ಹುಬ್ಬಳ್ಳಿ: ಫ್ರೂಟ್ ಇರ್ಫಾನ್ ಮರ್ಡರ್, ಬಚ್ಚಾ ಖಾನ್ ವಶಕ್ಕೆ
ಮೈಸೂರು ಜೈಲಿನಲ್ಲಿದ್ದ ಬಚ್ಚಾ ಖಾನ್‌ನನ್ನು ಕಸ್ಟಡಿ ಪಡೆದ ಹುಬ್ಬಳ್ಳಿ ಪೊಲೀಸರು| ಆಗಸ್ಟ್ 6ರಂದು ಫ್ರೂಟ್ ಇರ್ಫಾನ್ ಕೊಲೆ| ಫ್ರೂಟ್ ಇರ್ಫಾನ್ ಹತ್ಯೆಗೆ ರಿಯಲ್ ಎಸ್ಟೆಟ್ ದಂಧೆಯೇ ಕಾರಣ ಎಂಬ ಮಾತುಗಳು ಕೇಳಿ ಬಂದಿದ್ದವು|
ಹುಬ್ಬಳ್ಳಿ(ಸೆ.20): ಇಲ್ಲಿನ ಕಾರವಾರ ರಸ್ತೆಯ ಅಲ್‌ತಾಜ್ ಹೋಟೆಲ್ ಬಳಿ ನಡೆದಿದ್ದ ಫ್ರೂಟ್ ಇರ್ಫಾನ್ ಹತ್ಯೆಗೆ ಸಂಬಂಧಪಟ್ಟಂತೆ ಮೈಸೂರು ಜೈಲಿನಲ್ಲಿದ್ದ ಬಚ್ಚಾ ಖಾನ್‌ನನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಕಸ್ಟಡಿ ಪಡೆದು ಕರೆದುಕೊಂಡು ಬಂದಿದ್ದಾರೆ.
ಕಳೆದ ಆಗಸ್ಟ್ 6ರಂದು ಅಲ್‌ತಾಜ್ ಹೋಟೆಲ್‌ನ ಎದುರಿಗೆ ರೌಡಿಶೀಟರ್ ಆಗಿದ್ದ ಫ್ರೂಟ್ ಇರ್ಫಾನ್ ಮೇಲೆ ಮೂವರು ಹಾಡಹಗಲೇ ಗುಂಡು ಹಾರಿಸಿದ್ದರು. ಅಂದು ರಾತ್ರಿ ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ. ಹಾಡಹಗಲೇ ನಗರದ ಪ್ರಮುಖ ರಸ್ತೆಯಲ್ಲಿ ನಡೆದಿದ್ದ ಈ ಕೊಲೆ ಇಡೀ ನಗರವನ್ನೇ ಬೆಚ್ಚಿ ಬೀಳಿಸಿತ್ತು.
ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು: ರೌಡಿಶೀಟರ್ ಫ್ರೂಟ್ ಇರ್ಫಾನ್ ಮೇಲೆ ಫೈರಿಂಗ್
ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು, ಶೂಟ್ ಮಾಡಿದ್ದ ಮೂವರು ಸೇರಿದಂತೆ ಒಟ್ಟು 11 ಜನರನ್ನು ಈಗಾಗಲೇ ವಶಕ್ಕೆ ಪಡೆದಿದ್ದರು. ಫ್ರೂಟ್ ಇರ್ಫಾನ್ ಹತ್ಯೆಗೆ ರಿಯಲ್ ಎಸ್ಟೆಟ್ ದಂಧೆಯೇ ಕಾರಣ ಎಂಬ ಮಾತುಗಳು ಕೇಳಿ ಬಂದಿದ್ದವು. ಬಂಧಿತರಾದವರಲ್ಲಿ ಇಬ್ಬರು ಮೈಸೂರು ಜಿಲ್ಲೆಗೆ ಸೇರಿದ್ದವರಾಗಿದ್ದು, ಬಚ್ಚಾಖಾನ್ ಸಹಚರರು ಎಂದು ಪೊಲೀಸರಿಗೆ ಗೊತ್ತಾಗಿತ್ತು. ಇನ್ನೂ ಸುಫಾರಿ ಕೊಟ್ಟಿರುವವರಲ್ಲಿ ಬಚ್ಚಾ ಖಾನ್ ಪಾತ್ರ ಇದೆ ಎಂಬ ಮಾಹಿತಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ಮೈಸೂರು ಜೈಲಲ್ಲಿರುವ ಬಚ್ಚಾ ಖಾನ್‌ನನ್ನು ಇದೀಗ ಕಸ್ಟಡಿಗೆ ತೆಗೆದುಕೊಂಡು ಕರೆದುಕೊಂಡು ಬಂದಿದ್ದಾರೆ. ಇಲ್ಲಿನ ಠಾಣೆಯೊಂದರಲ್ಲಿ ಅವನನ್ನು ಇಟ್ಟು ವಿಚಾರಣೆ ನಡೆಸುತ್ತಿದ್ದಾರೆ. ಸುಫಾರಿ ಕೊಟ್ಟವರಾರಯರು? ಅದಕ್ಕೆ ಕಾರಣವೇನು? ಆತನ ಕೊಲೆಯಲ್ಲಿ ಬಚ್ಚಾ ಖಾನ್ ಪಾತ್ರ ಎಷ್ಟಿದೆ ಎಂಬುದನ್ನೆಲ್ಲ ವಿಚಾರಣೆಯಿಂದ ತಿಳಿದುಕೊಳ್ಳುವ ಪ್ರಯತ್ನದಲ್ಲಿ ಪೊಲೀಸರಿದ್ದಾರೆ.
ಹಳೇಹುಬ್ಬಳ್ಳಿ ಠಾಣೆಯ ಪಿಐ ಶಿವಾನಂದ ಕಮತಗಿ ಸೇರಿದಂತೆ ಮತ್ತಿತರರ ಪೊಲೀಸ್ ಅಧಿಕಾರಿಗಳ ತಂಡ ವಿಚಾರಣೆ ನಡೆಸುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.