ಹಿಂದೂ ಧರ್ಮದವನೆಂದು ಸುಳ್ಳು ಹೇಳಿ ಲಕ್ಷ್ಮಿ ಮದುವೆಯಾದ ಶಫಿ; ಮತಾಂತರ ಮಾಡಲು ನಿತ್ಯ ಕಿರುಕುಳ!

ಹಿಂದೂ ಎಂದು ನಂಬಿಸಿ ಯುವತಿಯನ್ನು ಪ್ರೀತಿಸಿ ಮದುವೆಯಾದ ವ್ಯಕ್ತಿಯೊಬ್ಬರು, ಮದುವೆಯ ನಂತರ ಬಲವಂತದ ಮತಾಂತರಕ್ಕೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು, ಮಹಿಳೆ ತನ್ನ ಪತಿ ಮತ್ತು ಅವರ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಾರೆ.

Hubballi muslim Shafi Ahmed married Lakshmi by lying about being Hindu sat

ಹುಬ್ಬಳ್ಳಿ (ಜ.13): ಕಳೆದ 10 ವರ್ಷಗಳ ಹಿಂದೆಯೇ ತಾನು ಹಿಂದೂ ಧರ್ಮದವನು ಎಂದು ಹೇಳಿಕೊಂಡು ಯುವತಿ ಲಕ್ಷ್ಮಿಯನ್ನು ಪ್ರೀತಿ ಮಾಡಿದ ಶಫೀ ಅಹ್ಮದ್ ಕಾನೂನಾತ್ಮಕವಾಗಿ ರಿಜಿಸ್ಟರ್ ಮದುವೆ ಆಗಿದ್ದಾರೆ. ಮನೆಯವರ ಒಪ್ಪಿಗೆ ಪಡೆಯಲು ಮತ್ತೊಮ್ಮೆ ಅದ್ಧೂರಿಯಾಗಿ ಮದುವೆಯಾದ ಶಫೀ ಅಹ್ಮದ್ ಇದೀಗ ಬಲವಂತದಿಂದ ನನ್ನನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂದು ಪತಿ ಹಾಗೂ ಕುಟುಂಬಸ್ಥರ ವಿರುದ್ಧ ಶಫಿ ಪತ್ನಿ ಮಹಾಲಕ್ಷ್ಮೀ ದೂರು ನೀಡಿದ್ದಾರೆ.
 
ಹೌದು, ಹುಬ್ಬಳ್ಳಿಯ ಮಹಿಳೆಯೊಬ್ಬರು ತನ್ನ ಪತಿಯೇ ನನ್ನನ್ನು ಬಲವಂತದಿಂದ ಮತಾಂತರ ಮಾಡುತ್ತಿದ್ದಾರೆ. ಇದಕ್ಕಾಗಿ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಾಲಕ್ಷ್ಮಿ ಎಂಬ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗಂಡ ಶಫೀ ಅಹ್ಮದ್ ವಿರುದ್ಧ ಆತನ ಪತ್ನಿ ಮಹಾಲಕ್ಷ್ಮಿ ದೂರು ನೀಡಿದ್ದು, ಕಿರುಕುಳ ನೀಡುತ್ತಿರುವ ಆರೋಪವನ್ನು ಮಾಡಿದ್ದಾರೆ. ಹುಬ್ಬಳ್ಳಿಯ ಮಂಟೂರು ರಸ್ತೆಯ ನಿವಾಸಿಗಳಾಗಿರುವ ದಂಪತಿಯ ಪೈಕಿ ಪತಿ ಶಫಿ‌ ಅಹ್ಮದ್ ಕರ್ನೂಲ್  ವಿರುದ್ಧ, ಮಹಾಪತ್ನಿ ಲಕ್ಷ್ಮೀ ವಯ್ಯಾಪುರಿ ಅವರು ಆರೋಪ ಮಾಡಿದ್ದಾರೆ. 

ತಾನು ಹಿಂದೂ ಧರ್ಮದವನು, ನನ್ನ ಹೆಸರು ಅನಿಲ್ ಎಂದು ಯುವತಿ ಲಕ್ಷ್ಮೀ ಎಂಬ ಯುವತಿಯನ್ನು ಶಫೀ ಅಹ್ಮದ್ ಪ್ರೀತಿ ಮಾಡಿದ್ದಾನೆ. ನಂತರ, ಮದುವೆ ಮಾಡಿಕೊಳ್ಳುವಂತೆ ಯುವತಿ ಕೇಳಿದಾದ ತಾನು ಇಸ್ಲಾಂ ಧರ್ಮದವನು ಎಂದು ಹೇಳಿದ್ದಾರೆ. ಒಮ್ಮೆ ಪ್ರೀತಿ ಮಾಡಿದ ನಂತರ ಯಾವುದೇ ಜಾತಿ-ಧರ್ಮ ಆಗಿದ್ದರೂ ಸರಿ ಮದುವೆ ಮಾಡಿಕೊಳ್ಳುವುದಾಗಿ ಒಪ್ಪಿದ ಲಕ್ಷ್ಮೀ ಅವರನ್ನು ಶಫೀ ಅಹಮದ್ 2014-15ರಲ್ಲಿ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದಾರೆ. ನಂತರ ಕಳೆದ 2017ರಲ್ಲಿ ಮನೆಯವರ ಒಪ್ಪಿಗೆ ಮೇರೆಗೆ ಅಧೀಕೃತವಾಗಿ ಲಕ್ಷ್ಮೀ ಹಾಗೂ ಶಫಿ ಅಹ್ಮದ್ ಕರ್ನೂಲ್ ಮದುವೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: 2 ಎಕರೆ ಆಸ್ತಿಗಾಗಿ ತಂದೆ-ತಾಯಿಯನ್ನೇ ಕೊಂದ ಪಾಪಿ ಮಗ!

ಈ ಶಫಿ ಅಹ್ಮದ್ ಕರ್ನೂಲ್ ಹುಬ್ಬಳ್ಳಿಯ ಕುಸುಗಲ್ ರಸ್ತೆಯ ಜನತಾ ಕಾಲೋನಿ‌ ನಿವಾಸಿ. ಇದೇ ಹುಬ್ಬಳ್ಳಿಯ ಮಂಟೂರು ರಸ್ತೆಯ ಶೀಲಾ ಕಾಲೋನಿಯ ನಿವಾಸಿ ಮಹಾಲಕ್ಷ್ಮೀ ವಯ್ಯಾಪುರಿ. ಈತ ನನಗೆ ಸುಳ್ಳು ಹೇಳಿ ಪ್ರತಿಸಿ ಮದುವೆಯಾಗಿದ್ದಾನೆ ಎಂದು ಲಕ್ಷ್ಮೀ ಆರೋಪ ಮಾಡಿದ್ದಾರೆ. ಮದುವೆಯಾದ ಬಳಿಕ‌ ತಮ್ಮ ಧರ್ಮಕ್ಕೆ ಮತಾಂತರವಾಗುವಂತೆ ಕಿರುಕುಳ ನೀಡುತ್ತಿದ್ದಾರೆ. ಮತಾಂತರವಾಗುವಂತೆ ದಿನನಿತ್ಯ ಕಿರುಕುಳ ನೀಡುತ್ತಿದ್ದು, ಪತಿ‌ ಶಫಿ‌ಅಹ್ಮದ್ ಅವರ ಮೇಲೆ ಕಾನೂನಾತ್ಮಕ ಕ್ರಮ ಜರುಗಿಸುವಂತೆ ಹುಬ್ಬಳ್ಳಿ ನಗರದ ಬೆಂಡಿಗೇರಿ‌ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದೀಗ ಪತಿ ಶಫಿ ಅಹ್ಮದ್‌ನ ಮತಾಂತರ ಕಿರುಕುಳದಿಂದ ಮುಕ್ತಿ ಕೊಡಿಸಬೇಕು ಲಕ್ಷ್ಮೀ ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios