Asianet Suvarna News Asianet Suvarna News

ರೈಲ್ವೆ ಫ್ಲಾಟ್ ಫಾರಂ ಟಿಕೆಟ್ ದರ ಹೆಚ್ಚಳ: ಜನದಟ್ಟಣೆ ತಗ್ಗಿಸಲು ಹೆಚ್ಚಿನ ಹಣ ಕೊಡಬೇಕಾ?

ಈಗ ಹಬ್ಬದ ಸೀಸನ್, ದಸರಾ ಮುಗಿದು ದೀಪಾವಳಿ ಹತ್ತಿರವಾಗುತ್ತಿದೆ. ಈ ಮಧ್ಯೆ ನೈಋತ್ಯ ರೈಲ್ವೆ, ರೈಲ್ವೆ ನಿಲ್ದಾಣದಲ್ಲಿ ಜನದಟ್ಟಣೆಯನ್ನು ತಗ್ಗಿಸಲು ಪ್ಲಾಟ್ ಫಾರ್ಮ್ ಟಿಕೆಟ್ ದರವನ್ನು ದುಪ್ಪಟ್ಟು ಮಾಡಿ ರೈಲ್ವೆ ಇಲಾಖೆ ಆದೇಶಿಸಿದೆ.

hubballi railway depertment plotform fare increase peoples outraged
Author
First Published Oct 20, 2022, 2:38 PM IST

ಹುಬ್ಬಳ್ಳಿ (ಅ.20): ಈಗ ಹಬ್ಬದ ಸೀಸನ್, ದಸರಾ ಮುಗಿದು ದೀಪಾವಳಿ ಹತ್ತಿರವಾಗುತ್ತಿದೆ. ಈ ಮಧ್ಯೆ ನೈಋತ್ಯ ರೈಲ್ವೆ, ರೈಲ್ವೆ ನಿಲ್ದಾಣದಲ್ಲಿ ಜನದಟ್ಟಣೆಯನ್ನು ತಗ್ಗಿಸಲು ಪ್ಲಾಟ್ ಫಾರ್ಮ್ ಟಿಕೆಟ್ ದರವನ್ನು ದುಪ್ಪಟ್ಟು ಮಾಡಿ ರೈಲ್ವೆ ಇಲಾಖೆ ಆದೇಶಿಸಿದೆ. ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ವ್ಯಾಪ್ತಿಗೆ ಬರುವ ಬೆಂಗಳೂರು, ಯಶವಂತಪುರ, ಮೈಸೂರು ಹುಬ್ಬಳ್ಳಿ ಧಾರವಾಡ ಸೇರಿದಂತೆ  ಪ್ರಮುಖ ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರಂ ಟಿಕೆಟ್ ದರ ಏರಿಕೆ ಬಿಸಿ ತಟ್ಟಲಿದೆ.

10 ದಿನ ಟೈಮ್‌ ಅಷ್ಟೇ, ದೇವಸ್ಥಾನ ಖಾಲಿ ಮಾಡ್ಬೇಕು.. ಹನುಮಂತನಿಗೆ ನೋಟಿಸ್‌ ನೀಡಿದ ರೈಲ್ವೆ ಇಲಾಖೆ!

ಈಗಾಗಲೇ ಪ್ಲಾಟ್ ಫಾರಂ ಟಿಕೆಟ್ ದರವನ್ನು ಹೆಚ್ಚಿಸುವ  ಕುರಿತು ಚಿಂತನೆ ನಡೆಸಿದ್ದಾಗಿ ಹೇಳಿದ್ದ ನೈಋತ್ಯ ರೈಲ್ವೆ,  ಈಗಾಗಲೇ ತನ್ನ ವ್ಯಾಪ್ತಿಗೆ ಬರುವ ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ಹತ್ತು ರೂಪಾಯಿ ಹೆಚ್ಚಿಸಿದ್ದು, ಇದರೊಂದಿಗೆ ಪ್ಲಾಟ್‌ಫಾರಂ ಟಿಕೆಟ್ ದರವು 10 ರಿಂದ 20 ರೂಪಾಯಿಗೆ ಏರಿಕೆಯಾಗಿದೆ. ರೈಲ್ವೆ ಪ್ರಯಾಣಿಕರಿಗೆ ಪ್ಲಾಟ್‌ಫಾರಂಗಳಲ್ಲಿ ಓಡಾಟಕ್ಕೆ ಮುಕ್ತ ಅವಕಾಶ ಮಾಡಿಕೊಡಲು ಟಿಕೆಟ್ ದರವನ್ನು ತಾತ್ಕಾಲಿಕವಾಗಿ ಹೆಚ್ಚಿಸಲಾಗಿದೆ ಎಂದು ರೈಲ್ವೆಯು ಇಲಾಖೆ ತಿಳಿಸಿದೆ. ತಮ್ಮ ಕುಟುಂಬದವರು ಹಾಗೂ ಪ್ರೀತಿ ಪಾತ್ರರಿಗೆ ವಿದಾಯ ಹೇಳಲು ನಿಲ್ದಾಣಕ್ಕೆ ಬರುವವರ ಜೇಬಿಗೆ ಹೆಚ್ಚುವರಿಯಾಗಿ 10 ರೂಪಾಯಿ ಕತ್ತರಿ ಬೀಳಲಿದೆ.

ಇನ್ನೂ ಪ್ರಯಾಣಿಕರು ಅಥವಾ ಜನರು ರೈಲು ನಿಲ್ದಾಣಕ್ಕೆ ಹೆಚ್ಚಾಗಿ ಬರುವುದರಿಂದ ರೈಲ್ವೆ‌ ಇಲಾಖೆ ಆದಾಯ ಹೆಚ್ಚಲಿದೆ. ಅಂತಹ ಸಂದರ್ಭದಲ್ಲಿ ದರ ಹೆಚ್ಚಿಸುವ ಬದಲು ಕಡಿಮೆ ಮಾಡಬೇಕು. ನೈರುತ್ಯ ರೈಲ್ವೆಯವರು ಕೈಗೊಂಡಿರುವ ಈ ತಪ್ಪು ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು. ಇದು ಪ್ರಯಾಣಿಕರನ್ನ ಬೇಕಾಬಿಟ್ಟಿಯಾಗಿ ಸುಲಿಗೆ ಮಾಡುವ ಹುನ್ನಾರ ಎಂದು ಪ್ರಯಾಣಿಕರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Hubballi: ಮಂಗಳವಾರ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌

ಒಟ್ಟಿನಲ್ಲಿ ಈಗಾಗಲೇ ಪರಿಷ್ಕೃತ ದರ ಜಾರಿಯಾಗಿದ್ದು,‌ ಸಾರ್ವಜನಿಕರಿಗೆ ಜೇಬಿಗೆ ಕತ್ತರಿ ಬಿದಿದ್ದೆ. ಈ ಬಗ್ಗೆ ನೈಋತ್ಯ ರೈಲ್ವೆ ವಲಯ ಅಧಿಕಾರಿಗಳಿಗೆ ಈ ಐಡಿಯಾ ಕೊಟ್ಟ ಪುಣ್ಯಾತ್ಮ ಯಾರು ಅನ್ನೋದು ದೊಡ್ಡ ಪ್ರಶ್ನೆ. ಹಬ್ಬಹರಿದಿನಗಳಲ್ಲಿ ಸಾಮಾನ್ಯವಾಗಿ ಜನರ ಓಡಾಟ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ಪ್ರಯಾಣಿಕರನ್ನ ಸುಲಿಗೆ ಮಾಡಿದ್ದು ಎಷ್ಟರಮಟ್ಟಿಗೆ ಸರಿ?  ನೈಋತ್ಯ ರೈಲ್ವೆ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಅನ್ನೋದು ಸಾರ್ವಜನಿಕರ‌ ಅಭಿಪ್ರಾಯ.

Follow Us:
Download App:
  • android
  • ios