ವಿಜಯಪುರ: ವೃಕ್ಷೋಥಾನ್ ಹೆರಿಟೇಜ್ ರನ್-2023ಗೆ ಭರ್ಜರಿ ರೆಸ್ಪಾನ್ಸ್..!
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ನಾನಾ ಪದಕಗಳನ್ನು ಪಡೆದಿರುವ ಖ್ಯಾತನಾಮರು ನಗರದಲ್ಲಿ ಡಿಸೆಂಬರ್ 24 ರಂದು ನಡೆಯುವ ವೃಕ್ಷತ್ಥಾನ್ ಹೆರಿಟೇಜ್ ರನ್- 2023ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಸಲ ದೇಶದ ನಾನಾ ಭಾಗಗಳಿಂದ ಕ್ರೀಡಾಪಟುಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕರ್ನಾಟಕ ಮಾತ್ರವಲ್ಲ ದೇಶ, ವಿದೇಶಗಳಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಮ್ಯಾರಾಥಾನ್ ಗಳಲ್ಲಿ ಪಾಲ್ಗೊಂಡ ಹೆಸರಾಂತ ಮ್ಯಾರಾಥಾನ್ ಪಟುಗಳು ಕೂಡ ಪಾಲ್ಗೊಳ್ಳುತ್ತಿದ್ದಾರೆ.
- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ(ಡಿ.12): ಡಿ. 24 ರಂದು ವಿಜಯಪುರ ನಗರದಲ್ಲಿ ಎಲ್ಲರೂ ಕಾತುರದಿಂದ ಕಾಯ್ತಿರುವ ವೃಕ್ಷೋಥಾನ್ ಹೆರಿಟೇಜ್ ರನ್-2023 ನಡೆಯಲಿದೆ. ವೃಕ್ಷಗಳನ್ನ ಕಾಪಾಡಬೇಕು, ಪರಿಸರ ರಕ್ಷಣೆ, ಬರದ ನಾಡು ವಿಜಯಪುರದಲ್ಲಿ ಅರಣ್ಯ ಪ್ರಮಾಣ ಹೆಚ್ಚಿಸುವ ಸದುದ್ದೇಶದಿಂದ ಮ್ಯಾರಾಥಾನ್ ನಡೆಯಲಿದೆ. ವಿಶೇಷ ಎಂದರೆ ಅಂತರರಾಷ್ಟ್ರೀಯ, ರಾಷ್ಟ್ರೀಯ ಪಟ್ಟದಲ್ಲಿ ಹೆಸರುವಾಸಿಯಾಗಿರುವ ಕ್ರೀಡಾಪಟುಗಳು ವೃಕ್ಷೋಥಾನ್ ಹೆರಿಟೇಜ್ ಮ್ಯಾರಾಥಾನ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಈ ಬಾರಿಯ ವೃಕ್ಷೋಥಾನ್‌ಗೆ ಬಾರಿ ಪ್ರತಿಕ್ರಿಯೆ..!
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ನಾನಾ ಪದಕಗಳನ್ನು ಪಡೆದಿರುವ ಖ್ಯಾತನಾಮರು ನಗರದಲ್ಲಿ ಡಿಸೆಂಬರ್ 24 ರಂದು ನಡೆಯುವ ವೃಕ್ಷತ್ಥಾನ್ ಹೆರಿಟೇಜ್ ರನ್- 2023ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಸಲ ದೇಶದ ನಾನಾ ಭಾಗಗಳಿಂದ ಕ್ರೀಡಾಪಟುಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕರ್ನಾಟಕ ಮಾತ್ರವಲ್ಲ ದೇಶ, ವಿದೇಶಗಳಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಮ್ಯಾರಾಥಾನ್ ಗಳಲ್ಲಿ ಪಾಲ್ಗೊಂಡ ಹೆಸರಾಂತ ಮ್ಯಾರಾಥಾನ್ ಪಟುಗಳು ಕೂಡ ಪಾಲ್ಗೊಳ್ಳುತ್ತಿದ್ದಾರೆ.
ಎಂ.ಬಿ.ಪಾಟೀಲರಿಗೆ ಜಲಸಂಪನ್ಮೂಲ ಕೊಟ್ಟಿದ್ರೆ ಕಥೆಯೇ ಬೇರೆಯಾಗ್ತಿತ್ತು ಎಂದ ರಂಭಾಪುರಿ ಶ್ರೀಗಳು!
ಆನ್‌ಲೈನ್ ನೋಂದಣಿಯಲ್ಲಿ ನಿರೀಕ್ಷೆ ಮೀರಿ ಪ್ರತಿಕ್ರಿಯೆ..!
ಯವಕರು, ಮಧ್ಯ ವಯಸ್ಕರು, ಹಿರಿಯರು, ಹಿರಿಯ ಮಹಿಳೆಯರೂ ಆನಲೈನ್ ಮೂಲಕ ಹೆಸರು ನೋಂದಾಯಿಸಿ ಇತರರೂ ಪಾಲ್ಗೊಳ್ಳಲು ಸ್ಪೂರ್ತಿ ನೀಡಿದ್ದಾರೆ. 72 ವರ್ಷದ ಹಿರಿಯ ಮಹಿಳೆ, ಸಾಫ್ಟವೇರ್ ಎಂಜಿನಿಯರ್, ವೃತ್ತಿಪರ ಮ್ಯಾರಾಥಾನ್ ಓಟಗಾರರು ಸೇರಿದಂತೆ ಸಾವಿರಾರು ಜನರು ಈಗಾಗಲೇ ಹೆಸರು ನೋಂದಾಯಿಸಿದ್ದಾರೆ.
ವಿಜಯಪುರ ವೃಕ್ಷತ್ಥಾನ್ ಹೆರಿಟೇಜ್ ರನ್- 2023ರಲ್ಲಿ ಪಾಲ್ಗೊಳ್ಳಲಿರುವ ಖ್ಯಾತನಾಮರ ಪರಿಚಯ ಇಲ್ಲಿದೆ.
ಹಾಗಿದ್ರೆ ಮ್ಯಾರಾಥಾನ್‌ನಲ್ಲಿ ಪಾಲ್ಗೊಳ್ತಿರೋದು ಯಾರ್ ಯಾರು.!?
• ಕಟಪಾಡಿ ಸುಲತಾ ಕಾಮತ
ಉಡುಪಿಯ ಕಾಪುವಿನ ಹಿರಿಯ 72 ವರ್ಷ ವಯಸ್ಸಿನ ಹಿರಿಯ ಮಹಿಳೆ ಕಟಪಾಡಿ ಸುಲತಾ ಕಾಮತ ಬರಿಗಾಲ ಓಟಗಾರ್ತಿ ಎಂದೇ ಖ್ಯಾತಿ ಪಡೆದಿದ್ದಾರೆ. ಬರಿಗಾಲಿನಲ್ಲಿ ಓಡುವ ಇವರು ಈಗಾಗಲೇ ದೇಶ ವಿದೇಶಗಳ ನಾನಾ ಮ್ಯಾರಾಥಾನ್ ಗಳಲ್ಲಿ ಪಾಲ್ಗೋಂಡು ಅನೇಕ ಪದಕ ಜಯಿಸಿದ್ದು, ವಿಜಯಪುರ ವೃಕ್ಷತ್ಥಾನ್ ಹೆರಿಟೇಜ್ ರನ್- 2023ರಲ್ಲಿ ಪಾಲ್ಗೋಳ್ಳಲು ತಮ್ಮ ಹೆಸರು ನೋಂದಾಯಿಸಿದ್ದಾರೆ.
• ಪ್ರಶಾಂತ ಹಿಪ್ಪರಗಿ..!
ಪ್ರಶಾಂತ ಹಿಪ್ಪರಗಿ ಟ್ರಯಥ್ಲಾನ್ ಪಟುವಾಗಿದ್ದು, ಬ್ರಾಝಿಲ್ ನಲ್ಲಿ ನಡೆಯಲಿರುವ ಡಿಇಸಿಎ ಐರಾನಮನ್ 2023 ರನ್ ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿರುವ ಭಾರತದ ಏಕೈಕ ಓಟಗಾರರಾಗಿದ್ದಾರೆ. ಟ್ರಯಥ್ಲಾನ್ ಪಟುವಾಗಿರುವ ಅವರು ಈ ಬ್ರಾಝಿಲ್ ಡೆಕಾ ಐರಾನಮನ್ ನ ಮೂರು ಬಗೆಯ ಸ್ಪರ್ಧೆಗಳಲ್ಲಿ ಪಾಲ್ಗೋಳ್ಳುತ್ತಿದ್ದಾರೆ. ಇವರು 11 ದಿನಗಳಲ್ಲಿ 38 ಕಿ. ಮೀ. ಈಜು, 1800 ಕಿ. ಮೀ. ಸೈಕ್ಲಿಂಗ್ ಮತ್ತು 422 ಕಿ. ಮಿ. ಓಟವನ್ನು ಪೂರ್ಣಗೊಳಿಸುವ ಮೂಲಕ ಅವರು ಈಗಾಗಲೇ 19 ದಿನಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಸೈಕ್ಲಿಂಗ್ ನ್ನು ಪೂರ್ಣಗೊಳಿಸಿದ್ದಾರೆ. ಇನ್ನು ಳಿದ ಸ್ಪರ್ದೆಗಾಗಿ ಅವರು ಬ್ರೆಝಿಲ್ ಗೆ ತೆರಳುತ್ತಿದ್ದು, ಡಿಸೆಂಬರ್ 24 ರಂದು ವಿಜಯಪುರಕ್ಕೆ ಆಗಮಿಸಿ ವೃಕ್ಷತ್ಥಾನ್ ಹೆರಿಟೇಜ್ ರನ್ ನಲ್ಲಿ ಪಾಲ್ಗೋಳ್ಳಲಿದ್ದಾರೆ.
• ಪ್ರೇರಣಾ ಶ್ರವಣ ಕುಮಾರ..!
16 ವರ್ಷದ ಪ್ರೇರಣಾ ಅಂತಾರಾಷ್ಟ್ರೀಯ ಟ್ರಯಥ್ಲೀಟ್ ಆಗಿದ್ದು, 2022ರಲ್ಲಿ ಹಾಂಗಕಾಂಗ್ ನಲ್ಲಿ ನಡೆದ ಎಷಿಯಾ ಯುಥ್ ಟ್ರೈಯಥ್ಲಾನ್ ಚಾಂಪಿಯನಶಿಪ್ ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಗುಜರಾತಿನಲ್ಲಿ 2022ರಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಟದಲ್ಲಿ ಟ್ರಯಥ್ಲಾನ್ ನಲ್ಲಿ ಪಾಲ್ಗೊಂಡಿದ್ದಾರೆ. ರಾಷ್ಟ್ರೀಯ ಸೈಕ್ಲಿಂಗ್, 3 ಕಿ. ಮೀ, 5 ಕಿ. ಮೀ, 10 ಕಿ. ಮೀ ಓಟದಲ್ಲಿ ಪಾಲ್ಗೋಂಡು ಹೆಸರು ಮಾಡಿದ್ದಾರೆ.
• ರಾಜಿಂದರ ಕೌರ..!
53 ವರ್ಷದ ರಾಜಿಂದರ ಕೌರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಮತ್ತು ಅಲ್ಟ್ರಾ ಮ್ಯಾರಾಥಾನ್ ನಲ್ಲಿ ಬೆಳ್ಳಿಯ ಪದಕ ಪಡೆದ ಸಾಧಕಿಯಾಗಿದ್ದಾರೆ. ಯುಎಸ್ ನ ಕ್ಲೆವಲ್ಯಾಂಡ್ ನಲ್ಲಿ ನಡೆದ ಟ್ರಯಥ್ಲಾನ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
• ಶೋಭಾ ನರೇಂದ್ರ ಕುಮಾರ ನಾಗಶೆಟ್ಟಿ..!
ಸಿ.ಆರ್.ಡಿ.ಎಸ್. ಫೌಂಡೇಶನ್ ಸಂಸ್ಥಾಪಕರು ಹಾಗೂ ನಿರ್ದೇಶಕರಾಗಿರುವ ಶೋಭಾ ಮತ್ತು ನರೇಂದ್ರಕುಮಾರ ನಾಗಶೆಟ್ಟಿ ಅವರೂ ಕೂಡ ಈ ಮ್ಯಾರಾಥಾನ್ ನಲ್ಲಿ ಪಾಲ್ಗೋಳ್ಳುತ್ತಿದ್ದಾರೆ. ಇವರು, ಕಳೆದ 25 ವರ್ಷಗಳಿಂದ ಮ್ಯಾರಾಥಾನ್, ಅಲ್ಟ್ರಾ ಮ್ಯಾರಾಥಾನ್ ಸೇರಿದಂತೆ ನಾನಾ ಸ್ಪರ್ಧೆಗಳಲ್ಲಿ ಪಾಲ್ಗೋಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಫೌಂಡೇಶನ್ ಮೂಲಕ ಕರ್ನಾಟಕದ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಮತ್ತು ಜಾಗೃತಿ ಮೂಡಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.
• ವೆಂಟಕೇಶ ಅಡಿಗ..!
ವೃತ್ತಿಯಂದ ಎಂಜಿನಿಯರ್ ಆಗಿರುವ ವೆಂಕಟೇಶ ಅಡಿಗ ಫಿಟ್ನೆಸ್ ಗೆ ಹೆಚ್ಚಿನ ಒತ್ತು ನೀಡುತ್ತಿರುವ ಮ್ಯಾರಾಥಾನ್ ಓಟಗಾರರಾಗಿದ್ದು, 5 ಕಿ. ಮೀ. ಯಿಂದ 50 ಕಿ. ಮೀ. ವರಗೆ ದೇಶಾದ್ಯಂತ ನಡೆದ ನಾನಾ ಮ್ಯಾರಾಥಾನ್ ಗಳಲ್ಲಿ ಪಾಲ್ಗೋಂಡು ಹೆಸರು ಮಾಡಿದ್ದಾರೆ. ಬೋಸ್ಟನ್ ನಲ್ಲಿ ನಡೆದ 3x ಮ್ಯಾರಾಥಾನ್ ಗೆ ಅರ್ಹತೆ ಪಡೆದಿರುವ ಅವರು, ಸ್ಪೋರ್ಟ್ಸ್ ಕೌನ್ಸಿಲ್ ಪ್ರಾರಂಭಿಸಿ ಓಟಗಾರರಿಗೆ ತರಬೇತಿ ನೀಡುತ್ತಿದ್ದಾರೆ. ಅವರೂ ಕೂಡ ಹೆಸರು ನೋಂದಾಯಿಸಿದ್ದು, ಈ ಬಾರಿ ವಿಜಯಪುರ ಮ್ಯಾರಾಥಾನ್ ನಲ್ಲಿ ಪಾಲ್ಗೋಳ್ಳುತ್ತಿದ್ದಾರೆ.
• ಸಮೀರ ಜೋಶಿ..!
ಅಲ್ಟ್ರಾ ಮ್ಯಾರಾಥಾನ್ ಓಟಗಾರ ಸಮೀರ ಜೋಶಿ ಕೂಡ ವಿಜಯಪುರ ವೃಕ್ಷತ್ಥಾನ್ ಹೆರಿಟೇಜ್ ರನ್- 2023ರಲ್ಲಿ ಪಾಲ್ಗೋಳ್ಳುತ್ತಿದ್ದಾರೆ. ಬರ್ಲಿನ್ ಮತ್ತು ಚಿಕ್ಯಾಗೋದಲ್ಲಿ ನಡೆದ 2ನೇ ಹಿರಿಯರ ಮ್ಯಾರಾಥಾನ್ ನಲ್ಲಿ ಪಾಲ್ಗೋಂಡು ಗಮನ ಸೆಳೆದಿದ್ದಾರೆ. 2014ರಲ್ಲಿ ಮ್ಯಾರಾಥಾನ್ ಮತ್ತು ಅಲ್ಟ್ರಾ ಮ್ಯಾರಾಥಾನ್, 2020ರಲ್ಲಿ ದೆಹಲಿ ಮ್ಯಾರಾಥಾನ್, ಇದೇ ವರ್ಷ ಬೆಂಗಳೂರಿನಲ್ಲಿ ನಡೆದ 50 ಕಿ. ಮೀ. ಅಲ್ಟ್ರಾ ಮ್ಯಾರಾಥಾನ್ ನಲ್ಲಿ ಪಾಲ್ಗೋಂಡಿರುವ ಅವರು, ನಾನಾ ವಯೋಮಾನಗಳ ವಿಭಾಗದಲ್ಲಿ 10 ಕಿ. ಮೀ. ಮ್ಯಾರಾಥಾನ್ ನಲ್ಲಿಯೂ ಪಾಲ್ಗೋಂಡು ಗಮನ ಸೆಳೆದಿದ್ದಾರೆ. ಇವರು ಕ್ರೀಡಾ ವಿಭಾಗದ ನಾನಾ ಸಂಸ್ಥೆಗಳಿಂದ ಮಾನ್ಯತೆ ಪಡೆದ ಕೋಚ್ ಕೂಡ ಆಗಿದ್ದಾರೆ.
• ಅನಂತರಾಮ..!
ಬೆಂಗಳೂರಿನ ಬಿ.ಎನ್ಐ ನಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ 64 ವರ್ಷದ ಅನಂತರಾಮ ಕೂಡ ಈ ಓಟದಲ್ಲಿ ಪಾಲ್ಗೋಳ್ಳುತ್ತಿರುವುದು ಗಮನಾರ್ಹವಾಗಿದೆ. ಅನಂತ ಮ್ಯಾರಾಥಾನ್ ಓಟಗಾರರಾಗಿದ್ದು, ಸಿಟಿ ಆಫ್ ಮ್ಯಾರಾಥಾನ್ ಖ್ಯಾತಿಯ ಅಥೆನ್ಸ್ ನಲ್ಲಿಯೂ ಮ್ಯಾರಾಥಾನ್ ನಲ್ಲಿ ಪಾಲ್ಗೋಂಡು ಹೆಸರು ಮಾಡಿದ್ದಾರೆ. 10 ಕಿ. ಮೀ., 54.1 ಕಿ. ಮೀ., 21 ಕಿ. ಮೀ. ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ, ಇತ್ತೀಚೆಗೆ ನಡೆದ ಲಧಾಕ್ ಮ್ಯಾರಾಥನ್ ನಲ್ಲಿ ಭಾಗವಹಿಸಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ: ಸಚಿವ ಎಂ.ಬಿ.ಪಾಟೀಲ
• ಹರಿನಾಥ..!
ಬೆಂಗಳೂರಿನ ರನ್ನಿಂಗ್ ಕ್ಲಬ್ ರಾಯಭಾರಿಯಾಗಿರುವ ಹರಿನಾಥ ಕೂಡ ವೃಕ್ಷತ್ಥಾನ್ ಹೆರಿಟೇಜ್ ರನ್- 2023ನಲ್ಲಿ ಪಾಲ್ಗೋಳ್ಳುತ್ತಿದ್ದಾರೆ. ದೇಶಾದ್ಯಂತ ನಾನಾ ಭಾಗಗಳಲ್ಲಿ ನಡೆದ ಮ್ಯಾರಾಥಾನ್, ಅಲ್ಟ್ರಾ ಮ್ಯಾರಾಥಾನ್ ಗಳನ್ನು ಓಟಗಾರ ಎಂದೇ ಹೆಸರು ಪಡೆದಿದ್ದಾರೆ. ಕಳೆದ ಡಿಸೆಂಬರ್ 9 ಮತ್ತು 9 ರಂದು ಬೆಂಗಳೂರಿನಿಂದ ಶ್ರವಣ ಬೆಳಗೋಳವರೆಗೆ ಸುಮಾರು 150 ಕಿ. ಮೀ. ಓಡಿ ಗಮನ ಸೆಳೆದಿದ್ದಾರೆ.
ಹಾಗಿದ್ರೆ ಮ್ಯಾರಾಥಾನ್‌ಗೆ ನೋಂದಾಯಿಸಿಕೊಳ್ಳೋದು ಹೇಗೆ..!?
ಇವರಷ್ಟೇ ಅಲ್ಲ, ಇನ್ನೂ ಅನೇಕ ಹೆಸರಾಂತ ಓಟಗಾರರು ಪಾಲ್ಗೋಳ್ಳುತ್ತಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಆನಲೈನ್ ಮೂಲಕ https://reg.myraceindia.com/MRTS/VHR2023 ತಮ್ಮ ಹೆಸರುಗಳನ್ನು ಡಿಸೆಂಬರ್ 13ರ ರೊಳಗೆ ನೋಂದಾಯಿಸಬಹುದಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.