ಚಿತ್ರದುರ್ಗ: ಎಲ್ಲರ ಗಮ‌ನ ಸೆಳೆದ ದೇಸಿ ತಳಿ ಗೋವುಗಳ ಪ್ರದರ್ಶನ

* ವಿಶ್ವ ಹಿಂದೂ ಪರಿಷತ್ ವತಿಯಿಂದ ದೇಸಿ ತಳಿಯ ಗೋವುಗಳ ಪ್ರದರ್ಶನ.
* ಚಿತ್ರದುರ್ಗ ನಗರದ ಹಳೇ ಮಾದ್ಯಮಿಕ ಶಾಲಾ ಆವರಣದಲ್ಲಿ ದೇಸಿ ಝಲಕ್.
* ಸದ್ಯ ನಶಿಸಿ ಹೋಗ್ತಿರೋ ದೇಸಿ ತಳಿ 

Desi Breed Cattles exhibition organized By Vishwa Hindu Parishad at Chitradurga rbj

ಚಿತ್ರದುರ್ಗ, (ಮೇ.28): ದೇಸಿ ಗೋವುಗಳ ಸಾಕಾಣಿಕೆ ನಶಿಸಿ ಹೋಗಬಾರದು ಎಂದು ವಿಹಿಂಪ ಮಾಡಿದ ಪ್ಲಾನ್ ಗೆ ರೈತರು ಸಲಾಂ. ಬಗೆ ಬಗೆಯ ದೇಸಿ ಗೋವುಗಳ ಸಿಂಗಾರಕ್ಕೆ ಮನಸೋತ ಕೋಟೆನಾಡಿನ ಮಂದಿ. ಹಳೆ ಮಾದ್ಯಮಿಕ ಶಾಲಾ ಆವರಣದಲ್ಲಿ ನಡೆದ ದೇಸಿ ತಳಿಗಳ ಝಲಕ್ ಹೇಗಿತ್ತು ಗೊತ್ತಾ? ಈ ಸ್ಟೋರಿ ನೋಡಿ..

 ಇತ್ತೀಚಿನ ದಿನಗಳಲ್ಲಿ ಗೋವುಗಳನ್ನು ಪೂಜೆ ಮಾಡುವವರಿಗಿಂತ ಅದನ್ನು ವಧಿಸುವವರೇ ರಾಜ್ಯದಲ್ಲಿ ಹೆಚ್ಚಾಗಿರೋದು ತುಂಬಾ ನೋವಿನ ಸಂಗತಿ. ಆದ್ರೆ ಇಂತಹ ಘಟನೆಗಳು ನಮ್ಮ ಕಣ್ಮುಂದೆ ಯಾವುದೇ ಕಾರಣಕ್ಕೂ ನಡೆಯಬಾರದು ಎಂಬ ಉದ್ದೇಶದಿಂದ, ಚಿತ್ರದುರ್ಗದ ವಿಹಿಂಪ ಹಾಗೂ ಮದಕರಿ ಸೇವಾ ಟ್ರಸ್ಟ್ ವತಿಯಿಂದ ದೇಸಿ ತಳಿಗಳ ಗೋವುಗಳ ಪ್ರದರ್ಶನ ಹಾಗೂ ಸ್ಪರ್ಧೆ ಏರ್ಪಡಿಸುವ ಮೂಲಕ ಗೋಶಾಲೆಗಳಿಗೆ ನಿಧಿ ಸಮರ್ಪಣಾ ಕಾರ್ಯಕ್ರಮ ನಡೆಯಿತು. 

ವಿಂಡ್ ಮಿಲ್ ಹಾವಳಿಗೆ ಬೆಚ್ಚಿಬಿದ್ದ ಕೋಟೆನಾಡಿನ ಜನರು: ಮಾಲೀಕರಿಗೆ ಶಾಕ್ ಕೊಟ್ಟ DRDO

ಇಂದು(ಶನಿವಾರ) ನಗರದ ಹಳೆ ಮಾದ್ಯಮಿಕ ಶಾಲಾ ಆವರಣದಲ್ಲಿ ಏರ್ಪಿಡಿಸದ್ದ, ದೇಸಿ ತಳಿಗಳ ಗೋವುಗಳ ಪ್ರದರ್ಶನ ಎಲ್ಲರ ಗಮ‌ನ ಸೆಳೆಯಿತು. ಅದ್ರಲ್ಲಂತೂ ಗಿರ್, ಕಾಂಕ್ರೇಜ್, ಮಲ್ನಾಡ್ ಗಿಡ್ಡ, ಅಮೃತ್ ದೇವಣಿ, ನಾಟಿ, ಹೀಗೆ ವಿವಿಧ ತಳಿಗಳ ದೇಸಿ ಗೋವುಗಳು ಆಗಮಿಸಿ ಇಡೀ ಕಾರ್ಯಕ್ರಮಕ್ಕೆ ಮೆರಗು ತಂದವು. ಇದರ ಜೊತೆಗೆ ಇತ್ತೀಚಿನ ಪೀಳಿಗೆಯ ಜನರಿಗೆ ದೇಸಿ ತಳಿಗಳ ಮಹತ್ವ ಅಷ್ಟಾಗಿ ತಿಳಿದಿರುವುದಿಲ್ಲ. ಅಷ್ಟೇ ಅಲ್ಲದೇ ವೀರ ಯೋಧರು ಹಾಗೂ ಗೋ ಮಾತೆಗಳಿಗೆ ಗೌರವ ಸಮರ್ಪಣೆ ಹಾಗೂ ಗೌರವ ಧನ ನೀಡುವ ಮೂಲಕ ಅಭಿನಂದನೆ ಸಲ್ಲಿಸುವ ದೃಷ್ಟಿಯಲ್ಲಿ ವಿಹಿಂಪ ಈ ರೀತಿಯ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು.

 ಇನ್ನೂ ಈ ದೇಸಿ ತಳಿಗಳ ಗೋವುಗಳ ಸ್ಪರ್ಧೆಗೆಂದು ಆಗಮಿಸಿದ್ದ ರೈತರು, ಇತ್ತೀಚಿನ ದಿನಗಳಲ್ಲಿ ಜನರು ದೇಸಿ ತಳಿಗಳನ್ನು ಸಾಕುವುದೇ ಕಡಿಮೆಯಾಗಿದೆ. ಅದ್ರಲ್ಲಿ ನಾಟಿ ಹಸುಗಳು, ಹಾಗೂ ವಿವಿಧ ರೀತಿಯ ತಳಿಗಳು ನಶಿಸಿ ಹೋಗ್ತಿದೆ. ಇದರ ಮಧ್ಯೆ ವಿಹಿಂಪ ಇಂದು ದೇಸಿ ಗೋವುಗಳಿಗಾಗಿಯೇ ಒಂದು ದಿನ ಮೀಸಲಿಟ್ಟು ಪ್ರದರ್ಶನ ಏರ್ಪಡಿಸಿದ್ದು ಸಂತೋಷದ ವಿಚಾರ. ಇದ್ರಿಂದ ಇನ್ನುಳಿದ ರೈತರಿಗೆ ಈ ರೀತಿಯ ದೇಸಿ ಹಸುಗಳನ್ನು ನಾವು ಬೆಳಯಬೇಕು ಎಂಬ ಕಲ್ಪನೆ ಬರುತ್ತದೆ. ಸದ್ಯ ಈ ಸ್ಪರ್ಧೆಯಲ್ಲಿ ರಾಜಸ್ಥಾನದಿಂದ ತಂದಿರುವ ಕಾಂಕ್ರೇಜ್ ತಳಿಗೆ ಮೊದಲ ಸ್ಥಾನ ಲಭಿಸಿದೆ. ದೇಸಿಯ ತಳಿಗಳ ಹಾಲು ಕೂಡ ಮಕ್ಕಳ ಏಳಿಗೆಗೆ ತುಂಬಾ ಅನುಕೂಲವಾಗಲಿದೆ ಅಂತಾರೆ ರೈತರು. 

ಒಟ್ಟಾರೆಯಾಗಿ ಸದ್ಯ ರಾಜ್ಯದಲ್ಲಿ ಗೋ ಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಈ ರೀತಿಯ ದೇಸಿ ಗೋವುಗಳ ಸಾಕಾಣಿಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ರೀತಿ ಗೋವುಗಳ ಪ್ರದರ್ಶನ ಏರ್ಪಡಿಸಿರೋದು ಸಂತಸದ ವಿಷಯ..

Latest Videos
Follow Us:
Download App:
  • android
  • ios