10 ದಿನ ಟೈಮ್‌ ಅಷ್ಟೇ, ದೇವಸ್ಥಾನ ಖಾಲಿ ಮಾಡ್ಬೇಕು.. ಹನುಮಂತನಿಗೆ ನೋಟಿಸ್‌ ನೀಡಿದ ರೈಲ್ವೆ ಇಲಾಖೆ!

ನಮ್ಮ ರೈಲ್ವೇ ಜಮೀನಿನಲ್ಲಿ ನಿನ್ನ ದೇವಸ್ಥಾನವಿದೆ. ಒಂದೇ ಮಂದಿರ ಬಿಟ್ಟು ಹೋಗಬೇಕು. ಇಲ್ಲವೇ ಈ ಸ್ಥಳವನ್ನು ಖಾಲಿ ಮಾಡಬೇಕು ಎಂದು ರೈಲ್ವೆ ಇಲಾಖೆ ತನ್ನ ನೋಟಿಸ್‌ನಲ್ಲಿ ಬರೆದಿದೆ. ಇದರ ನಡುವೆ, ರೈಲ್ವೆ ಇಲಾಖೆ ಸ್ಪಷ್ಟೀಕರಣ ನೀಡಿದ್ದು, ಹನುಮಾನ್‌ ಜೀ ಎನ್ನುವ ಹೆಸರು ಅಚಾತುರ್ಯದಿಂದ ನೋಟಿಸ್‌ನಲ್ಲಿ ಸೇರಿದೆ ಎಂದಿದೆ.

Notice to Lord Hanuman to vacate the temple in 10 days Railway pasted notice outside the temple san

ರಾಂಚಿ (ಅ.12): ದೇವ್ರಿಗೆ ಜಾಗ ಖಾಲಿ ಮಾಡಿ ಎಂದು ನೋಟಿಸ್‌ ಕಳಿಸಿದನ್ನು ನೀವೆಂದಾದರೂ ಕೇಳಿದ್ದೀರಾ? ಆದರೆ, ನಮ್ಮ ಇಂಡಿಯನ್‌ ರೈಲ್ವೇಸ್‌ ಅದನ್ನೂ ಮಾಡಿದೆ. ಜಾರ್ಖಂಡ್‌ನ ಧನಬಾದ್‌ನಲ್ಲಿ ರೈಲ್ವೇಸ್‌ನ ಜಾಗದಲ್ಲಿ ನಿರ್ಮಾಣವಾಗಿರುವ ದೇವಸ್ಥಾನವನ್ನು ಖಾಲಿ ಮಾಡುವಂತೆ ಭಗವಾನ್‌ ಹನುಮಂತನಿಗೆ ನೋಟಿಸ್‌ ನೀಡಲಾಗಿದೆ. ಈಸ್ಟ್ ಸೆಂಟ್ರಲ್ ರೈಲ್ವೆ ಮಂಗಳವಾರ ಸಂಜೆ ದೇವಸ್ಥಾನದ ಹೊರಗಿನ ಗೋಡೆಗೆ ಈ ನೋಟಿಸ್‌ಅನ್ನು ಅಂಟಿಸಿದೆ. ಅದರಲ್ಲಿ, ನಿನ್ನ ದೇವಸ್ಥಾನ ರೈಲ್ವೇಸ್‌ನ ಜಾಗದಲ್ಲಿದೆ. ಇದನ್ನು ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ. ದೇವಸ್ಥಾನವನ್ನು ತೊರೆದು, ಜಾಗವನ್ನು ಬಿಡಬೇಕು. ಅದಕ್ಕಾಗಿ 10 ದಿನಗಳ ಕಾಲಾವಕಾಶ ಮಾತ್ರವೇ ಇದೆ. ಇಲ್ಲದೇ ಇದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಬರೆಯಲಾಗಿದೆ.  ಈ ಪ್ರಕರಣ ಧನ್‌ಬಾದ್‌ನ ಬೆರಕ್‌ಬಂಧ್ ಪ್ರದೇಶದಲ್ಲಿ ನಡೆದಿದೆ. ಖಾತಿಕ್ ಬಸ್ತಿಯಲ್ಲಿನ ಭೂಮಿಯನ್ನು ಖಾಲಿ ಮಾಡುವಂತೆ ರೈಲ್ವೆ ನೋಟಿಸ್ ಅಂಟಿಸಿದೆ. ಹನುಮಾನ್ ದೇಗುಲ ಮಾತ್ರವಲ್ಲದೆ ಅದರ ಸುತ್ತಲಿನ ಅಕ್ರಮ ಕೊಳೆಗೇರಿಗಳನ್ನೂ ತೆಗೆದುಹಾಕುವಂತೆ ರೈಲ್ವೆ ಹೇಳಿದೆ. ಈ ನಡುವೆ ಇದಕ್ಕೆ ಸ್ಪಷ್ಟೀಕರಣ ನೀಡಿರುವ ರೈಲ್ವೇಸ್‌, ಭಗವಾನ್‌ ಹನುಮನ ಹೆಸರು ಅಚಾತುರ್ಯದಿಂದ ಸೇರಿದೆ ಎಂದು ಹೇಳಿದೆ.

ಇದು ಕಣ್ತಪ್ಪಿನಿಂದ ಆಗಿರುವ ದೋಷ ಎಂದು ಧನ್ಬಾದ್ (Dhanbad) ರೈಲ್ವೆ ವಿಭಾಗದ ಹಿರಿಯ ವಿಭಾಗ ಎಂಜಿನಿಯರ್ ಎಸ್.ಕೆ.ಚೌಧರಿ ಹೇಳಿದ್ದಾರೆ. ನೋಟಿಸ್‌ನಲ್ಲಿ ಹನುಮಾನ್‌ ಜೀ ಎನ್ನುವ ಹೆಸರನ್ನು ಗೊತ್ತಿಲ್ಲದೆ ಬರೆಯಲಾಗಿದೆ. ಅದನ್ನು ಸುಧಾರಿಸಲಾಗುವುದು. ಮುಂದೆ ಇಂತಹ ತಪ್ಪು ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು. ಯಾರ ಭಾವನೆಗಳಿಗೂ ಧಕ್ಕೆ ತರುವುದು ಇಲಾಖೆಯ ಉದ್ದೇಶವಾಗಿರಲಿಲ್ಲ. ನಾವು ಮಾಡಬೇಕಾಗಿರುವುದು ಭೂಮಿಯ ಮೇಲಿನ ಅತಿಕ್ರಮಣವನ್ನು ತೆಗೆಯುವುದು ಮಾತ್ರ ಎಂದು ಹೇಳಿದ್ದಾರೆ.

ಬೆರಕ್‌ಬಂದ್‌ನ ಖಾಟಿಕ್ (Berakbandh Khatik ) ಪ್ರದೇಶದಲ್ಲಿ ಕಳೆದ 20 ವರ್ಷಗಳಿಂದ ಜನರು ರೈಲ್ವೆ ಭೂಮಿಯಲ್ಲಿ ವಾಸವಾಗಿದ್ದಾರೆ. ಖಟಿಕ್ ಸಮುದಾಯದ (Khatik community) ಜನರು ಮುಖ್ಯವಾಗಿ ಉತ್ತರ ಪ್ರದೇಶದಿಂದ (Uttar Pradesh) ಇಲ್ಲಿಗೆ ಬಂದಿದ್ದಾರೆ. ಕೊಳಗೇರಿಯಲ್ಲಿ ಬದುಕುವ ಮೂಲಕ, ನೀರು, ಹಣ್ಣುಗಳು, ಮೀನು, ತರಕಾರಿಗಳು ಮತ್ತು ಇತರ ಸಣ್ಣ ವ್ಯಾಪಾರಗಳು ಸಣ್ಣ ವ್ಯಾಪಾರಗಳನ್ನು ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ಅಕ್ರಮ ನಿವೇಶನವಾಗಿರುವ ಎಲ್ಲ ಮನೆಗಳನ್ನು ತೆರವುಗೊಳಿಸುವಂತೆ ರೈಲ್ವೆ ತಂಡ ನೋಟಿಸ್‌ ಅಂಟಿಸಿದೆ. ಎಲ್ಲ ಮನೆಗಳ ಗೋಡೆಗಳಿಗೂ ಅವರ ಹೆಸರಿನಲ್ಲಿ ನೋಟಿಸ್ ಅಂಟಿಸಲಾಗಿದೆ. ಈ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಎಲ್ಲಾ ಮನೆಗಳಿಗೂ ಅವರವರ ಹೆಸರಿನಲ್ಲಿ ನೋಟಿಸ್‌ (Notice) ಅಂಟಿಸಲಾಗಿದೆ. ಇದೇ ರೀತಿ ಹನುಮಂತನ ದೇವಸ್ಥಾನವನ್ನು ಮನೆ ಎಂದುಕೊಂಡ ಅಧಿಕಾರಿಗಳು, ಹನುಮಂತನ ಹೆಸರನ್ನೇ ನೋಟಿಸ್‌ನಲ್ಲಿ (Railways) ಬರೆದು ಅಂಟಿಸಲಾಗಿದೆ.

ಮೋಸದ ಜಗತ್ತು...ಕಣ್ಣುಜ್ಜಿಕೊಂಡರೆ ಕೈಗೆ ಬಂದ್ಬಿಡ್ತು ಕಣ್ಣು, ನಕಲಿ ಕಣ್ಣು ಹಾಕಿದ್ದ ಜಾರ್ಖಂಡ್‌ ಆಸ್ಪತ್ರೆ ಸೀಲ್‌!

ರೈಲ್ವೇಸ್‌ ನೋಟಿಸ್‌ಗೆ ಸ್ಥಳೀಯರ ಕಿಡಿ:
ದೇವಸ್ಥಾನದೊಂದಿಗೆ ತಮ್ಮ ಮನೆಗೂ ನೋಟಿಸ್‌ ನೀಡಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಟಿಕ್‌ ಬಸ್ತಿ ದೇವಸ್ಥಾನದ ಸನಿಹವಿದೆ. 1921 ರಿಂದಲೂ ನಾವು ಈ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ. ಈಗ ಅಕ್ರಮ ಎಂದು ಹೇಳಿರುವ ಅರ್ಥವೇನು ಎಂದು ಪ್ರಶ್ನಿಸಿದ್ದಾರೆ. ಸೋಮವಾರ ಹಾಗೂ ಮಂಗಳವಾರ ದೊಡ್ಡ ಸಂಖ್ಯೆಯಲ್ಲಿ ಸೇರಿದ ಜನರು ರೈಲ್ವೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

5 ವರ್ಷದ ಒಳಗಿನ ಮಕ್ಕಳ ಟಿಕೆಟ್‌ ಬುಕ್‌ ಮಾಡುವ ನಿಯಮ ಬದಲಾಗಿಲ್ಲ: ರೈಲ್ವೇಸ್‌ ಸ್ಪಷ್ಟ

ದೇಶದಲ್ಲಿ ಹಲವಾರು ಪೂಜಾಸ್ಥಳಗಳು ರೈಲ್ವೆ ಜಾಗದ ಮೇಲೆಯೇ ಇದೆ. ಹೀಗಿರುವಾಗ ದೇವಾಲಯಗಳನ್ನು ಮಾತ್ರವೇ ರೈಲ್ವೆ ಇಲಾಖೆ ಗುರಿ ಪಡಿಸುತ್ತಿರುವುದರ ಹಿಂದಿನ ಕಾರಣವೇನು ಎಂದು ಪ್ರಶ್ನೆ ಮಾಡಿದ್ದಾರೆ. ರೈಲ್ವೆ ಸ್ಟೇಡಿಯಂ ಬಳಿ ಇರುವ ರೈಲ್ವೆ ಭೂಮಿಯಲ್ಲಿ ನಿರ್ಮಿಸಲಾಗಿರುವ ಚರ್ಚ್ ಮತ್ತು ಮಜಾರ್‌ಗಳಿಗೆ ಅಂತಹ ಯಾವುದೇ ಸೂಚನೆ ನೀಡದಿರುವುದು ಆಶ್ಚರ್ಯಕರವಾಗಿದೆ ಎಂದು ಸ್ಥಳೀಯ ಮಹೇಂದ್ರ ಖಾಟಿಕ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios