. ನನ್ನ ಜತೆಗೆ ನೂರ ಮೂವತ್ತು ಕೋಟಿ ಜನರು ಮಾತಾಡಬೇಕು. ಭಾರತ ಜಗತ್ತಿನ ಶ್ರೇಷ್ಠ ಭೂಮಿ ಎಂಬುದು ಬ್ರಿಟಿಷರಿಗೆ ಗೊತ್ತಿತ್ತು.

ಸಂಪತ್ತೂ ಲೂಟಿ ಮಾಡಿಕೊಂಡು ಹೋಗಬಹುದು ಅಂದು‌ ಕೊಂಡರು. ಭಾರತೀಯರು ಅನಾಗರಿಕರು ಎಂದು ಸುಳ್ಳು ಹೇಳಿದ್ದರು. ಆರ್ಯ ಅಂದರೆ ಒಳ್ಳೆಯದು ಅನಾರ್ಯ ಅಂದರೆ ಕೆಟ್ಟದ್ದೆಂದು ಅರ್ಜುನನಿಗೆ ಕೃಷ್ಣ ಹೇಳಿದ್ದನು. ಮ್ಯಾಕ್ಸ್ ಮುಲ್ಲರ್ ಆರ್ಯನ್ ಭಾಷೆ ಎಂದು ಹೇಳಿ ಸ್ವಲ್ಪ ತಂದಿಟ್ಟನು. ಆರ್ಯನ ಭಾಷೆಯನ್ನು ಆರ್ಯನ ಜನಾಂಗ ಎಂದು ಕ್ರಿಶ್ಚಿಯನ್ನರು, ಬ್ರಿಟಿಷರು ಸೃಷ್ಠಿಸಿದರು. ವೇದ ಉಪನಿಷತ್ತುಗಳು ಭಾರತದ್ದಲ್ಲ ಎಂದು ಸುಳ್ಳು ಹೇಳಿದರು. ಹೊರಗಡೆಯಿಂದ ಬಂದ ಜನ ಕೊಟ್ಟ ವೇದ ಎಂದು ಹೇಳಿದ್ದರು. ಈಗ ಕುಳಿತ ಜಾಗದಲ್ಲಿ ಟ್ವೀಟ್ ನೋಡುತ್ತಿದ್ದೆ, ನೋವಾಗುತ್ತದೆ. ಅಯೋಗ್ಯರು ಇದ್ದಾರೆ ಎಂದು ಸಿದ್ಧರಾಮಯ್ಯ ಹೆಸರೇಳದೆ ಕಿಡಿಕಾಡಿದರು. ಈಗಿನ ಕಾಲದ ಮಕ್ಕಳು ಜಾಣರಿದ್ದಾರೆ ಅವರಿಗೆ ಅರ್ಥ ಆಗುತ್ತದೆ. ಶಾಸಕರು, ಸಂಸದರಿಗಾಗಿ ಪಠ್ಯ ಪುಸ್ತಕ ಪರಿಷ್ಕರಣೆ ಆಗಬೇಕು ಎಂದು ವ್ಯಂಗ್ಯವಾಡಿದರು.

ಆರ್ಯರು ಭಾರತದ ಮೂಲ‌ ನಿವಾಸಿಗಳೆಂಬುದು ವೈಜ್ಞಾನಿಕವಾಗಿ ಖಚಿತವಾಗಿದೆ. ಡಿಎನ್ ಎ ಸಹ ಬೇರೆ ದೇಶದವರ ಜತೆ ಮ್ಯಾಚ್ ಆಗಲ್ಲ. ಆರ್ಯರು ಅಂದರೆ ಅಪ್ಪಟ ಭಾರತೀಯರು, ಹೊರಗಿನಿಂದ ಬಂದವರಲ್ಲ. ಅಧಿಕಾರಕ್ಕಾಗಿ ದೇಶ ಒಡೆಯುವ ಮಾತನಾಡುತ್ತಾರೆ. ದೇಶದ ಪರಂಪರೆ ಮೇಲೆ ನಿರಂತರ ಆಘಾತ ಆಗಿದೆ. ನನಗೆ ಪಾಕ್ ನ‌ ಮುಲ್ತಾನ್ ನಲ್ಲಿರುವ ಆದಿತ್ಯ ಮಂದಿರವೂ ಬೇಕಿದೆ. ಮಸೀದಿ ಕೆಡವಿ ಮಂದಿರ ಕಟ್ಟುವ ಅಧಿಕಾರ ಸಿಕ್ಕಿದೆ. ಆದರೆ ನಾವು ಬೇರೆಯವರಿಗೆ ನೋವು‌ ಕೊಡುವುದು ಬೇಡ ಅಂತೀವಿ. ಎಲ್ಲಿವರೆಗೆ ಒನ್ ಸೈಡೆಡ್ ಒಳ್ಳೆಯತನ ಬೇಕು ಹೇಳಿ ಎಂದರು. ನಮ್ಮದ್ದು ಯಾವುದು ನಾಶ ಪಡಿಸಿದ್ದೀರಿ ಮರಳಿ‌ ಪಡೆಯುತ್ತೇವೆ. ರಾಮ‌ಮಂದಿರ, ಮಥುರಾ ಕೃಷ್ಣ ಮಂದಿರ, ಕಾಶಿ ವಿಶ್ವನಾಥ ಮೂರು ಮಂದಿರ ಬಿಟ್ಟು ಕೊಡಿ. ಬೇರೆ ಮಂದಿರ ಕೇಳಲ್ಲ ಎಂದು ಹೇಳಿದ್ದರು. ಈಗ ಜಾಗೃತ ಹಿಂದೂ ಸಮಾಜಕ್ಕೆ ಯಾರ ಜತೆ ವ್ಯವಹರಿಸಬೇಕೆಂದು ತಿಳಿದಿದೆ.

Chitradurga ಶಿರಡಿಯಲ್ಲಿ ಭಕ್ತರ ವೇಷದಲ್ಲಿದ್ದ ಗಾಂಜಾ ಕಿಂಗ್ ಪಿನ್ ಅರೆಸ್ಟ್

ಸತ್ಯ ಹೇಳಿದ ಮಹಿಳೆಯ ತಲೆ ಕಡಿಯಬೇಕೆಂದು ನೀವು ಶುರು ಮಾಡಿದ್ದೀರಿ. ನೇರವಾಗಿ ಅಲ್ಲದಿದ್ದರೂ ಫೇಕ್ ಐಡಿ ಮಾಡಿಕೊಂಡು ಫೇಸ್ ಬುಕ್ಕಲ್ಲಾದರೂ ಪ್ರಶ್ನಿಸಿ. ಸಾಯಲೆಂದು ಸೈನ್ಯಕ್ಕೆ ಸೇರುವ ಕಾಲ ಹೋಯಿತು. ಈಗ (ಪಾಕ್) ಸಾಯಿಸಲು ಸೈನ್ಯಕ್ಕೆ ಸೇರುವಂತಾಗಿದೆ. ಪಾಕಿಸ್ತಾನ ಬಿಲಿಯನ್ ಗಟ್ಟಲೇ ಸಾಲ ಮಾಡಿದೆ. ಇನ್ನೆರಡು ತಿಂಗಳ ನಂತರ ಯಾರಾದರೂ ಅವರಿಗೆ ಭಿಕ್ಷೆ ಕೊಡಬೇಕು. ಪಾಕಿಸ್ತಾನ ದೇಶವೂ ಶ್ರೀಲಂಕಾದಂತೆ ಆಗಲಿದೆ. ಭಾರತದಲ್ಲಿ 9ರೂ. ಕಡಿಮೆ ಮಾಡಿದರೆ ಪಾಕಿಸ್ತಾನದಲ್ಲಿ 30ರೂ ಜಾಸ್ತಿ ಮಾಡಲಾಗಿದೆ. ಇಡೀ ಜಗತ್ತು ಕೊರೊನಾ ಕಾಲದಲ್ಲಿ ನಲುಗಿದೆ. ಇಡೀ ಜಗತ್ತು ಭಾರತ ದೇಶದತ್ತ ನೋಡುತ್ತಿದೆ ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮದಲ್ಲಿ ತಿಳಿಸಿದರು.