Asianet Suvarna News Asianet Suvarna News

ಎಂ.ಬಿ.ಪಾಟೀಲರಿಗೆ ಜಲಸಂಪನ್ಮೂಲ ಕೊಟ್ಟಿದ್ರೆ ಕಥೆಯೇ ಬೇರೆಯಾಗ್ತಿತ್ತು ಎಂದ ರಂಭಾಪುರಿ ಶ್ರೀಗಳು!

ಕಾಂಗ್ರೆಸ್ ಸರ್ಕಾರ ಈ ಬಾರಿ ಎಂ.ಬಿ. ಪಟೀಲ್ ಅವರಿಗೆ ನೀರಾವರಿ ಇಲಾಖೆಯನ್ನು ಕೊಟ್ಟಿದರೆ ಕಥೆ ಬೇರೆಯೇ ಆಗಿರುತ್ತಿತ್ತು ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ.

Congress Government should give irrigation department to MB Patil said Rambhapuri Swamiji sat
Author
First Published Dec 10, 2023, 8:56 PM IST

ವಿಜಯಪುರ (ಡಿ.10): ಈ ಬಾರಿಯ ಕಾಂಗ್ರೆಸ್ ಸರ್ಕಾರದಲ್ಲಿ ಎಂ.ಬಿ. ಪಾಟೀಲ್ ಅವರಿಗೆ ನೀರಾವರಿ ಖಾತೆ ಕೊಟ್ಟಿದ್ದರೆ ಆ ಕಥೆಯೇ ಬೇರೆಯಾಗಿರುತ್ತಿತ್ತು. ಅಷ್ಟು ದೊಡ್ಡ ಪ್ರಮಾಣದಲ್ಲಿ ನೀರಾವರಿ ಯೋಜನೆಗಳನ್ನು ಮಾಡಲು ಅವಕಾಶವಿತ್ತು. ಆದ್ರೆ ಅವಕಾಶ ಸಿದ್ದರಾಮಯ್ಯರು ಕೊಡಲಿಲ್ಲ ಎಂದು ಬಾಳೆ ಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬಳವಾಟ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದಲ್ಲಿ ಬೃಹತ್ ಕೈಗಾರಿಕಾ ಸಚಿವರಾಗಿ ಎರಡನೆ ಸ್ಥಾನದಲ್ಲಿ ಎಂಬಿ ಪಾಟೀಲ್ ಮುನ್ನಡೆಯುತ್ತಿದ್ದಾರೆ. ಆದರೆ, ಈ ಬಾರಿ ಸರ್ಕಾರದಲ್ಲಿ ಎಂಬಿ ಪಾಟೀಲ್ ಗೆ ನೀರಾವರಿ ಖಾತೆ ಕೊಟ್ಟಿದ್ರೆ ಆ ಕಥೆಯೇ ಬೇರೆಯಾಗಿರುತ್ತಿತ್ತು. ಅಷ್ಟು ದೊಡ್ಡ ಪ್ರಮಾಣದಲ್ಲಿ ಮಾಡಲು ಸಾಧ್ಯವಿತ್ತು. ಆದ್ರೆ ಅವಕಾಶ ಸಿದ್ದರಾಮಯ್ಯರು ಕೊಡಲಿಲ್ಲ. ಖಂಡಿತವಾಗಿಯೂ ಸಿದ್ದರಾಮಯ್ಯರಿಗೆ ಎಂಬಿ ಪಾಟೀಲ್ ಬೇಕಾದವರು. ಅವರಿಗೆ ಜಲಸಂಪನ್ಮೂಲ ಖಾತೆ ಸಿಗುತ್ತೆ ಅಂತ ಬಹಳ ಆಸೆ ಇಟ್ಟುಕೊಂಡಿದ್ದೆವು. ಅದು ಬೇರೆಯವರ ಪಾಲಾಯಿತು ಎಂದು ಪರೋಕ್ಷವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಅಸಮಾಧಾನ ಹೊರಹಾಕಿದರು.

ಮಂಡ್ಯದಲ್ಲಿಯೂ'ಹಳ್ಳಿಕಾರ್ ಒಡೆಯ'ನಾದ ವರ್ತೂರು ಸಂತೋಷ್ : ದೇಸಿ ತಳಿ ಉಳಿಸೋಕೆ ಬಿಡಿ ಎಂದ್ರು ರೈತರು!

ವಿಜಯಪುರ ಕೈಗಾರಿಕಾ ಅಭಿವೃದ್ಧಿಗೆ ಭದ್ರ ಬುನಾದಿ: ಈಗ ರಾಜ್ಯ ಹಾಗೂ ಜಿಲ್ಲೆಯಲ್ಲಿ ಕೈಗಾರಿಕೆಯಿಂದ ಏನೇನು ಮಾಡಬೇಕು, ಅದನ್ನು ಮಾಡಲು ಭದ್ರವಾದ ಬುನಾದಿ ಹಾಕ್ತಿದ್ದಾರೆ‌‌. ವಿದೇಶದಿಂದ ಹೆಚ್ಚಿನ ನೆರವು ತರುತ್ತಿದ್ದಾರೆ. ಹಿಂದೆ ಜಲಸಂಪನ್ಮೂಲ ಸಚಿವರಿದ್ದಾಗ ಬಹಳ ದೊಡ್ಡ ಕೆಲ್ಸ ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ಎಲ್ಲಾ ಭಾಗದಲ್ಲಿ ಕೆರೆ ತುಂಬುವ ಕೆಲ್ಸ ಮಾಡಿದ್ದು ದೊಡ್ಡ ಕೆಲಸವಾಗಿದೆ. ಇವತ್ತು ಬಹಳ ಮಳೆ ಆಗದೇ ಇದ್ದರೂ ಇಲ್ಲಿ ಹಸಿರು ನೋಡಿದ್ರೆ, ಎಲ್ಲಾ ಕೆರೆ ತುಂಬಿದ ಪರಿಣಾಮದಿಂದಲೇ ಅಂತರ್ಜಲ ಹೆಚ್ಚಾಗಿ ಬೋರ್ವೆಲ್ ನಲ್ಲಿ ನೀರಿದೆ. ಫಸಲು ಬೆಳೆಯಲು ಸಾಧ್ಯ ಆಗಿದೆ ಎಂದು ರಂಭಾಪುರ ಶ್ರೀಗಳು ಹೇಳಿದರು.

ನಮ್ಮ ಸಮಸ್ಯೆ ನಾವು ಪಕ್ಷದಲ್ಲಿಯೇ ಪರಿಹರಿಸಿಕೊಳ್ಳುತ್ತೇವೆ: ಸಚಿವ ಎಂ.ಬಿ.ಪಾಟೀಲ್‌

ರೇಣುಕಾಚಾರ್ಯ ಪೀಠಕ್ಕೆ ಅನುದಾನ ಸ್ಥಗಿತ: ರೇಣುಕಾಚಾರ್ಯ ಶಿಲಾ ಮಂಟಪಕ್ಕೆ ರಾಜ್ಯ ಸರ್ಕಾರದಿಂದ ಅನುದಾನ ಕೊಡುತ್ತಿಲ್ಲ. ಬಾಳೆ ಹೊನ್ನೂರು ಧರ್ಮ ಪೀಠದಲ್ಲಿ 51ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಶಿಲಾ ಮಂಟಪ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಮೂರು ಬೃಹತ್ ಶಿಲೆಗಳು ಬಂದಿವೆ. ಶಿಲ್ಪಿಗಳು ಕೆಲಸ ಮಾಡ್ತಿದ್ದಾರೆ. 36 ಅಡಿ ಎತ್ತರ 22 ಅಗಲದ ಕಲ್ಲು ಆಂಧ್ರದಿಂದ ವರ್ಷದ ಕೊನೆ ಹಂತದಲ್ಲಿ ಬರಲಿದೆ. 12 ಕೋಟಿ  ರೂಪಾಯಿ ಯೋಜನೆ ಅದು. ಯಡಿಯೂರಪ್ಪ ಸಿಎಂ ಆಗಿದ್ದಾಗ 5 ಕೋಟಿ ರೂ. ಬಿಡುಗಡೆ ಮಾಡಿದರು. ಆಮೇಲೆ ಬಂದಂತಹ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಆಗಲಿ, ಸದ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಸ್ಥರಾಗಲಿ‌‌ ಯಾವುದೇ ರೀತಿ ಸ್ಪಂದಿಸದೇ ತಟಸ್ಥವಾಗಿ ಮುಂದುವರಿದ್ದಾರೆ‌. ಇಂತಹ ಸಂದರ್ಭದಲ್ಲಿ ನಿಗದಿಪಡಿಸಿದ ಕಾರ್ಯ ಮುಗಿಸಬೇಕು ಅನ್ನೋ ಸಂಕಲ್ಪ ಮಾಡಿದ್ದು, ಭಕ್ತರ ಸಹಾಯ ಪಡೆದುಕೊಂಡು ಪೀಠವೂ ಸ್ವಲ್ಪ ಹೊರೆ ಹೊತ್ತು ಆ ಕಾರ್ಯ ಪೂರ್ಣಗೊಳಿಸಲು ಇಚ್ಛೆಪಟ್ಟಿದ್ದೇವೆ ಎಂದು ತಿಳಿಸಿದರು.

Follow Us:
Download App:
  • android
  • ios